ಸ್ಮಾರ್ಟ್ಫೋನ್ ತಯಾರಿಕಾ ಕಂಪನಿಗಳು ಭವಿಷ್ಯದ ಫೋನ್ಗಳನ್ನು ಮಾರುಕಟ್ಟೆಗೆ ತರುವ ಪೈಪೋಟಿ ನಡೆಸಿದ್ದು, 5ಜಿ ತಂತ್ರಜ್ಞಾನ ಇರುವ ಮತ್ತೊಂದು ಫೋನ್ ಮಂಗಳವಾರ ಬಿಡುಗಡೆಯಾಗಿದೆ. iQOO 3 ಭಾರತದಲ್ಲಿ ಅನಾವರಣಗೊಂಡಿದೆ.

ಚೀನಾದ ಸ್ಮಾರ್ಟ್ಫೋನ್ ತಯಾರಿಕಾ ಕಂಪನಿ ರಿಯಲ್ಮಿ ಸೋಮವಾರ 'ಎಕ್ಸ್50 ಪ್ರೋ 5ಜಿ' ಫೋನ್ ಬಿಡುಗಡೆ ಮಾಡಿತು. ಅದರ ಬೆನ್ನಲ್ಲೇ 'iQOO 3' 5ಜಿ ಫೋನ್ ಹೊರಬಂದಿದೆ. ಆರಂಭಿಕ ಬೆಲೆ ₹36,990 ನಿಗದಿಯಾಗಿದೆ. 6.44 ಇಂಚು ಫುಲ್ ಎಚ್ಡಿ ಸೂಪರ್ ಅಮೋಲೆಡ್ ಡಿಸ್ಪ್ಲೇ ಹೊಂದಿದ್ದು, ಪೋಲಾರ್ ವ್ಯೂ ಡಿಸ್ಪ್ಲೇ ಇರುವುದಾಗಿ ಕಂಪನಿ ಹೇಳಿಕೊಂಡಿದೆ.

ವೋಲ್ಕೆನೊ ಆರೆಂಜ್, ಕ್ವಾಂಟಮ್ ಸಿಲ್ವರ್ ಮತ್ತು ಟೊರ್ನಾಡೊ ಬ್ಲ್ಯಾಕ್ ಬಣ್ಣಗಳಲ್ಲಿ ಫೋನ್ ಸಿಗಲಿದೆ. 8ಜಿಬಿ ರ್ಯಾಮ್ + 128ಜಿಬಿ ಸಂಗ್ರಹ ಸಾಮರ್ಥ್ಯ (ಬೆಲೆ ₹36,990) ಮತ್ತು 12ಜಿಬಿ ರ್ಯಾಮ್ + 256 ಜಿಬಿ ಸಂಗ್ರಹ ಸಾಮರ್ಥ್ಯ (₹39,990) ಹೊಂದಿರುವ 4ಜಿ ಫೋನ್ ಹಾಗೂ 5ಜಿ ತಂತ್ರಜ್ಞಾನದಲ್ಲಿ 12ಜಿಬಿ ರ್ಯಾಮ್ + 256ಜಿಬಿ ಸಂಗ್ರಹ ಸಾಮರ್ಥ್ಯದ (ಬೆಲೆ ₹44,990) ಒಂದು ಮಾದರಿ ಮಾತ್ರ ಲಭ್ಯವಿದೆ.

ಡ್ಯೂಯಲ್ ಸಿಮ್, ಆ್ಯಂಡ್ರಾಯ್ಡ್ 10 ಆಧಾರಿತ iQOO UI 1.0 ಕಾರ್ಯನಿರ್ವಹಣೆ ಹೊಂದಿದೆ. ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ 865 ಪ್ರೊಸೆಸರ್ + ಅಡ್ರೆನೊ 650 ಜಿಪಿಯು ಇರುವುದರಿಂದ ಕ್ಲೌಡ್ ಆಧಾರಿತ ಗೇಮಿಂಗ್ ಮತ್ತು ವೇಗವಾಗಿ ಡೌನ್ಲೋಡ್ ಮಾಡಿಕೊಳ್ಳಲು ಸಹಕಾರಿಯಾಗಲಿದೆ.

ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾ ನೀಡಲಾಗಿದೆ. 48ಎಂಪಿ+13ಎಂಪಿ ಟೆಲಿಫೋಟೊ 20x ಡಿಜಿಟಲ್ ಜೂಮ್+13ಎಂಪಿ ಸೂಪರ್ ವೈಡ್ ಆ್ಯಂಗಲ್+2ಎಂಪಿ ಲೆನ್ಸ್ ಇದೆ. ಸೆಲ್ಫಿಗಾಗಿ 16ಎಂಪಿ ಪಂಚ್ ಹೋಲ್ ಕ್ಯಾಮೆರಾ ನೀಡಲಾಗಿದೆ. 4,440 ಎಂಎಎಚ್ ಬ್ಯಾಟರಿ ಮತ್ತು 55ವ್ಯಾಟ್ ಪ್ಲ್ಯಾಷ್ ಚಾರ್ಜ್, ಕ್ಯಾಪ್ಯ್ಸೂಲ್ ಡೇಟಾ ಕೇಬಲ್ ಹೊಂದಿದೆ. 15 ನಿಮಿಷಗಳಲ್ಲಿ ಬ್ಯಾಟರಿ ಅರ್ಧದಷ್ಟು ಚಾರ್ಜ್ ಆಗುತ್ತದೆ. ಮಾರ್ಚ್ 4ರಿಂದ ಫೋನ್ ಖರೀದಿಗೆ ಸಿಗಲಿದೆ.

iQOO 3 ಫೋನ್ ಗುಣಲಕ್ಷಣಗಳು

*ಡಿಸ್ಪ್ಲೇ: 6.44 ಇಂಚು ಫುಲ್ ಎಚ್ಡಿ ಸೂಪರ್ ಅಮೋಲೆಡ್
*ಸಾಮರ್ಥ್ಯ: 8ಜಿಬಿ/ 12 ಜಿಬಿ ರ್ಯಾಮ್ + 128 ಜಿಬಿ/ 256 ಜಿಬಿ ಸಂಗ್ರಹ ಸಾಮರ್ಥ್ಯ
*ಪ್ರೊಸೆಸರ್: ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ 865
*ಬ್ಯಾಟರಿ: 4,440 ಎಂಎಎಚ್, 55ವ್ಯಾಟ್ ಸೂಪರ್ ಫ್ಲ್ಯಾಷ್ಚಾರ್ಜ್
*ಬೆಲೆ: ₹36,990 / ₹39,990 /₹44,990 (5ಜಿ ಫೋನ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.