ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lava MyZ: ಜಗತ್ತಿನ ಮೊದಲ ಕಸ್ಟಮ್ ಫೋನ್ ಪರಿಚಯಿಸಿದ ಲಾವಾ

Last Updated 7 ಜನವರಿ 2021, 10:51 IST
ಅಕ್ಷರ ಗಾತ್ರ

ದೇಶದ ಗ್ಯಾಜೆಟ್ ಲೋಕದಲ್ಲಿ ಹೆಸರು ಗಳಿಸಿರುವ ಪ್ರಮುಖ ಕಂಪನಿ ಲಾವಾ, ಮಾರುಕಟ್ಟೆಗೆ ಹೊಸ ಪರಿಕಲ್ಪನೆಯ ಫೋನ್ ಪರಿಚಯಿಸಿದೆ. ಲಾವಾ MyZ ಕಸ್ಟಮ್ ಫೋನ್ ಅನಾವರಣಗೊಂಡಿದ್ದು, ಗ್ರಾಹಕರ ಅಭಿರುಚಿಗೆ ಪೂರಕವಾಗಿ ವಿವಿಧ ಆಯ್ಕೆಗಳ ಸಂಯೋಜನೆಯಲ್ಲಿ ಖರೀದಿಗೆ ದೊರೆಯಲಿದೆ.

ಲಾವಾ ಮೊಬೈಲ್

ದೇಶದ ಮೊಬೈಲ್ ಮತ್ತು ಗ್ಯಾಜೆಟ್ ಮಾರುಕಟ್ಟೆಯಲ್ಲಿ ಚೀನಾ ಮೂಲದ ವಿವಿಧ ಕಂಪನಿಗಳ ಪ್ರಾಬಲ್ಯ ಇರುವ ಮಧ್ಯೆಯೂ ಲಾವಾ ನೂತನ ಪರಿಕಲ್ಪನೆಯನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಲಾವಾ MyZ ಹೆಸರಿನ ಫೋನ್ ಕ್ಯಾಮರಾ, ಮೆಮೊರಿ, ಬಣ್ಣ ಹಾಗೂ RAM ಅನ್ನು ಇಚ್ಛೆಗೆ ಅನುಸಾರವಾಗಿ ಖರೀದಿಸಬಹುದು.

66 ವಿವಿಧ ಸಂಯೋಜನೆಯಲ್ಲಿ ಲಭ್ಯ

ಹೊಸ ಲಾವಾ MyZ ಫೋನ್, ಗ್ರಾಹಕರಿಗೆ 66 ವಿವಿಧ ಸಂಯೋಜನೆಯಲ್ಲಿ ಆಕರ್ಷಕ ಮೊಬೈಲ್ ಖರೀದಿಸುವ ಅವಕಾಶ ಕಲ್ಪಿಸುತ್ತದೆ. ಲಾವಾ ಮೊಬೈಲ್ ವೆಬ್ ಸೈಟ್ ಮೂಲಕ ಬಳಕೆದಾರರು ತಮ್ಮಿಷ್ಟದ ಆಯ್ಕೆಯಲ್ಲಿ ಫೋನ್ ಬುಕ್ ಮಾಡಬಹುದು ಎಂದು ಲಾವಾ ಇಂಟರ್ ನ್ಯಾಶನಲ್ ಕಂಪನಿಯ ಅಧ್ಯಕ್ಷ ಮತ್ತು ಉದ್ಯಮ ಮುಖ್ಯಸ್ಥ ಸುನಿಲ್ ರೈನಾ ತಿಳಿಸಿದ್ದಾರೆ.

ಏನಿದೆ ವಿಶೇಷತೆ?

ಹೊಸ ಲಾವಾ MyZ ಫೋನ್, ಜನವರಿ 11ರಿಂದ ಖರೀದಿಗೆ ಲಭ್ಯವಾಗಲಿದೆ. ಬಳಕೆದಾರರು ತಮ್ಮ ಬಜೆಟ್ ಮತ್ತು ಅಗತ್ಯಕ್ಕೆ ತಕ್ಕಂತೆ, ಬೇಕಾದ RAM ಮತ್ತು ಮೆಮೊರಿ, ಸೆಲ್ಫಿ ಮತ್ತು ಕ್ಯಾಮರಾ ಆಯ್ಕೆ ಮಾಡಿ, ಬುಕಿಂಗ್ ಮಾಡಿ ಹೊಸ ಲಾವಾ MyZ ಫೋನ್ ಖರೀದಿಸಬಹುದು. ಹೊಸ ಫೋನ್ ಬೆಲೆ ಮತ್ತು ಇತರ ವಿವರವನ್ನು ಕಂಪನಿ ಬಹಿರಂಗಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT