ನವದೆಹಲಿ: ಓಪನ್ ಎಐನ ಚಾಟ್ಬಾಟ್ ‘ಚಾಟ್ಜಿಪಿಟಿ’ (ChatGPT) ಜಾಗತಿಕವಾಗಿ ತಾಂತ್ರಿಕ ತೊಂದರೆ ಎದುರಿಸಿದ್ದು, ಬಳಕೆದಾರರು ವೆಬ್ಸೈಟ್ ಮತ್ತು ಅಪ್ಲಿಕೇಷನ್ಗಳಲ್ಲಿ ಲಾಗ್ಇನ್ ಆಗಲಾಗದೆ ಪರದಾಡಿದರು.

ಭಾರತ ಮತ್ತು ಅಮೆರಿಕದಲ್ಲಿ ಅತಿ ಹೆಚ್ಚು ಬಳಕೆದಾರರು ಸಮಸ್ಯೆ ಎದುರಿಸಿದ್ದಾರೆ ಎಂದು ವರದಿಯಾಗಿದೆ.

ಭಾರತದಲ್ಲಿ ಮಾತ್ರ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ 800 ದೂರುಗಳು ದಾಖಲಾಗಿವೆ. ಶೇ 88ರಷ್ಟು ಜನರು ಚಾಟ್ಪಾಟ್ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ ಎಂದು ದೂರಿದ್ದಾರೆ.

ಚಾಟ್ಜಿಪಿಟಿ ಸ್ಥಗಿತಗೊಂಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಮೀಮ್ಸ್ಗಳು ಹರಿದಾಡಿವೆ.

ಚಾಟ್ಜಿಪಿಟಿ ಕಾರ್ಯ ಸ್ಥಗಿತಗೊಂಡಿದ್ದನ್ನು ಓಪನ್ಎಐ ಒಪ್ಪಿಕೊಂಡಿದೆ. ಚಾಟ್ಜಿಪಿಟಿ ಮತ್ತು ಅದರ ವಿಡಿಯೊ ಪ್ಲಾಟ್ಫಾರ್ಮ್ ಸೋರಾ ಎರಡರ ಮೇಲೂ ಪರಿಣಾಮ ಬೀರಿದೆ ಎಂದು ದೃಢಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.