ಶನಿವಾರ, ಅಕ್ಟೋಬರ್ 1, 2022
20 °C
ಮೊಟೊರೊಲಾ ಹೊಸ ಟ್ಯಾಬ್ಲೆಟ್ ದೇಶದಲ್ಲಿ ಬಿಡುಗಡೆ

Moto Tab G62 | ನೂತನ ಟ್ಯಾಬ್ಲೆಟ್ ಬಿಡುಗಡೆ ಮಾಡಿದ ಮೊಟೊರೊಲಾ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ಮಾರ್ಟ್‌ಫೋನ್ ಮತ್ತು ಗ್ಯಾಜೆಟ್ ಲೋಕದಲ್ಲಿ ಹೆಸರು ಗಳಿಸಿರುವ ಮೊಟೊರೊಲಾ, ನೂತನ ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ.

ಲೆನೊವೊ ಕಂಪನಿ ಒಡೆತನದಲ್ಲಿರುವ ಮೊಟೊರೊಲಾ, ದೇಶದಲ್ಲಿ ಮೊಟೊ ಟ್ಯಾಬ್ G62 ಆ್ಯಂಡ್ರಾಯ್ಡ್ ಟ್ಯಾಬ್ಲೆಟ್ ಪರಿಚಯಿಸಿದೆ.

10.6 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ, ಫೇಸ್‌ ಅನ್‌ಲಾಕ್ ವ್ಯವಸ್ಥೆ, ನ್ಯಾನೊ ಎಲ್‌ಟಿಯ ಸಿಮ್ ಮತ್ತು 3.5ಎಂಎಂ ಆಡಿಯೋ ಜ್ಯಾಕ್ ಪೋರ್ಟ್ ಹೊಸ ಮೊಟೊ ಟ್ಯಾಬ್‌ನಲ್ಲಿದೆ ಎಂದು ಕಂಪನಿ ಹೇಳಿದೆ.

ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 680 ಒಕ್ಟಾ–ಕೋರ್ ಪ್ರೊಸೆಸರ್ ಜತೆಗೆ ಅಡ್ರೆನೊ 610 ಗ್ರಾಫಿಕ್ಸ್ ಬೆಂಬಲ, ಆ್ಯಂಡ್ರಾಯ್ಡ್ 12 ಓಎಸ್, 4 GB LPDDR4X RAM ಮತ್ತು 64 GB ಸ್ಟೋರೇಜ್ ಇರಲಿದೆ. ಜತೆಗೆ 7,700mAh ಬ್ಯಾಟರಿ ಮತ್ತು 20W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ. ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಇದರಲ್ಲಿದೆ.

ಫ್ಲಿಪ್‌ಕಾರ್ಟ್ ಮೂಲಕ ಆಗಸ್ಟ್ 25ರಿಂದ ದೊರೆಯಲಿದ್ದು, Wi-Fi ಮಾದರಿಗೆ ₹15,999 ಮತ್ತು LTE ಆವೃತ್ತಿಗೆ ₹17,999 ದರವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು