ಸೋಮವಾರ, ಸೆಪ್ಟೆಂಬರ್ 27, 2021
28 °C

ಆಕರ್ಷಕ ವಿನ್ಯಾಸದ ಫಿಟ್ನೆಸ್ ಟ್ರ್ಯಾಕರ್ ಪರಿಚಯಿಸಿದ ಫಿಟ್‌ಬಿಟ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Fitbit Fitness Tracker

ಬೆಂಗಳೂರು: ಯುವಜನತೆಯಲ್ಲಿ ಫಿಟ್ನೆಸ್ ಕುರಿತ ಕಾಳಜಿ ಹೆಚ್ಚುತ್ತಿರುವ ಬೆನ್ನಲ್ಲೇ ಹೊಸ ಹೊಸ ಮಾದರಿಯ ಗ್ಯಾಜೆಟ್‌ಗಳು ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿವೆ.

ಫಿಟ್ನೆಸ್ ಮತ್ತು ಸ್ಮಾರ್ಟ್‌ಗ್ಯಾಜೆಟ್ ತಯಾರಿಕ ಸಂಸ್ಥೆ ಫಿಟ್‌ಬಿಟ್, ದೇಶದಲ್ಲಿ ನೂತನ ಮಾದರಿಯ ಫಿಟ್ನೆಸ್ ಟ್ರ್ಯಾಕರ್ ಪರಿಚಯಿಸಿದೆ.

ಫಿಟ್‌ಬಿಟ್ ಲಕ್ಸ್ ಮತ್ತು ಫಿಟ್‌ಬಿಟ್ ಲಕ್ಸ್ ಸ್ಪೆಶಲ್ ಎಡಿಶನ್ ಎಂಬ ಎರಡು ಮಾದರಿಗಳು ದೇಶದಲ್ಲಿ ಬಿಡುಗಡೆಯಾಗಿದ್ದು, ಆಭರಣ ರೀತಿಯಲ್ಲಿ ಧರಿಸಬಹುದಾದ ವಿನ್ಯಾಸ ಹೊಂದಿವೆ.

ಹೃದಯ ಬಡಿತ, ದೇಹದ ತಾಪಮಾನದಲ್ಲಿನ ವ್ಯತ್ಯಾಸ ಸಹಿತ ವಿವಿಧ ಆಕರ್ಷಕ ಫೀಚರ್‌ಗಳನ್ನು ಹೊಸ ಫಿಟ್‌ಬಿಟ್ ಲಕ್ಸ್ ಆವೃತ್ತಿ ಹೊಂದಿದೆ.

ಬೆಲೆ ವಿವರ

ಫಿಟ್‌ಬಿಟ್ ಲಕ್ಸ್, ದೇಶದಲ್ಲಿ ₹10,999 ದರ ಹೊಂದಿದ್ದು, ಮೂರು ಆವೃತ್ತಿಗಳಲ್ಲಿ ಲಭ್ಯವಿದೆ.

ಫಿಟ್‌ಬಿಟ್ ಲಕ್ಸ್ ಸ್ಪೆಶಲ್ ಎಡಿಶನ್ ಬೆಲೆ ₹17,999 ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು