ಗುರುವಾರ , ಅಕ್ಟೋಬರ್ 21, 2021
22 °C

ದೇಶದ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದ ಇನ್ಫಿನಿಕ್ಸ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Infinix India

ಬೆಂಗಳೂರು: ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಮತ್ತೆ ಎರಡು ನೂತನ ಗ್ಯಾಜೆಟ್ ಪರಿಚಯಿಸುವ ಮೂಲಕ ಇನ್ಫಿನಿಕ್ಸ್ ಸದ್ದು ಮಾಡಿದೆ.

ಬಜೆಟ್ ದರಕ್ಕೆ ಉತ್ತಮ ಫೀಚರ್ ನೀಡುವ ಮೂಲಕ ಇನ್ಫಿನಿಕ್ಸ್ ಜನಪ್ರಿಯತೆ ಗಳಿಸಿದೆ.

ಇನ್ಫಿನಿಕ್ಸ್ ಹಾಟ್ 11 ಮತ್ತು ಇನ್ಫಿನಿಕ್ಸ್ ಹಾಟ್ 11ಎಸ್ ಎಂಬ ಎರಡು ಮಾದರಿಗಳು ಭಾರತದಲ್ಲಿ ಬಿಡುಗಡೆಯಾಗಿದ್ದು, ಫ್ಲಿಪ್‌ಕಾರ್ಟ್ ಮೂಲಕ ದೊರೆಯಲಿದೆ.

ಇನ್ಫಿನಿಕ್ಸ್ ಹಾಟ್ 11 ಮತ್ತು ಇನ್ಫಿನಿಕ್ಸ್ ಹಾಟ್ 11ಎಸ್  ಎರಡೂ ಸ್ಮಾರ್ಟ್‌ಫೋನ್‌ಗಳು 4 GB ಮತ್ತು 64 GB ಎಂಬ ಏಕೈಕ ಸ್ಟೋರೇಜ್ ಆವೃತ್ತಿ ಮೂಲಕ ಲಭ್ಯವಿದ್ದು, ಕ್ರಮವಾಗಿ ₹8,999 ಮತ್ತು ₹10,999 ದರ ಹೊಂದಿವೆ.

ಇನ್ಫಿನಿಕ್ಸ್ ಹಾಟ್ 11, 6.6 ಇಂಚಿನ ಫುಲ್‌ ಎಚ್‌ಡಿ+ ಡಿಸ್‌ಪ್ಲೇ, 13+13 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ, 8 ಮೆಗಾಪಿಕ್ಸೆಲ್ ಸೆಲ್ಫಿ, 5200mAh ಬ್ಯಾಟರಿ ಹೊಂದಿದೆ.

ಇನ್ಫಿನಿಕ್ಸ್ ಹಾಟ್ 11ಎಸ್, 6.78 ಇಂಚಿನ ಡಿಸ್‌ಪ್ಲೇ, 50+2+2 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ, 8 ಮೆಗಾಪಿಕ್ಸೆಲ್ ಸೆಲ್ಫಿ ಹೊಂದಿದೆ. ಜತೆಗೆ 5000mAh ಬ್ಯಾಟರಿ ಬೆಂಬಲವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು