ಮಂಗಳವಾರ, ಸೆಪ್ಟೆಂಬರ್ 28, 2021
25 °C

ನಾಯ್ಸ್ ಕಲರ್‌ಫಿಟ್ ಸರಣಿ ನೂತನ ಸ್ಮಾರ್ಟ್‌ವಾಚ್ ದೇಶದಲ್ಲಿ ಬಿಡುಗಡೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

NOISE India

ಬೆಂಗಳೂರು: ಸ್ಮಾರ್ಟ್‌ವಾಚ್ ಮತ್ತು ಫಿಟ್ನೆಸ್ ಟ್ರ್ಯಾಕರ್‌ ಕುರಿತು ಜನರಲ್ಲಿ ಕ್ರೇಜ್ ಹೆಚ್ಚುತ್ತಿದೆ. ಇದೇ ಸಂದರ್ಭದಲ್ಲಿ ನಾಯ್ಸ್ ನೂತನ ಸ್ಮಾರ್ಟ್‌ವಾಚ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

ನಾಯ್ಸ್ ಕಲರ್‌ಫಿಟ್ ಪ್ರೊ 3 ಅಸಿಸ್ಟ್ ಹೆಸರಿನ ಸ್ಮಾರ್ಟ್‌ವಾಚ್ ದೇಶದಲ್ಲಿ ಬಿಡುಗಡೆಯಾಗಿದ್ದು, ಹೃದಯ ಬಡಿತ ಮಾಪನ, ಆಕರ್ಷಕ ವಿನ್ಯಾಸ ಹೊಂದಿದೆ.

14 ವಿವಿಧ ಕ್ರೀಡೆಗಳ ಟ್ರ್ಯಾಕಿಂಗ್, ವಾಟರ್ ರೆಸಿಸ್ಟ್ ಇತ್ಯಾದಿ ವಿಶೇಷ ಫೀಚರ್‌ಗಳನ್ನು ನಾಯ್ಸ್ ಸ್ಮಾರ್ಟ್‌ವಾಚ್ ಒಳಗೊಂಡಿದೆ.

ಬೆಲೆ ವಿವರ

ನೂತನ ನಾಯ್ಸ್ ಕಲರ್‌ಫಿಟ್ ಪ್ರೊ 3 ಅಸಿಸ್ಟ್ ಬೆಲೆ ದೇಶದಲ್ಲಿ ₹5,999 ಇದ್ದು, ಜೆಟ್ ಬ್ಲ್ಯಾಕ್, ಜೆಟ್ ಬ್ಲೂ, ರೋಸ್ ಪಿಂಕ್, ಸ್ಮೋಕ್ ಗ್ರೀನ್ ಮತ್ತು ಗ್ರೇ ಬಣ್ಣದಲ್ಲಿ ಲಭ್ಯವಿದೆ. ಆರಂಭಿಕ ಕೊಡುಗೆಯಾಗಿ ನಾಯ್ಸ್ ವೆಬ್‌ಸೈಟ್‌ ಮೂಲಕ ₹3,999 ದರಕ್ಕೆ ಲಭ್ಯವಿದೆ.

1.55 ಇಂಚಿನ ಟಿಎಫ್‌ಟಿ-ಎಲ್‌ಸಿಡಿ ಡಿಸ್‌ಪ್ಲೇ, ಅಲೆಕ್ಸಾ ಬೆಂಬಲ, ಫೈಂಡ್ ಮೈ ಫೋನ್ ಫೀಚರ್, ಸ್ಲೀಪ್ ಟ್ರ್ಯಾಕಿಂಗ್ ಹೀಗೆ ಅಗತ್ಯ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು