ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ: ಸ್ಮಾರ್ಟ್ ಸ್ಪೀಕರ್ ಲೋಕದಲ್ಲಿ...

Last Updated 23 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಸ್ಮಾರ್ಟ್ ತಂತ್ರಜ್ಞಾನದಿಂದ ಜನರು ವಿವಿಧ ಕೆಲಸ ಕಾರ್ಯಗಳನ್ನು ಸುಲಭವಾಗಿ ಸ್ಮಾರ್ಟ್ ಆಗಿ ಮಾಡುತ್ತಿದ್ದಾರೆ. ಬೆಳಗೆದ್ದು ರಾತ್ರಿ ಮಲಗುವವರೆಗೆ ವೈಯಕ್ತಿಕ ಮತ್ತು ಕಚೇರಿ ಕೆಲಸಕ್ಕೆ ಪೂರಕವಾಗುವಂತೆ ಜನರು ಸ್ಮಾರ್ಟ್ ಗ್ಯಾಜೆಟ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ಪೈಕಿ ಹಲವು ವಿಶೇಷತೆ ಹೊಂದಿರುವ ಗ್ಯಾಜೆಟ್ ಎಂದರೆ ಅದು ಸ್ಮಾರ್ಟ್ ಸ್ಪೀಕರ್.

ಸ್ಮಾರ್ಟ್ ಸ್ಪೀಕರ್ ಮಾರುಕಟ್ಟೆಯಲ್ಲಿ ವಿವಿಧ ಮಾದರಿಗಳು ಇಂದು ಲಭ್ಯವಿದೆ. ಗೂಗಲ್ ಹೋಮ್, ಅಮೆಜಾನ್ ಅಲೆಕ್ಸಾ ಮತ್ತು ಆ್ಯಪಲ್ ಹೋಮ್‌ಪಾಡ್ ಇದರಲ್ಲಿ ಪ್ರಮುಖವಾದವುಗಳು.

ಗೂಗಲ್ ಬಳಕೆದಾರರಿಗೆ ಹೋಮ್ ಹೆಸರಿನಲ್ಲಿ ವಿವಿಧ ವಿನ್ಯಾಸ ಮತ್ತು ಗಾತ್ರದ ಸ್ಮಾರ್ಟ್ ಸ್ಪೀಕರ್‌ಗಳನ್ನು ಒದಗಿಸುತ್ತದೆ. ಅಮೆಜಾನ್, ಅಲೆಕ್ಸಾ ಹೆಸರಿನಲ್ಲಿ ಹಲವು ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆ್ಯಪಲ್ ಹೋಮ್‌ಪಾಡ್ ಹೆಸರಿನ ಸ್ಮಾರ್ಟ್ ಸ್ಪೀಕರ್ ಪರಿಚಯಿಸಿತ್ತು. ನಂತರದಲ್ಲಿ ಹೋಮ್‌ಪಾಡ್ ಮಿನಿ ಎಂಬ ಪುಟ್ಟ ಸ್ಮಾರ್ಟ್ ಸ್ಪೀಕರ್ ಅನ್ನು ಪರಿಚಯಿಸಿದೆ.

ಅಮೆಜಾನ್ ಅಲೆಕ್ಸಾ ಭಾರತದಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯಾಚರಿಸುತ್ತಿದೆ.ಇದು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಗೂಗಲ್ ಕೂಡ ಹಿಂದಿ ಮತ್ತು ಇಂಗ್ಲಿಷ್‌‌ಗೆ ಬೆಂಬಲ ನೀಡುತ್ತದೆ.

ನ್ಯೂಸ್ ಕೇಳಲು, ಪಾಡ್‌ಕಾಸ್ಟ್ ಆಲಿಸಲು, ಸಂಗೀತ, ಅಲಾರ್ಮ್, ನೋಟ್ಸ್, ರಿಮೈಂಡರ್, ಮನೆಯಲ್ಲಿನ ಸ್ಮಾರ್ಟ್‌ ಉಪಕರಣಗಳನ್ನು ನಿಯಂತ್ರಿಸಲು ಸ್ಮಾರ್ಟ್ ಸ್ಪೀಕರ್ ಬಳಕೆಯಾಗುತ್ತದೆ. ಸ್ಮಾರ್ಟ್ ಲೈಟ್, ಸ್ಮಾರ್ಟ್ ಫ್ಯಾನ್ ಇದ್ದರೆ ಕೂಡ ಸ್ಮಾರ್ಟ್ ಸ್ಪೀಕರ್ ಸಂಪರ್ಕಿಸಿ, ನಿಮ್ಮ ಧ್ವನಿಯ ಮೂಲಕವೇ ನಿಯಂತ್ರಿಸಬಹುದು.

ಗೂಗಲ್ ಹೋಮ್ ಸ್ಮಾರ್ಟ್ ಸ್ಪೀಕರ್‌ಗಳಲ್ಲಿ ಪ್ರೀಮಿಯಂ ಫೀಚರ್ ಬಳಸಬೇಕಾದರೆ ನಿಮ್ಮಲ್ಲಿ ಯೂಟ್ಯೂಬ್ ಪ್ರೀಮಿಯಂ ಪ್ಲ್ಯಾನ್ ಇದ್ದರೆ ಉತ್ತಮ. ಅದೇ ರೀತಿಯಲ್ಲಿ ಅಮೆಜಾನ್ ಅಲೆಕ್ಸಾದಲ್ಲಿ ಅಮೆಜಾನ್ ಪ್ರೈಮ್ ಮ್ಯೂಸಿಕ್ ಚಂದಾದಾರಿಕೆ ಇದ್ದರೆ ಹೆಚ್ಚು ಅನುಕೂಲ. ಅದೇ ರೀತಿಯಲ್ಲಿ ಆ್ಯಪಲ್ ಮ್ಯೂಸಿಕ್ ಚಂದಾ ಹೊಂದಿರುವವರು ಆ್ಯಪಲ್ ಹೋಮ್ ಪಾಡ್‌ನಲ್ಲಿ ವಿವಿಧ ರೀತಿಯ ಸಂಗೀತವನ್ನು ಸವಿಯಬಹುದು.

ಮನೆಯಲ್ಲಿ ಒಂಟಿಯಾಗಿರುವವರು, ಹಿರಿಯರು ಮತ್ತು ಮಕ್ಕಳಿಗೆ ಸ್ಮಾರ್ಟ್ ಸ್ಪೀಕರ್‌ಗಳು ವಿವಿಧ ರೀತಿಯಲ್ಲಿ ನೆರವಾಗುತ್ತವೆ. ಸ್ಮಾರ್ಟ್‌ಫೋನ್ ಅನ್ನು ಸ್ಮಾರ್ಟ್‌ಸ್ಪೀಕರ್‌ಗೆ ಸಂಪರ್ಕಿಸಿದರೆ ಅದರ ಮೂಲಕವೇ ಕರೆ, ಮೆಸೇಜ್ ನಿರ್ವಹಣೆಯನ್ನೂ ಮಾಡಬಹುದು. ಕ್ಯಾಲೆಂಡರ್, ಹವಾಮಾನ ಮತ್ತು ಟ್ರಾಫಿಕ್ ಅಪ್‌ಡೇಟ್‌ಗಳನ್ನು ಕೂಡ ಸ್ಮಾರ್ಟ್‌ಸ್ಪೀಕರ್ ಮೂಲಕ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT