ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ColorOS 7 ಅನಾವರಣ: ಭಾರತೀಯ ಗ್ರಾಹಕರನ್ನು ಸೆಳೆಯಲು 'ಒಪ್ಪೊ'ದ ಹೊಸ ಒಎಸ್

Last Updated 26 ನವೆಂಬರ್ 2019, 12:15 IST
ಅಕ್ಷರ ಗಾತ್ರ

ನವದೆಹಲಿ: ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಒಪ್ಪೊ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸುವ ದೃಷ್ಟಿಯಿಂದ ಇಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಆಪರೇಟಿಂಗ್ ಸಿಸ್ಟಮ್ 'ಕಲರ್‌ಒಎಸ್‌ 7' ಅನ್ನು ಬಿಡುಗಡೆಗೊಳಿಸಿತು.

ಆ್ಯಂಡ್ರಾಯ್ಡ್‌ 10 ಆಧಾರಿತ ತನ್ನದೇ ಆಪರೇಟಿಂಗ್ ಸಿಸ್ಟಮ್‌ನ ನೂತನ ಆವೃತ್ತಿ ಕಲರ್‌ಒಎಸ್‌ ಅನ್ನು ಇದೇ ತಿಂಗಳು (ನವೆಂಬರ್ 20) ಚೀನಾದಲ್ಲಿ ಬಿಡುಗಡೆ ಮಾಡಿದ್ದ ಒಪ್ಪೊ, ಅದರ ಮುಂದುವರಿಕೆಯಾಗಿ ಕಲರ್‌ಒಎಸ್‌ 7(ColorOS 7) ಪರಿಚಯಿಸಿದೆ.

ಯುವ ಸಮುದಾಯದ ಸೆಲ್ಫಿ ಮೋಹವನ್ನು ಅಸ್ತ್ರವಾಗಿಸಿಕೊಂಡು ಸೆಲ್ಫಿ ತಂತ್ರಜ್ಞಾನಕ್ಕೇ ಹೆಚ್ಚು ಆದ್ಯತೆ ನೀಡಿ ಮಾರುಕಟ್ಟೆಯನ್ನು ಆಕರ್ಷಿಸಿದ್ದ ಒಪ್ಪೊ, ಇದೀಗ ಆಪರೇಟಿಂಗ್‌ ಅಭಿವೃದ್ಧಿಯೊಂದಿಗೆ ಕಾರ್ಯವಿಧಾನವನ್ನು ಮತ್ತಷ್ಟು ಸರಳಗೊಳಿಸಿದೆ. ಈ ಮೂಲಕ ವೇಗ ಹಾಗೂ ಯುಐಗೆ ಆದ್ಯತೆ ನೀಡಲಾಗಿದ್ದು, ಬಳಕೆದಾರರಿಗೆ ಆರಾಮದಾಯಕ ಮತ್ತು ಬಳಕೆ ಸ್ನೇಹಿ ಅನುಭವದ ಭರವಸೆ ನೀಡಿದೆ.

ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಒಪ್ಪೊ ಕಲರ್ ಒಎಸ್ಪ್ರಾಡಕ್ಟ್ ಮ್ಯಾನೇಜರ್ ವಾಟ್ಕಿನ್ ಸಾಂಗ್'ಭಾರತದಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರು ಸಾಕಷ್ಟು ಸಕ್ರಿಯರಾಗಿದ್ದಾರೆ. ಅದನ್ನು ಗಮನದಲ್ಲಿರಿಸಿ ಕಲರ್ ಒಎಸ್ 7 ಅನ್ನು ಭಾರತದಲ್ಲಿ ಪರಿಚಯಿಸುತ್ತಿದ್ದೇವೆ. ವಿನ್ಯಾಸದಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಲಾಗಿದೆ. ಸರಳ ಬಳಕೆ, ವೇಗದ ಕಾರ್ಯಾಚರಣೆ, ಹಿತಾನುಭವಕ್ಕೆ ಒತ್ತು ನೀಡಲಾಗಿದೆ' ಎಂದು ತಿಳಿಸಿದರು.

ಕಲರ್‌ಒಎಸ್‌ 7ನಲ್ಲಿ ಏನಿದೆ?

* ಆಂಡ್ರಾಯ್ಡ್ 10 ಆಧಾರಿತ ಒಎಸ್ ಇದಾಗಿದೆ. ಯಾವುದೇ ಆ್ಯಪ್ ಕಾರ್ಯಾಚರಣೆ ನಿಧಾನವಾಗದಂತೆ ರ್‍ಯಾಮ್‌ ನಿರ್ವಹಣೆಯನ್ನು ಸುಧಾರಿತ ಮಟ್ಟದಲ್ಲಿ ವಿನ್ಯಾಸ ಮಾಡಲಾಗಿದೆ. ಯೂಸರ್ ಇಂಟರ್ಫೇಸ್ ಅನ್ನು (ಬಳಕೆದಾರರು ಹಾಗೂ ಸಾಧನದ ಸಂವಹನದ ಗುಣಮಟ್ಟ, ಬಳಕೆ ವಿಧಾನಗಳ ವಿನ್ಯಾಸ) ಮೇಲ್ದರ್ಜೆಗೇರಿಸಲಾಗಿದೆ.

* ವಿಶುವಲ್-ಸೌಂಡ್ ಎಫೆಕ್ಟ್‌ಗೆ ಹೆಚ್ಚು ಒತ್ತು ನೀಡಲಾಗಿದೆ. ಲೈವ್ ವಾಲ್ ಪೇಪರ್, ಡೈನಾಮಿಕ್ ವಾಲ್ ಪೇಪರ್‌ಗಳು ಬಣ್ಣ ಮತ್ತು ವಿನ್ಯಾಸದ ಮೂಲಕ ಆಕರ್ಷಿಸುತ್ತವೆ. ಬಗೆಬಗೆಯ ಶಬ್ದ ವಿನ್ಯಾಸ ಮುದ ನೀಡುತ್ತವೆ.

* ಅಕ್ಷರ, ಚಿತ್ರ, ಚಿನ್ಹೆಗಳನ್ನೊಳಗೊಂಡ ಡಿಸ್‌ಪ್ಲೇ ಅನ್ನು ಅಗತ್ಯಾನುಸಾರ ನಿಯಂತ್ರಿಸಬಹುದು. ಮಾತ್ರವಲ್ಲದೆ ವಿಡಿಯೊಗಳನ್ನು ಎಡಿಟ್ ಮಾಡಿಕೊಳ್ಳಲು 'ಸೊಲೂಪ್' ಸ್ಮಾರ್ಟ್ ಎಡಿಟರ್ ಸೇರಿಸಲಾಗಿದೆ.

* ಕೃತಕ ಬುದ್ಧಿಮತ್ತೆ ಆಧಾರಿತ ತನ್ನದೇ ವಾಯ್ಸ್ ಅಸಿಸ್ಟೆಂಟ್ ಇರಲಿದ್ದು, ಕ್ಯಾಮೆರಾದಲ್ಲಿ ನೈಟ್ ಮೋಡ್, ವಿಶೇಷ ಫೋಕಸ್, ವಿಡಿಯೊ ಬ್ಲರ್, ವಾಯ್ಸ್ ರೆಡ್ಯೂಸ್ ಸೇರಿ ಮತ್ತಷ್ಟು ಆಯ್ಕೆಗಳು ಇವೆ.

ಈ ಎಲ್ಲ ವೈಶಿಷ್ಟ್ಯಗಳು ಒಪ್ಪೊ ಹಾಗೂ ರಿಯಲ್ಮಿ ಸ್ಮಾರ್ಟ್ ಫೋನ್‌ಗಳಲ್ಲಿ ಲಭ್ಯವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT