ಶುಕ್ರವಾರ, ಆಗಸ್ಟ್ 6, 2021
22 °C

ಮೈಕ್ರೊಸಾಫ್ಟ್‌ನ ಬಹು ಉಪಯೋಗಿ ‘ಸರ್ಫೇಸ್ ಲ್ಯಾಪ್‍ಟಾಪ್ 4’ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೈಕ್ರೊಸಾಫ್ಟ್ ಇಂಡಿಯಾ ಕಂಪನಿಯು ಶೈಕ್ಷಣಿಕ ಮತ್ತು ವಾಣಿಜ್ಯ ಉದ್ದೇಶಗಳ ಬಳಕೆಗೆ ‘ಸರ್ಫೇಸ್ ಲ್ಯಾಪ್‍ಟಾಪ್ 4’ ಅನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್‍ಟಾಪ್ ಅಮೆಜಾನ್.ಇನ್‍ನಲ್ಲಿ ಲಭ್ಯವಿದೆ. ಕಂಪನಿಯ ವೈವಿಧ್ಯಮಯ ಉತ್ಪನ್ನಗಳ ಪಟ್ಟಿಗೆ ಇದು ಹೊಸ ಸೇರ್ಪಡೆಯಾಗಿದೆ.ಇದರ ಬೆಲೆಯು ₹ 1,02,999ರಿಂದ ಆರಂಭವಾಗುತ್ತದೆ.

‘ಗ್ರಾಹಕರು ಅಥವಾ ಬಳಕೆದಾರರು ಹೈಬ್ರೀಡ್ ಮಾದರಿಯಲ್ಲಿ ಕೆಲಸ ನಿರ್ವಹಣೆ ಮತ್ತು ಕಲಿಕೆಯಲ್ಲಿ ತೊಡಗಬಹುದಾಗಿದೆ. ಕಾರ್ಯದಕ್ಷತೆ ಪ್ರಮಾಣವನ್ನು ದುಪ್ಪಟ್ಟುಗೊಳಿಸಲಿದೆ’ ಎಂದು ಮೈಕ್ರೊಸಾಫ್ಟ್‌ ಇಂಡಿಯಾದ ಚೀಫ್ ಆಪರೇಟಿಂಗ್ ಆಫಿಸರ್ ರಾಜೀವ್ ಸೋಧಿ ತಿಳಿಸಿದರು.

13.5 ಮತ್ತು 15 ಇಂಚಿನ ಮಾದರಿಗಳಲ್ಲಿ 3:2 ಪಿಕ್ಸೆಲ್‌ ಸೆನ್ಸ್‌ ಹೈ–ಕಾಂಟ್ರಾಸ್ಟ್‌ ಟಚ್‌ಸ್ಕ್ರೀನ್‌ ಡಿಸ್‌ಪ್ಲೇ ಮತ್ತು ಡಾಲ್ಬಿ ಅಟ್ಮಾಸ್‌ ಓಮ್ನಿಸಾನಿಕ್‌ ಸ್ಪೀಕರ್‌ಗಳಿವೆ. ಬಳಕೆದಾರರು ತಮ್ಮ ನೆಚ್ಚಿನ ಸಿನಿಮಾಗಳನ್ನು ಸಿನೆಮ್ಯಾಟಿಕ್ ಅನುಭವದೊಂದಿಗೆ ವೀಕ್ಷಿಸಿಬಹುದು.

ಇದರಲ್ಲಿ ಬಿಲ್ಟ್-ಇನ್ ಎಚ್‍ಡಿ ಫ್ರಂಟ್-ಫೇಸಿಂಗ್ ಕ್ಯಾಮೆರಾ, ಸ್ಟುಡಿಯೋ ಮೈಕ್ರೋಫೋನ್ ಅನ್ನು ಒಳಗೊಂಡಿದೆ. ಲಾರ್ಜ್ ಟ್ರ್ಯಾಕ್‍ಪ್ಯಾಡ್ ಗೆಸ್ಚರ್ ಬೆಂಬಲ ಹೊಂದಿದೆ.

ಇದರಿಂದಾಗಿ ಬಳಕೆದಾರರು ತಮ್ಮ ಆದ್ಯತೆಯ ಕೆಲಸವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ. 11ನೇ ಪೀಳಿಗೆಯ ಇಂಟೆಲ್‌ ಕೋರ್ ಪ್ರೊಸೆಸರ್‌ ಅಥವಾ ಎಎಂಡಿ ರೇಜೆನ್‌ ಮೊಬೈಲ್‌ ಪ್ರೊಸೆಸರ್‌ ಎಂಬ ಎರಡು ಅಯ್ಕೆಯಲ್ಲಿ ಲಭ್ಯವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು