ಶುಕ್ರವಾರ, ಆಗಸ್ಟ್ 6, 2021
22 °C

ದೇಶದ ಮಾರುಕಟ್ಟೆಗೆ ಆಕರ್ಷಕ ಸ್ಮಾರ್ಟ್‌ವಾಚ್ ಪರಿಚಯಿಸಿದ ಗಾರ್ಮಿನ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Garmin Web

ಬೆಂಗಳೂರು: ಸ್ಮಾರ್ಟ್‌ವಾಚ್ ಮತ್ತು ಗ್ಯಾಜೆಟ್ ತಯಾರಿಕ ಕಂಪನಿ ಗಾರ್ಮಿನ್, ದೇಶದ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ವಾಚ್ ಪರಿಚಯಿಸಿದೆ.

ಗಾರ್ಮಿನ್ ಫೋರ್‌ರನ್ನರ್ 55, 1.04 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 37 ಗ್ರಾಂ ತೂಕವಿದೆ. ಅಲ್ಲದೆ, ಒಮ್ಮೆ ಚಾರ್ಜ್ ಮಾಡಿದರೆ ಜಿಪಿಎಸ್ ಇಲ್ಲದೆ ಎರಡು ವಾರ ಕಾಲ ಬಳಕೆ ಮಾಡಬಹುದು ಎಂದು ಗಾರ್ಮಿನ್ ಹೇಳಿದೆ.

ಫಿಟ್ನೆಸ್ ಕುರಿತು ಹೆಚ್ಚಿನ ಕಾಳಜಿ ಹೊಂದಿರುವ ಮತ್ತು ಓಟಗಾರರಿಗೆ ಈ ಮಾದರಿ ಸೂಕ್ತವಾಗಿದ್ದು, ವಿವಿಧ ರೀತಿಯ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುತ್ತದೆ ಎಂದು ಕಂಪನಿ ತಿಳಿಸಿದೆ.

ಹೊಸ ಗಾರ್ಮಿನ್ ಫೋರ್‌ರನ್ನರ್ 55, ಕಪ್ಪು, ಅಕ್ವಾ ಮತ್ತು ಮಾಂಟೆರಾ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕವೂ ದೊರೆಯಲಿದ್ದು, ₹20,990 ದರ ಹೊಂದಿದೆ ಎಂದು ಗಾರ್ಮಿನ್ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು