ಬೆಂಗಳೂರು: ಸಂಗೀತ ಪ್ರಿಯರನ್ನು ನೋಕಿಯಾ ಮತ್ತೆ ಸೆಳೆದುಕೊಳ್ಳುವ ಪ್ರಯತ್ನ ನಡೆಸಿದೆ. ನೋಕಿಯಾ 5310 ಎಕ್ಸ್‌ಪ್ರೆಸ್‌ಮ್ಯೂಸಿಕ್ ಮಾದರಿಯ ಹೊಸ ಆವೃತ್ತಿ ಇದೀಗ ಭಾರತದಲ್ಲಿ ಅನಾವರಣಗೊಂಡಿದೆ.

ಸ್ಮಾರ್ಟ್ ಅಲ್ಲದ ಕ್ಲಾಸಿಕ್ ಮಾದರಿಗಳ ಪೈಕಿ ನೋಕಿಯಾದ 5310 ಫೋನ್ ಅತ್ಯುತ್ತಮ ಆಯ್ಕೆಗಳನ್ನು ಹೊಂದಿರುವ ಫೋನ್ ಆಗಿದೆ. ಜೂನ್ 23ರಿಂದ ಕಂಪನಿಯ ವೆಬ್‌ಸೈಟ್ ಮತ್ತು ಅಮೆಜಾನ್ ಇಂಡಿಯಾದಲ್ಲಿ ಆನ್‌ಲೈನ್ ಮಾರಾಟ ಆರಂಭವಾಗಲಿದ್ದು, ಮುಂಚಿತವಾಗಿಯೇ ಬುಕ್ ಮಾಡುವ ಅವಕಾಶ ಇದೆ.

ಹೊಸ ಫೋನ್‌ಗೆ ₹3,399 ಬೆಲೆ ನಿಗದಿ ಪಡಿಸಲಾಗಿದೆ. 2007ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಎಕ್ಸ್‌ಪ್ರೆಸ್‌ಮ್ಯೂಸಿಕ್ ಸರಣಿಯ ಫೋನ್‌ಗಳ ಪೈಕಿ ನೋಕಿಯಾ 5310 ಹೆಚ್ಚು ಜನಪ್ರಿಯಗೊಂಡಿತ್ತು. ಎಚ್‌ಎಂಡಿ ಗ್ಲೋಬಲ್ 3310 ಮಾದರಿಯ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿದೆ.

2.4 ಇಂಚು ಕ್ಯುವಿಜಿಎ ಡಿಸ್‌ಪ್ಲೇ, 8ಎಂಬಿ ರ್‍ಯಾಮ್ ಮತ್ತು 16ಎಂಬಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಮೈಕ್ರೊಎಸ್‌ಡಿ ಕಾರ್ಡ್ ಮೂಲಕ 32ಜಿಬಿ ವರೆಗೂ ಸಂಗ್ರಹ ವಿಸ್ತರಿಸಿಕೊಳ್ಳಬಹುದು. ತೆಗೆಯಬಹುದಾದ 1,200ಎಂಎಎಚ್ ಬ್ಯಾಟರಿಯು 20.7 ಗಂಟೆಗಳ ಟಾಕ್ ಟೈಮ್‌ವರೆಗೂ ಉಳಿದಿರುತ್ತದೆ. ವಿಜಿಎ ಕ್ಯಾಮೆರಾ, ಡ್ಯೂಯಲ್ ಸಿಮ್ ಹಾಗೂ ಎಂಪಿ3 ಪ್ಲೇಯರ್ ಇದೆ.

ಬಿಳಿ ಮತ್ತು ಕೆಂಪು ಹಾಗೂ ಕಪ್ಪು ಮತ್ತು ಕೆಂಪು ಬಣ್ಣಗಳಲ್ಲಿ 5310 ಫೋನ್ ಸಿಗಲಿದೆ. ಫೋನ್‌ನ ಬಲ ಭಾಗದಲ್ಲಿ ಮ್ಯೂಸಿಕ್ ಬಟನ್‌ಗಳನ್ನು ನೀಡಲಾಗಿದೆ. ಮುಂಭಾಗದಲ್ಲಿಯೇ ಎರಡು ಸ್ಪೀಕರ್‌ಗಳು, ವೈರ್‌ಲೆಸ್ ಎಫ್‌ಎಂ ರೇಡಿಯೊ ಹಾಗೂ 3.5 ಎಂಎಂ ಹೆಡ್‌ಫೋನ್ ಜಾಕ್ ಇದೆ.

ನೋಕಿಯಾ 5310 ಗುಣಲಕ್ಷಣಗಳು:

* ಡಿಸ್‌ಪ್ಲೇ: 2.4 ಇಂಚು QVGA
* ಸಾಮರ್ಥ್ಯ: 8ಎಂಬಿ ರ್‍ಯಾಮ್, 16ಎಂಬಿ ಸಂಗ್ರಹ
* ಕ್ಯಾಮೆರಾ: ಹಿಂಬದಿಯಲ್ಲಿ VGA
* ಬ್ಯಾಟರಿ: 1,200ಎಂಎಎಚ್
* ಮ್ಯೂಸಿಕ್: ವೈರ್‌ಲೆಸ್ ಎಫ್‌ಎಂ, ಎಂಪಿ3 ಪ್ಲೇಯರ್
* ಬೆಲೆ: ₹3,399

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.