ಶುಕ್ರವಾರ, ಮಾರ್ಚ್ 31, 2023
31 °C

ದೇಶದ ಮಾರುಕಟ್ಟೆಗೆ ನಾಯ್ಸ್ ಕೊಲೋಫಿಟ್ ಕ್ಯೂಬ್ ಸ್ಮಾರ್ಟ್‌ವಾಚ್ ಬಿಡುಗಡೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Noise Smartwatch

ಬೆಂಗಳೂರು: ದೇಶದ ಮಾರುಕಟ್ಟೆಗೆ ನಾಯ್ಸ್ ಕಂಪನಿ ಮತ್ತೊಂದು ಆಕರ್ಷಕ ಸ್ಮಾರ್ಟ್‌ವಾಚ್ ಪರಿಚಯಿಸಿದೆ.

ನಾಯ್ಸ್ ಕೊಲೋಫಿಟ್ ಕ್ಯೂಬ್ ಸ್ಮಾರ್ಟ್‌ವಾಚ್ ಬಿಡುಗಡೆಯಾಗಿದ್ದು, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮತ್ತು ಐಫೋನ್‌ಗಳಲ್ಲಿ ಬಳಸಬಹುದು.

ಹೃದಯ ಬಡಿತ ಮಾಪನ, ವಿವಿಧ ವಾಚ್ ಫೇಸ್, ಹಲವು ಸ್ಪೋರ್ಟ್ಸ್ ಮೋಡ್ ಆಯ್ಕೆ ನೂತನ ಸ್ಮಾರ್ಟ್‌ವಾಚ್‌ನಲ್ಲಿ ಲಭ್ಯವಿದೆ.

ನಾಯ್ಸ್ ಕ್ಯೂಬ್, ಚೌಕಾಕಾರದ ಡಯಲ್, ಬಲಭಾಗದಲ್ಲಿ ಕ್ರೌನ್ ಬಟನ್ ಹೊಂದಿದ್ದು, ಸಿಲಿಕಾನ್ ಪಟ್ಟಿ ಇದರಲ್ಲಿದೆ.

ನೂತನ ಸ್ಮಾರ್ಟ್‌ವಾಚ್ ನಾಯ್ಸ್ ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಲಭ್ಯವಿದ್ದು, ₹2,499 ದರ ಹೊಂದಿದೆ. ಬೀಜ್ ಗೋಲ್ಡ್ ಮತ್ತು ಚಾರ್‌ಕೋಲ್ ಗೋಲ್ಡ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ನಾಯ್ಸ್ ಕೊಲೋಫಿಟ್ ಕ್ಯೂಬ್ ಸ್ಮಾರ್ಟ್‌ವಾಚ್ ದೊರೆಯುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು