ಮಂಗಳವಾರ, ಡಿಸೆಂಬರ್ 1, 2020
26 °C

ಗಾರ್ಮಿನ್‌ ಇಂಡಿಯಾದ ವೆನ್ಯು ಎಸ್‌ಕ್ಯು ಸ್ಮಾರ್ಟ್‌ವಾಚ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವೆನ್ಯು ಎಸ್‌ಕ್ಯು ಬೆಲೆ ₹ 21,090 ಮತ್ತು ವೆನ್ಯು ಎಸ್‌ಕ್ಯು ಮ್ಯೂಸಿಕ್‌ ಬೆಲೆ ₹ 26,290 ಇದೆ. ಆಂಡ್ರಾಯ್ಡ್‌ ಮತ್ತು ಐಒಎಸ್‌ ಸಾಧನಗಳಿಗೆ ಬೆಂಬಲಿಸುತ್ತದೆ.

ಬಳಕೆದಾರರ ಆರೋಗ್ಯ ಮತ್ತು ಫೀಟ್‌ನೆಸ್‌ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ವೆನ್ಯು ಎಸ್‌ಕ್ಯು ಶ್ರೇಣಿಯ ಸ್ಮಾರ್ಟ್‌ವಾಚ್‌ಗಳು ಉಪಯುಕ್ತವಾಗಿವೆ ಎಂದು ಕಂಪನಿ ತಿಳಿಸಿದೆ.

ಯೋಗ, ಓಟ, ಈಜು, ಸೈಕ್ಲಿಂಗ್‌, ಗಾಲ್ಫ್‌ ಸೇರಿದಂತೆ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳ 20ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಆ್ಯಪ್‌ಗಳನ್ನು ಒಳಗೊಂಡಿದೆ. ಮೊಬೈಲ್‌ ಫೋನ್‌ ನೆರವಿಲ್ಲದೆ ಸಂಗೀತ ಆಲಿಸಬಹುದಾದ, ವಾಚ್‌ನಲ್ಲಿಯೇ ಸಂಗೀತ ಸ್ಟೋರ್‌ ಮಾಡುವ ಸೌಲಭ್ಯ ಒಳಗೊಂಡಿದೆ. ಸ್ಮಾರ್ಟ್‌ವಾಚ್‌ ಮೋಡ್‌ನಲ್ಲಿ ಬ್ಯಾಟರಿ 6 ದಿನಗಳವರೆಗೆ ಹಾಗೂ ಜಿಪಿಎಸ್‌ ಮೋಡ್‌ನಲ್ಲಿ 14 ಗಂಟೆಗಳವರೆಗೆ ಬಾಳಿಕೆ ಬರಲಿದೆ ಎಂದು ಕಂಪನಿ ಹೇಳಿದೆ.

‘ಶ್ರೇಷ್ಠ ದರ್ಜೆಯ ಉತ್ಪನ್ನ ಮತ್ತು ಆಧುನಿಕ ತಂತ್ರಜ್ಞಾನ ಆವಿಷ್ಕಾರಗಳನ್ನು ಬಳಸಿಕೊಂಡು ನಮ್ಮ ಗ್ರಾಹಕರ ಅಗತ್ಯಗಳನ್ನು ಪೂರೈಸಲು ನಾವು ಸದಾ ಸಿದ್ಧರಿರುತ್ತೇವೆ. ವೆನ್ಯು ಎಸ್‌ಕ್ಯು ಸ್ಮಾರ್ಟ್‌ವಾಚ್‌ಗಳ ಮೂಲಕ ನಾವು ಹೊಸ ಮಾರುಕಟ್ಟೆ ಪ್ರವೇಶಿಸಿದ್ದೇವೆ.  ಹಬ್ಬಗಳ ಸಂದರ್ಭದಲ್ಲಿ ಇದನ್ನು ಪರಿಚಯಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ’ ಎಂದು ಗಾರ್ಮಿನ್‌ ಇಂಡಿಯಾದ ನಿರ್ದೇಶಕ ಅಲಿ ರಿಜ್ವಿ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು