ಶನಿವಾರ, ಏಪ್ರಿಲ್ 4, 2020
19 °C

ಡಿ.5ಕ್ಕೆ ಹೊಸ ಫೋನ್‌ ಅನಾವರಣ; ನೋಕಿಯಾ 8.2, ನೋಕಿಯಾ 5.2, ನೋಕಿಯಾ 2.3

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮೈಕ್ರೋಸಾಫ್ಟ್‌ ಆಪರೇಟಿಂಗ್‌ ಸಿಸ್ಟಮ್‌ ಒಳಗೊಂಡ ನೋಕಿಯಾ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚಿನ ಜನ ಬಳಸಲು ಒಲವು ತೋರಲಿಲ್ಲ. ವೇಗವಾಗಿ ಬದಲಾವಣೆ ಕಾಣುತ್ತಿರುವ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ನೋಕಿಯಾ ಬ್ರ್ಯಾಂಡ್‌ ಈಗಾಗಲೇ ಆ್ಯಂಡ್ರಾಯ್ಡ್‌ನತ್ತ ಹೊರಳಿದ್ದು, ಡಿಸೆಂಬರ್‌ 5ಕ್ಕೆ ಹೊಸ ಫೋನ್‌ ಅನಾವರಣಗೊಳಿಸುವುದಾಗಿ ಎಚ್‌ಎಂಡಿ ಗ್ಲೋಬಲ್‌ ಪ್ರಕಟಿಸಿಕೊಂಡಿದೆ. 

ಬಿಡುಗಡೆ ಆಗಲಿರುವ ಫೋನ್‌ ಯಾವುದೆಂದು ನೋಕಿಯಾ ಬಹಿರಂಗ ಪಡಿಸಿಲ್ಲ. ಆದರೆ, 'ನೋಕಿಯಾ 8.2' ಬಿಡುಗಡೆಯಾಗಲಿದೆ ಎಂದೇ ಬಹಳಷ್ಟು ವೆಬ್‌ಸೈಟ್‌ಗಳು ವರದಿ ಮಾಡಿವೆ. ಇದರೊಂದಿಗೆ 'ನೋಕಿಯಾ 2.3' ಮತ್ತು 'ನೋಕಿಯಾ 5.2' ಫೋನ್‌ಗಳೂ ಸಹ ಅನಾವರಣಗೊಳ್ಳಲಿವೆ ಎನ್ನಲಾಗಿದೆ. ಈ ಫೋನ್‌ಗಳ ಗುಣಲಕ್ಷಣಗಳ ಬಗ್ಗೆಯೂ ಮಾಹಿತಿಗಳು ಹರಿದಾಡುತ್ತಿವೆ. 

ನೋಕಿಯಾ 2.3 ಆರಂಭಿಕ ಹಂತದ ಸ್ಮಾರ್ಟ್‌ಫೋನ್‌ ಆಗಿರುವುದಾಗಿ ಅಂದಾಜಿಸಲಾಗಿದ್ದು, ₹7,400 ಬೆಲೆ ನಿಗದಿಯಾಗಿರಬಹುದು. 2 ಜಿಬಿ ರ್‍ಯಾಮ್‌ ಮತ್ತು 32 ಜಿಬಿ ಸಂಗ್ರಹ ಸಾಮರ್ಥ್ಯವನ್ನು ಹೊಂದಿರಲಿದೆ. ಮೀಡಿಯಾಟೆಕ್‌ ಚಿಪ್‌, ಡ್ಯೂಯಲ್‌ ಸಿಮ್‌ ಹಾಗೂ ಸ್ಟಾಕ್‌ ಆ್ಯಂಡ್ರಾಯ್ಡ್‌ ಯುಐ ಒಳಗೊಂಡಿರಲಿದೆ ಎಂದು ವರದಿಯಾಗಿದೆ. 

ನೋಕಿಯಾ 5.2 ಸ್ಮಾರ್ಟ್‌ಫೋನ್ 6.1 ಇಂಚು ಫುಲ್‌ ಎಚ್‌ಡಿ ಡಿಸ್‌ಪ್ಲೇ, 3920 ಎಂಎಎಚ್‌ ಬ್ಯಾಟರಿ ಹಾಗೂ 6 ಜಿಬಿ ರ್‍ಯಾಮ್‌ ಹೊಂದಿರಲಿದೆ. 16 ಮೆಗಾಪಿಕ್ಸೆಲ್‌ ಸೆನ್ಸರ್‌ ಸರ್ಕ್ಯುಲರ್‌ ಕ್ಯಾಮೆರಾ, ಬ್ಲೂಟೂತ್‌ 5.0 ಒಳಗೊಂಡಿರಲಿದೆ. 

ನೋಕಿಯಾ 8.2 ಪ್ರೀಮಿಯಂ ಫೋನ್‌ನಲ್ಲಿ 64 ಮೆಗಾಪಿಕ್ಸೆಲ್‌ ಕ್ವಾಡ್‌ ಕ್ಯಾಮೆರಾ(ನಾಲ್ಕು ಲೆನ್ಸ್‌) ಹಾಗೂ ಪಾಪ್‌–ಅ‍ಪ್‌ ಸೆಲ್ಫಿ ಕ್ಯಾಮೆರಾ ಇರಲಿದೆ. ಕ್ವಾಲ್‌ಕಮ್ಸ್‌ ಸ್ನ್ಯಾಪ್‌ಡ್ರಾಗಲ್‌ 730 ಪ್ರೊಸೆಸರ್‌, 5ಜಿ ನೆರವು, 8 ಜಿಬಿ ರ್‍ಯಾಮ್‌ ಮತ್ತು 256 ಜಿಬಿ ಸಂಗ್ರಹ ಸಾಮರ್ಥ್ಯದೊಂದಿಗೆ ಬರಲಿದೆ ಎಂದು ವರದಿಯಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು