ನೀವು ನಿಮ್ಮ ಫೋನ್ ಹಿಡಿದುಕೊಂಡು ವಾಟ್ಸಾಪ್ನಲ್ಲಾಗಲಿ, ಫೇಸ್ಬುಕ್ನಲ್ಲಾಗಲಿ, ಅಥವಾ ಇನ್ಸ್ಟಾ ್ಟಾ ಗ್ರಾಮ್ನಲ್ಲಾಗಲಿ ಏನನ್ನಾದರೂ ಬರೆಯುವಾಗ, ಯಾರೋ ನಿಮ್ಮ ಭುಜದ ಹಿಂದೆ ಬಂದು ಇಣುಕಿ ನೋಡುತ್ತಿರುವುದನ್ನು ಊಹಿಸಿಕೊಳ್ಳಿ. ಅವರು ನಿಮ್ಮ ಎಲ್ಲ ಸಂದೇಶಗಳನ್ನು ಓದಬಹುದು, ನೀವು ಬರೆಯುವ ಕಾಮೆಂಟ್ಗಳನ್ನು ನೋಡಬಹುದು.

ಇತ್ತೀಚೆಗಷ್ಟೇ ಜನರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಎಲ್ಲವನ್ನೂ ಮೇಲ್ವಿಚಾರಣೆ ನಡೆಸುವಂತಹ ಒಂದು ಶಕ್ತಿಶಾಲಿ ಕೃತಕ ಬುದ್ಧಿಮತ್ತೆ ವ್ಯವಸ್ಥೆಯೊಂದಕ್ಕೆ ಕರ್ನಾಟಕ ಸರ್ಕಾರ ಇತ್ತೀಚೆಗಷ್ಟೇ ಅನುಮೋದನೆ ನೀಡಿದೆ. ಈ ವ್ಯವಸ್ಥೆಯ ಹೆಸರು ಎಸ್ಎಂಎಎಸ್ ಆಗಿದ್ದು, ಸೋಶಿಯಲ್ ಮೀಡಿಯಾ ಅನಾಲಿಟಿಕ್ಸ್ ಸಲ್ಯುಷನ್ ಎನ್ನುವುದರ ಹೃಸ್ವರೂಪವಾಗಿದೆ. ಇದಕ್ಕೆ ತಗಲುವ ವೆಚ್ಚ ₹67 ಕೋಟಿ. ಈ ಒಪ್ಪಂದ ಈಗಾಗಲೇ ಖಾಸಗಿತನದ ಪರ ವಾದಿಸುವವರು ಮತ್ತು ಭದ್ರತಾ ಬೆಂಬಲಿಗರ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಗಿದೆ. ಇಲ್ಲಿ ನಿಜಕ್ಕೂ ಏನಾಗುತ್ತಿದೆ, ಎಲ್ಲರೂ ಯಾಕೆ ಈ ಯೋಜನೆಯ ಕುರಿತು ಇಷ್ಟೊಂದು ಕೋಪಗೊಂಡಿದ್ದಾರೆ ಎನ್ನುವುದನ್ನು ಈ ಲೇಖನದಲ್ಲಿ ಗಮನಿಸೋಣ.

ಮೊದಲಿಗೆ, ಈ ಎಸ್ಎಂಎಎಸ್ ಎಂದರೇನು? ಇದನ್ನು ಒಂದು ಬೃಹತ್ತಾದ, ಅತ್ಯಂತ ಬುದ್ಧಿಮತ್ತೆಯುಳ್ಳ, ಕರ್ನಾಟಕದಲ್ಲಿನ ಎಲ್ಲ ಸಾಮಾಜಿಕ ಜಾಲತಾಣಗಳ ಪೋಸ್ಟ್ಗಳು, ಕಾಮೆಂಟ್ಗಳು ಮತ್ತು ಸಂದೇಶಗಳನ್ನು ಓದುವ ರೋಬೋಟ್ ಎಂದುಕೊಳ್ಳಿ. ಇದು 24/7 ಕಾರ್ಯಾಚರಿಸುತ್ತಾ, ಪ್ರತಿದಿನವೂ ಮಿಲಿಯಾಂತರ ಹೊಸ ವಿಚಾರಗಳನ್ನು ಗಮನಿಸುತ್ತಲೇ ಇರುತ್ತದೆ. ಸರ್ಕಾರ ಈ ಎಐ ವ್ಯವಸ್ಥೆ ದ್ವೇಷ ಭಾಷಣ, ಬೈಗುಳ, ಮತ್ತು ತಪ್ಪು ಮಾಹಿತಿಗಳನ್ನು ಗುರುತಿಸುತ್ತದೆ ಎಂದಿದೆ. ಇದು ಭಯೋತ್ಪಾದಕ ಗುಂಪುಗಳು ಹೊಸ ಸದಸ್ಯರ ಸೇರ್ಪಡೆಗೆ ಆನ್ಲೈನ್ ಪ್ರಯತ್ನ ನಡೆಸುವುದನ್ನೂ ಗುರುತಿಸಲಿದೆ ಎಂದು ಸರ್ಕಾರ ಹೇಳಿದೆ. ಮಾನವರ ಗಮನಕ್ಕೆ ಬರದ ಅಂಶಗಳನ್ನೂ ಇದು ಗುರುತಿಸಿ, ಗಮನಿಸುತ್ತದೆ. ಸಾಮಾಜಿಕ ಜಾಲತಾಣಗಳು ಇಂದು ಸಾಮಾನ್ಯ ಮಾನವರಿಗೆ ಸರಿಯಾಗಿ ನಿರ್ವಹಿಸಲು ಸಾಧ್ಯವಿಲ್ಲದ ಮಟ್ಟಿಗೆ ಬೆಳೆದಿರುವುದರಿಂದ, ಈ ಕ್ರಮ ಅವಶ್ಯಕವಾಗಿದೆ ಎಂದು ಸಚಿವ ಎಚ್. ಕೆ. ಪಾಟೀಲ ಹೇಳಿದ್ದಾರೆ. ಪ್ರತಿ ನಿಮಿಷದಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಪೋಸ್ಟ್ಗಳು ಹರಿದಾಡುತ್ತವೆ. ಸಾಂಪ್ರದಾಯಿಕ ಪೊಲೀಸರು ಇವನ್ನೆಲ್ಲ ಓದಲು ಸಾಧ್ಯವಿಲ್ಲ. ಆದ್ದರಿಂದ ತಂತ್ರಜ್ಞಾನವೇ ಈ ಕೆಲಸವನ್ನು ಹೆಚ್ಚು ವೇಗವಾಗಿ ಮತ್ತು ದಕ್ಷವಾಗಿ ನಿರ್ವಹಿಸಬೇಕಾಗುತ್ತದೆ.

ಆದರೆ, ವಿಚಾರಗಳು ಇಲ್ಲಿಂದ ಹೆಚ್ಚು ಸಂಕೀರ್ಣವೂ, ಆತಂಕಕಾರಿಯೂ ಆಗುತ್ತವೆ. ಪ್ರಸ್ತುತ ವ್ಯವಸ್ಥೆಯ ಟೀಕಾಕಾರರು ಒಂದಷ್ಟು ಅತ್ಯಂತ ಕಷ್ಟಕರ ಸವಾಲುಗಳನ್ನು ಕೇಳುತ್ತಿದ್ದು, ಅಧಿಕಾರಿಗಳ ಕೈಯಲ್ಲಿ ಇದಕ್ಕೆ ಸೂಕ್ತ ಉತ್ತರಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಯಾವುದು ಸುಳ್ಳು ಮತ್ತು ಯಾವುದು ನಿಜ ಎನ್ನುವುದನ್ನು ನಿರ್ಧರಿಸುವವರು ಯಾರು? ಯಾವುದು ದ್ವೇಷ ಭಾಷಣ ಮತ್ತು ಯಾವುದು ಸರಿಯಾದ ಟೀಕೆ? ಯಾರಾದರೂ ಸರ್ಕಾರದ ನೀತಿಗಳು ಸಮರ್ಪಕವಾಗಿಲ್ಲ ಎಂದು ಟೀಕಿಸಿದರೆ, ಅದು ಸುಳ್ಳಾಗುತ್ತದೆಯೋ ಅಥವಾ ಅಭಿವ್ಯಕ್ತಿ ಸ್ವಾತಂತ್ರವಾಗುತ್ತದೋ? ಯಾರಾದರೂ ಓರ್ವ ರಾಜಕೀಯ ಮುಖಂಡನನ್ನು ಟೀಕಿಸಿದರೆ, ಅದು ದ್ವೇಷ ಭಾಷಣವೋ ಅಥವಾ ಸರಿಯಾದ ಹೇಳಿಕೆಯೋ? ಸರ್ಕಾರವನ್ನು ಬೆಂಬಲಿಸುವ ಒಂದು ಸುದ್ದಿ ಕೆಲವೊಂದು ಪೋಸ್ಟ್ಗಳನ್ನು ಸುಳ್ಳು ಸುದ್ದಿ ಎಂದು ಕರೆಯಬಹುದು. ಆದರೆ, ವಿರೋಧ ಪಕ್ಷಗಳು ಇವೇ ಸಾಮಾಜಿಕ ಜಾಲತಾಣದ ಪೋಸ್ಟ್ಗಳನ್ನು ಸರಿಯಾದ ಟೀಕೆ ಎಂದು ಕರೆಯಬಹುದು. ಹೊಸ ವ್ಯವಸ್ಥೆಯ ಬಹುದೊಡ್ಡ ಅಪಾಯ ಇಲ್ಲಿದೆ.

ಈಗ ಒಂದು ನೈಜ ಉದಾಹರಣೆಯನ್ನು ಗಮನಿಸೋಣ. ಓರ್ವ ರೈತ ಆನ್ಲೈನ್ನಲ್ಲಿ ಬರೆಯುತ್ತಾ, 'ಸರ್ಕಾರ ನಮ್ಮ ಬೆಳೆಗೆ ನ್ಯಾಯಯುತವಾದ ಬೆಲೆ ನೀಡುತ್ತಿಲ್ಲ' ಎನ್ನುತ್ತಾನೆ ಎಂದುಕೊಳ್ಳಿ. ಇದು ಸುಳ್ಳು ಸುದ್ದಿಯೇ ಅಥವಾ ನಿಜವಾದ ದೂರೇ? ಸರ್ಕಾರದ ನಿಯಂತ್ರಣದಲ್ಲಿರುವ ಎಸ್ಎಂಎಎಸ್ ವ್ಯವಸ್ಥೆ ಇದನ್ನು ಸುಳ್ಳು ಸುದ್ದಿ ಎಂದು ಪರಿಗಣಿಸಿ, ಆ ಬರಹವನ್ನು ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕಿದರೆ? ಇದ್ದಕ್ಕಿದ್ದಂತೆ ಆ ರೈತನ ಧ್ವನಿಯನ್ನು ಮೌನಗೊಳಿಸಿದಂತಾಗುವುದಿಲ್ಲವೇ?. ಸರ್ಕಾರ ಈ ಎಐ ವ್ಯವಸ್ಥೆಯನ್ನು ಬಳಸಿಕೊಂಡು ವಿರೋಧ ಪಕ್ಷಗಳನ್ನು ಮೌನಗೊಳಿಸಿ, ಜನರು ಆನ್ಲೈನ್ನಲ್ಲಿ ಆಡುವ ಮಾತುಗಳನ್ನೂ ನಿಯಂತ್ರಿಸಬಹುದು ಎನ್ನುವುದು ಇದರ ವಿರೋಧಿಗಳ ಆತಂಕ. ಚೀನಾದಂತಹ ದೇಶಗಳಲ್ಲಿ ಈ ಮಾದರಿಯ ಕಣ್ಗಾವಲು ವ್ಯವಸ್ಥೆಗಳನ್ನು ಬಳಸಿಕೊಂಡು ಸರ್ಕಾರದ ವಿರುದ್ಧ ಜನರ ಧ್ವನಿಯನ್ನು ಮೌನಗೊಳಿಸಲಾಗಿದೆ. ಇದೇ ಅಪಾಯ ನಮ್ಮಲ್ಲೂ ಉಂಟಾದರೆ?.

ಎರಡನೆಯ ದೊಡ್ಡ ಕಳವಳ ಎಂದರೆ ಖಾಸಗಿತನದ ಮೇಲಿನ ಪ್ರಹಾರ. ನೀವು ಕಳುಹಿಸುವ ಪ್ರತಿಯೊಂದು ಸಂದೇಶ, ನೀವು ಹಂಚಿಕೊಳ್ಳುವ ಪ್ರತಿಯೊಂದು ಅಭಿಪ್ರಾಯವನ್ನು ಸರ್ಕಾರಿ ಕಂಪ್ಯೂಟರ್ ಒಂದು ಸ್ಕ್ಯಾನ್ ಮಾಡುತ್ತಲೇ ಇರುತ್ತದೆ. ನೀವು ಇದಕ್ಕೆ ಒಪ್ಪಿಗೆ ಸೂಚಿಸಿರುವುದೇ ಇಲ್ಲ. ಸರ್ಕಾರವಂತೂ ಸಾಮಾಜಿಕ ಜಾಲತಾಣದ ವೀಕ್ಷಣೆಯ ಮೇಲೆ ಯಾವುದೇ ನಿರ್ಬಂಧಗಳಿಲ್ಲ ಎಂದಿದೆ. ಆದರೆ, ವಾಸ್ತವವಾಗಿ ಅದುವೇ ಸಮಸ್ಯೆಯಾಗಿರುವುದು. ಅಧಿಕಾರ ಹೊಂದಿರುವುದು ಮತ್ತು ಅದನ್ನು ಜವಾಬ್ದಾರಿಯುತವಾಗಿ ಬಳಸುವುದು ಎರಡು ಪ್ರತ್ಯೇಕ ವಿಚಾರಗಳು. ನಿಮ್ಮ ವೈಯಕ್ತಿಕ ಸಮಾಲೋಚನೆಗಳು, ನಿಮ್ಮ ಕುಟುಂಬದ ಮಾತುಕತೆಗಳು, ನಿಮ್ಮ ಖಾಸಗಿ ಆಲೋಚನೆಗಳು, ಎಲ್ಲವನ್ನೂ ಯಂತ್ರಗಳು ಮತ್ತು ಸರ್ಕಾರಕ್ಕಾಗಿ ಕಾರ್ಯಾಚರಿಸುವ ಮಾನವರು ವಿಶ್ಲೇಷಿಸುತ್ತಾರೆ.

ಇನ್ನು ಮೂರನೇ ಕಳವಳವೆಂದರೆ ಮಾಹಿತಿಗಳ ಸಂಭಾವ್ಯ ದುರುಪಯೋಗ. ಒಂದು ವೇಳೆ ಇಂದು ಇರುವ ಸರ್ಕಾರ ಎಸ್ಎಂಎಎಸ್ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಬಳಸಿತು ಎಂದುಕೊಳ್ಳೋಣ. ಆದರೆ, ನಾಳೆ ಬರುವ ಸರ್ಕಾರದ ಕಥೆ ಏನು? ಓರ್ವ ಭ್ರಷ್ಟ ನಾಯಕ ಈ ಎಸ್ಎಂಎಎಸ್ ವ್ಯವಸ್ಥೆ ಬಳಸಿಕೊಂಡು ತನ್ನ ರಾಜಕೀಯ ಶತ್ರುಗಳನ್ನು ದಮನಿಸಲು ಮುಂದಾದರೆ? ಕಣ್ಗಾವಲು ವ್ಯವಸ್ಥೆಗಳು ನಿರ್ಮಾಣಗೊಂಡ ನಂತರ, ಅವು ಬಹಳಷ್ಟು ಬಾರಿ ದುರುಪಯೋಗವೇ ಆಗಿರುವುದನ್ನು ಇತಿಹಾಸ ಪ್ರದರ್ಶಿಸಿದೆ. ಸರಿಯಾದ ಉದ್ದೇಶ ಹೊಂದಿರುವ ವ್ಯವಸ್ಥೆಗಳೂ ತಪ್ಪಾದ ಕೈಗಳಿಗೆ ಸಿಕ್ಕಿದಾಗ ಆಯುಧಗಳಾಗಿ ಪರಿವರ್ತನೆಗೊಳ್ಳುತ್ತವೆ. ಬಹಳಷ್ಟು ಪ್ರಜಾಪ್ರಭುತ್ವಗಳು ಈ ಪಾಠವನ್ನು ಸಮಸ್ಯೆ ಎದುರಿಸಿಯೇ ಕಲಿತಿವೆ.

ಎಸ್ಎಂಎಎಸ್ ವ್ಯವಸ್ಥೆ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಅಗತ್ಯವಿದೆ ಎಂದು ಸರ್ಕಾರ ಹೇಳುತ್ತಿದೆ. ಸರ್ಕಾರ ಭಯೋತ್ಪಾದಕರು ಆನ್ಲೈನ್ ಮೂಲಕ ಹೊಸಬರನ್ನು ಸೇರ್ಪಡೆಗೊಳಿಸುವುದು ಮತ್ತು ತಪ್ಪು ಮಾಹಿತಿಗಳು ದೊಂಬಿಗೆ ಕಾರಣವಾಗುವುದರತ್ತ ಬೆರಳು ತೋರಿಸಿದೆ. ಇವು ನೈಜ ಸಮಸ್ಯೆಗಳೇ ಆಗಿದ್ದು, ಇದಕ್ಕೆ ಪರಿಹಾರ ನೀಡುವ ಅಗತ್ಯವಿದೆ. ಆದರೆ, ಪರಿಹಾರವೇ ಸಮಸ್ಯೆಗಿಂತ ಅಪಾಯಕಾರಿಯಾಗುವ ಸಾಧ್ಯತೆಗಳೂ ಇವೆ.

ನಾವು ಆನ್ಲೈನ್ನಲ್ಲಿ ಸುಳ್ಳು ಸುದ್ದಿಗಳ ಹಬ್ಬುವಿಕೆಯನ್ನು ತಡೆಯುವುದು ಅವಶ್ಯಕವೇ. ಆದರೆ, ಸರಿಯಾದ ಕಾನೂನುಗಳಿಲ್ಲದೆ, ಸ್ವತಂತ್ರ ಮೇಲ್ವಿಚಾರಣೆ ಇಲ್ಲದೆ, ನಿಯಮಗಳಿಗೆ ಅನುಗುಣವಾಗಿರದೆ, ಒಂದು ಕಣ್ಗಾವಲು ವ್ಯವಸ್ಥೆಯನ್ನು ಜಾರಿಗೆ ತರುವುದು ಅಪಾಯಕಾರಿ ಮತ್ತು ಪ್ರಜಾಪ್ರಭುತ್ವ ವಿರೋಧಿ. ಇದಕ್ಕಾಗಿ ಶಾಸನ ಸಭೆಯ ಅನುಮೋದನೆ ಹೊಂದಿರುವ ಕಾನೂನುಗಳೂ ಜಾರಿಗೆ ತರಬೇಕು. ಯಾವುದು ನಕಲಿ ಎನ್ನುವುದನ್ನು ನಿರ್ಧರಿಸಲು ಸ್ವತಂತ್ರ ನ್ಯಾಯಾಧೀಶರು ಬೇಕೇ ಹೊರತು, ಸರ್ಕಾರಿ ಕಂಪ್ಯೂಟರ್ಗಳು ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ.

ನಿಜವಾದ ರಾಜಕೀಯ ಸಮರ ಅಧಿಕಾರ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದ್ದು. ಜನರಿಗೆ ಮಾಹಿತಿ ತಲುಪುವುದನ್ನು ನಿಯಂತ್ರಿಸುವುದು ಯಾರು?. ಸರ್ಕಾರದ ಬಳಿ ಇಷ್ಟೊಂದು ಅಧಿಕಾರ ಇದ್ದಾಗ ಅದರ ದುರುಪಯೋಗ ಆಗುವ ಸಾಧ್ಯತೆಗಳೂ ಹೆಚ್ಚು. ಪ್ರಜಾಪ್ರಭುತ್ವ ಬಲವಾಗಿರುವ ದೇಶಗಳು ಈಗಾಗಲೇ ಜನರು ಆನ್ಲೈನ್ನಲ್ಲಿ ಅಭಿಪ್ರಾಯ ಹಂಚಿಕೊಳ್ಳುವುದನ್ನು ರಕ್ಷಿಸಲು ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತಂದಿವೆ.

ಕರ್ನಾಟಕದ ಎಸ್ಎಂಎಎಸ್ ಒಂದು ನೈಜ ಸಮಸ್ಯೆಗೆ ಉತ್ತಮ ಪರಿಹಾರದ ರೀತಿಯಲ್ಲಿ ಕಾಣಬಹುದು. ಆದರೆ, ಸರಿಯಾದ ನಿಯಮಾವಳಿಗಳಿಲ್ಲದೆ, ಇದು ಪ್ರಜೆಗಳನ್ನು ನಿಯಂತ್ರಿಸುವ ಮತ್ತು ವಿರೋಧ ಪಕ್ಷಗಳನ್ನು ಮೌನವಾಗಿಸುವ ವ್ಯವಸ್ಥೆಯೂ ಆಗಬಹುದು. ಮೊದಲಿಗೆ ಕಣ್ಗಾವಲು ಕ್ರಮಗಳನ್ನು ಜಾರಿಗೆ ತಂದು, ಬಳಿಕ ಪ್ರಶ್ನೆಗಳನ್ನು ಕೇಳುವುದು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯಕ್ಕೆ ಅಪಾಯಕಾರಿ. ಅದುವೇ ಜನರಿಗೆ ಹೆಚ್ಚಿನ ಆತಂಕ ಉಂಟುಮಾಡುವ ವಿಚಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.