ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಡ್ರಾಯ್ಡ್‌ಗೆ ಪರ್ಯಾಯ ಹುವಾವೆಯ ಹಾಮನಿ ಒಎಸ್

Last Updated 28 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಆಪರೇಟಿಂಗ್‌ ಸಿಸ್ಟಂ (ಒಎಸ್‌) ಅಂದಾಕ್ಷಣವೇ ಆಂಡ್ರಾಯ್ಡ್‌ ಕಣ್ಮುಂದೆ ಬರುತ್ತದೆ. ಜಗತ್ತಿನಾದ್ಯಂತ250 ಕೋಟಿಗೂ ಅಧಿಕ ಹ್ಯಾಂಡ್‌ಸೆಟ್‌ಗಳಿಗೆ ಇದು ಜೀವಾಳ.

ಆ್ಯಪಲ್‌ ಕಂಪನಿಯನ್ನು ಹೊರತುಪಡಿಸಿದರೆ, ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಇದರಿಂದಲೇ ಕಾರ್ಯಾಚರಿಸುತ್ತಿವೆ. ಇದರಲ್ಲಿ ಚೀನಾದ ಅತಿದೊಡ್ಡ ಸ್ಮಾರ್ಟ್‌ಫೋನ್‌ ಮಾರಾಟ ಕಂಪನಿ ಹುವಾವೆ ಸಹ ಸೇರಿಕೊಂಡಿದೆ.

ಅಮೆರಿಕ ಮತ್ತು ಚೀನಾ ಮಧ್ಯೆ ವಾಣಿಜ್ಯ ಸಮರ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಚೀನಾದ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಹುವಾವೆ ಸಹ ಇದರ ಪರಿಣಾಮಗಳನ್ನು ಎದುರಿಸುತ್ತಿದೆ. ಟ್ರಂಪ್‌ ಆಡಳಿತವು ಈ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಹೀಗಾಗಿ ಹುವಾವೆ ಹ್ಯಾಂಡ್‌ಸೆಟ್‌ಗಳಿಗೆ ಆಂಡ್ರಾಯ್ಡ್‌ ಒಎಸ್‌ ಬಳಸುವುದಕ್ಕೆ ಅಮೆರಿಕ ನಿಷೇಧ ಹೇರುವ ಸಾಧ್ಯತೆ ಇದೆ. ಹೀಗಾದರೆ, ಗೂಗಲ್ ಪ್ಲೇ ಸ್ಟೋರ್‌ ಸಹ ಬಳಸಲು ಆಗುವುದಿಲ್ಲ.

ಗೂಗಲ್‌ ಕಂಪನಿ ಸಹ ಹುವಾವೆ ಜತೆಗಿನ ಒಪ್ಪಂದ ಮುಂದುವರಿಸುವ ಆಸಕ್ತಿ ತೋರಿಸುತ್ತಿಲ್ಲ. ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದ ಆಗಸ್ಟ್‌ 19ಕ್ಕೆ ಕೊನೆಗೊಂಡಿದೆ. ಹೀಗಾಗಿ ಹೊಸದಾಗಿ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಹೇಳುತ್ತಿದೆ. ಆದರೆ, ಸದ್ಯದ ಮಟ್ಟಿಗೆ ಅಪ್‌ಡೇಟ್‌ ಮತ್ತು ಪ್ಯಾಚ್‌ಗಳನ್ನು ನೀಡಲಾಗುವುದು ಎಂದು ತಿಳಿಸಿದೆ.

ಇತ್ತೀಚೆಗೆ ನಡೆದ ಚೀನಾದ ಡೆವಲಪರ್‌ ಕಾನ್ಫರೆನ್ಸ್‌ನಲ್ಲಿ ಆಂಡ್ರಾಯ್ಡ್‌ ಕ್ಯು ಆಧಾರಿತ ಇಎಂಯುಐ 10 ಸಾಫ್ಟ್‌ವೇರ್‌ ಅನ್ನು ಕಂಪನಿ ಬಿಡುಗಡೆ ಮಾಡಿತ್ತು. ಅದೇ ಸಂದರ್ಭದಲ್ಲಿ ಸಂಪೂರ್ಣವಾಗಿ ಹೊಸದಾದ ತನ್ನದೇ ಕಾರ್ಯಾಚರಣೆ ವ್ಯವಸ್ಥೆ ‘Harmony’ ಸಹ ಪರಿಚಯಿಸಿತ್ತು. ಗೂಗಲ್‌ ಸಾಫ್ಟ್‌ವೇರ್‌ ಬಳಸಲು ಸಾಧ್ಯವಾಗದೇ ಇದ್ದಲ್ಲಿ ಇದನ್ನು ಬಳಸುವುದಾಗಿ ಕಂಪನಿ ಘೋಷಿಸಿದೆ.

ತನ್ನಹೊಸ ಮಾದರಿ ಹುವಾವೆ ಮೇಟ್‌ 30 ಮತ್ತು 30 ಪ್ರೊದಲ್ಲಿ ಆಂಡ್ರಾಯ್ಡ್‌ ಮೂಲಕವೇ ಕಾರ್ಯಾಚರಿಸಲಿದೆ. ಆದರೆ, ಹಾಮನಿ ಒಎಸ್‌ ಇರುವ ಸ್ಮಾರ್ಟ್‌ಪೋನ್‌ ಮಾರುಕಟ್ಟೆಗೆ ತರುವ ಸುಳಿವು ನೀಡಿದೆ. ಒಟ್ಟಿನಲ್ಲಿ ಆಂಡ್ರಾಯ್ಡ್‌ ಒಎಸ್‌ ಮೇಲಿನ ಅವಲಂಬನೆತಪ್ಪಿಸಿಕೊಳ್ಳಲು ಕಂಪನಿ ದಿಟ್ಟ ಹೆಜ್ಜೆ ಇಟ್ಟಿದೆ. ಗ್ರಾಹಕರು ಹೊಸ ಒಎಸ್‌ ಅನ್ನು ಯಾವ ರೀತಿ ಸ್ವೀಕರಿಸಲಿದ್ದಾರೆ ಎನ್ನುವುದು ಕಾದು ನೋಡಬೇಕಿದೆ.

ಸಾಮರ್ಥ್ಯ, ವಿದ್ಯುತ್‌ ಬಳಕೆ ಹೀಗೆ ಎಲ್ಲಾ ರೀತಿಯಲ್ಲಿಯೂ ಆಂಡ್ರಾಯ್ಡ್‌ ಮತ್ತು ಐಒಎಸ್‌ಗಿಂತಲೂ ಉತ್ತಮವಾಗಿದೆ ಎನ್ನುವುದು ಕಂಪನಿ ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT