ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ಬಳಕೆದಾರರಿಗೆ ‘ಫೇಸ್‌ ಸ್ಕ್ಯಾನ್‌’ ಕಡ್ಡಾಯ

ಸೈಬರ್‌ ಭದ್ರತೆಗೆ ಚೀನಾ ಹೊಸ ನೀತಿ
Last Updated 1 ಡಿಸೆಂಬರ್ 2019, 18:45 IST
ಅಕ್ಷರ ಗಾತ್ರ

ಬೀಜಿಂಗ್‌: ಹೊಸ ಮೊಬೈಲ್‌ ಖರೀದಿಸುವ ಗ್ರಾಹಕರಿಗೆ ‘ಫೇಸ್‌ ಸ್ಕ್ಯಾನ್‌’ ಅನ್ನು ಚೀನಾ ಕಡ್ಡಾಯಗೊಳಿಸಿದೆ.

ಸೈಬರ್‌ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಭಾನುವಾರದಿಂದಲೇ ಮೊಬೈಲ್ ಮಾರಾಟ ಅಂಗಡಿಗಳಲ್ಲಿ ಈ ನಿಯಮ ಜಾರಿಗೊಂಡಿದೆ ಎಂದು ಮಾಹಿತಿ ತಂತ್ರಜ್ಞಾನ ಪ್ರಾಧಿಕಾರ ತಿಳಿಸಿದೆ.

ಆನ್‌ಲೈನ್‌ನಲ್ಲಿ ನಾಗರಿಕರ ಹಕ್ಕುಗಳು ಮತ್ತು ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಕಳೆದ ಸೆಪ್ಟೆಂಬರ್‌ನಲ್ಲಿ ಚೀನಾದ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಅಧಿಸೂಚನೆಯನ್ನು ಹೊರಡಿಸಿತ್ತು. ಈ ಸೂಚನೆ ಅನ್ವಯ ಮೊಬೈಲ್‌ ಬಳಕೆದಾರರು ಸಿಮ್‌ ಪಡೆಯಲು ಹಾಗೂ ಮೊಬೈಲ್‌ ಖರೀದಿಸಲು ಫೇಸ್‌ ಸ್ಕ್ಯಾನ್‌ ಮಾಡಿಸುವುದು ಕಡ್ಡಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT