ಬಿಜೀಂಗ್: ವಿಶ್ವದ ಮೊದಲ ‘ಬೆಳಕು ಆಧಾರಿತ ಕ್ವಾಂಟಮ್ ಕಂಪ್ಯೂಟರ್’ ಅನ್ನು ಅಭಿವೃದ್ಧಿಪಡಿಸಿರುವುದಾಗಿ ಚೀನಾದ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ಈ ಕ್ವಾಂಟಮ್ ಕಂಪ್ಯೂಟರ್, ಈಗ ಬಳಕೆಯಲ್ಲಿರುವ ಸೂಪರ್ ಕಂಪ್ಯೂಟರ್ಗಿಂತ ಅತ್ಯಂತ ವೇಗವಾಗಿ ಸಮಸ್ಯೆಗಳನ್ನು ಪರಿಹರಿಸಲ್ಲದು. ಇದೊಂದು ಪ್ರಮುಖ ಸಾಧನೆಯಾಗಿದ್ದು, ಈ ಕಂಪ್ಯೂಟರ್ ಶಕ್ತಿಶಾಲಿ ಯಂತ್ರಗಳನ್ನು ವಿನ್ಯಾಸಗೊಳಿಸಲು ವಿಭಿನ್ನ ವಿಧಾನವನ್ನು ಒದಗಿಸುತ್ತದೆ ಎಂದು ಮಾಧ್ಯಮಗಳು ಶನಿವಾರ ವರದಿ ಮಾಡಿವೆ.

ಈ ಕ್ವಾಂಟಮ್ ಕಂಪ್ಯೂಟರ್ಗೆ ‘ಜಿಯುಝಾಂಗ್’ ಎಂದು ಹೆಸರಿಸಲಾಗಿದ್ದು, ಕಂಪ್ಯೂಟರ್ ತಂತ್ರಜ್ಞಾನ ಕ್ಷೇತ್ರದಲ್ಲಿ ಇದೊಂದು ಮಹತ್ವದ ಮೈಲುಗಲ್ಲು ಎಂದು ಸರ್ಕಾರಿ ಸ್ವಾಮ್ಯದ ಪತ್ರಿಕೆ ಚೀನಾ ಡೈಲಿ ವರದಿ ಮಾಡಿದೆ. ‘ಜಿಯುಝಾಂಗ್’ ಹೆಸರನ್ನು ಪ್ರಾಚೀನ ಚೀನಾದ ಗಣಿತ ಪಠ್ಯಪುಸ್ತಕದಿಂದ ತೆಗೆದುಕೊಳ್ಳಲಾಗಿದೆ.

ಈ ಕಂಪ್ಯೂಟರ್ ಪದಾರ್ಥ ವಿಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಔಷಧಿ ಕ್ಷೇತ್ರದಲ್ಲಿನ ಸಂಶೋಧನೆಗೆ ಕ್ವಾಂಟಮ್ ಕಂಪ್ಯೂಟರ್ ಮಹತ್ವದ ಪಾತ್ರ ವಹಿಸುವುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.