ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Gmail Mobile App ಬಳಕೆದಾರರ ಬಹುಬೇಡಿಕೆ ಈಡೇರಿಸಿದ ಗೂಗಲ್

ಗೂಗಲ್‌ನ ಅತ್ಯಂತ ಪ್ರಮುಖ ಉತ್ಪನ್ನವಾಗಿರುವ Gmail Mobile App ಗಾಗಿ ಬಹುಬೇಡಿಕೆಯ ಫೀಚರ್‌ ಒಂದನ್ನು ಗೂಗಲ್ ಇದೀಗ ಒದಗಿಸಿದೆ.
Published 9 ಆಗಸ್ಟ್ 2023, 6:44 IST
Last Updated 9 ಆಗಸ್ಟ್ 2023, 6:44 IST
ಅಕ್ಷರ ಗಾತ್ರ

ಸ್ಯಾನ್‌ಫ್ರಾನ್ಸಿಸ್ಕೊ: ಟೆಕ್ ದೈತ್ಯ ಗೂಗಲ್ ಕಂಪನಿ ಕಾಲಕಾಲಕ್ಕೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ತನ್ನ ಉತ್ಪನ್ನಗಳನ್ನು ಪರಿಷ್ಕರಿಸಿ ಬಳಕೆಗೆ ಬಿಡುವುದರಲ್ಲಿ ಸದಾ ಮುಂದು.

ಗೂಗಲ್‌ನ ಅತ್ಯಂತ ಪ್ರಮುಖ ಉತ್ಪನ್ನವಾಗಿರುವ Gmail Mobile App ಗಾಗಿ ಬಹುಬೇಡಿಕೆಯ ಫೀಚರ್‌ ಒಂದನ್ನು ಗೂಗಲ್ ಇದೀಗ ಒದಗಿಸಿದೆ.

ಭಾಷಾಂತರ ಆಯ್ಕೆ (ಗೂಗಲ್ ಟ್ರಾನ್ಸ್‌ಲೇಟ್) ಇನ್ಮುಂದೆ Gmail Appನಲ್ಲಿ ನೇರವಾಗಿ ಸಿಗಲಿದೆ ಎಂದು ಗೂಗಲ್ ಹೇಳಿದೆ.

ಬಳಕೆದಾರರು ತಮಗೆ ಬಂದ ಮೇಲ್‌ಗಳನ್ನು ತಮಗೆ ಬೇಕಾದ ಭಾಷೆಯಲ್ಲಿ ಅಲ್ಲಿಯೇ ಬದಲಾಯಿಸಿಕೊಂಡು ಓದಬಹುದು, ಹಾಗೂ ಮೇಲ್ ಕಳಿಸುವಾಗ ಬೇಕಾದರೆ ಭಾಷೆ ಬದಲಾಯಿಸಿಕೊಳ್ಳಬಹುದು. ಇಷ್ಟುದಿನ ಇದು Gmail App ನಲ್ಲಿ ನೇರವಾಗಿ ಸಿಗುತ್ತಿರಲಿಲ್ಲ. ಈ ಫೀಚರ್ ಒದಗಿಸಿ ಕೊಡುವಂತೆ ಸಾಕಷ್ಟು ಬೇಡಿಕೆಯಿತ್ತು ಎಂದು ಕಂಪನಿ ಹೇಳಿದೆ.

ಮೇಲ್ ಕಳಿಸುವಾಗ ಅಥವಾ ಓದುವಾಗ ಕೇವಲ Translate ಆಯ್ಕೆ ಮಾಡಿದರೇ ಸಾಕು. ಲಭ್ಯವಿರುವ ಎಲ್ಲ ಭಾಷೆಗಳಲ್ಲಿ ಓದಬಹುದು, ಬದಲಾಯಿಸಬಹುದು.

ಅಲ್ಲದೇ ಈ ಫೀಚರ್ ಬಳಸುವಾಗ ಬಳಕೆದಾರರು ತಮಗೆ ಬೇಕಾದ ಭಾಷೆಗಳಲ್ಲಿ ಸೇವೆ ಲಭಿಸುವಂತೆ ಆಯ್ಕೆಮಾಡಿಕೊಳ್ಳಬಹುದಾಗಿದೆ. ಅಂದರೆ ಮ್ಯಾನುವಲ್‌ ಆಗಿ Translate ಆಯ್ಕೆಯನ್ನು ನಿಭಾಯಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT