ಮಂಗಳವಾರ, ಡಿಸೆಂಬರ್ 7, 2021
19 °C

ನೋಕಿಯಾ ಸಿ30: ಅಗ್ಗದ, ದೀರ್ಘಾವಧಿ ಬ್ಯಾಟರಿ ಬಾಳಿಕೆಯ ಸ್ಮಾರ್ಟ್‌ಫೋನ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಚ್‌ಎಂಡಿ ಗ್ಲೋಬಲ್‌ ಒಡೆತನದ ನೋಕಿಯಾ, ನೂತನ 'ಸಿ 30' ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಜಿಯೊ ಜೊತೆಗಿನ ಪಾಲುದಾರಿಕೆಯಲ್ಲಿ ಬಿಡುಗಡೆ ಮಾಡಲಾಗಿರುವ ನೋಕಿಯಾ ಸಿ30 ಸ್ಮಾರ್ಟ್‌ ಫೋನ್‌ಗೆ ದೀರ್ಘಾವಧಿ ಬಾಳಿಕೆ ಬರುವ 6000 ಎಂಎಎಚ್‌ ಬ್ಯಾಟರಿ, 6.82 ಇಂಚಿನ ಎಚ್‌ಡಿ+ ಸ್ಕ್ರೀನ್‌ ಇದೆ.

ಹಸಿರು ಮತ್ತು ಬಿಳಿ ಬಣ್ಣದಲ್ಲಿ, 3/32ಜಿಬಿ ಮತ್ತು 4/64ಜಿಬಿ ಕಾನ್ಫಿಗರೇಶನ್‌ಗಳಲ್ಲಿ ಫೋನ್‌ ಲಭ್ಯವಿದೆ. ಬೆಲೆ 10,999 ಮತ್ತು 11,999 ರಿಂದ ಪ್ರಾರಂಭವಾಗಿದೆ.

'ಜಿಯೋ ಎಕ್ಸ್‌ಕ್ಲೂಸಿವ್‌' ಕಾರ್ಯಕ್ರಮದ ಪ್ರಯೋಜನಗಳೊಂದಿಗೆ ಬರುವ 4ನೇ ನೋಕಿಯಾ ಸ್ಮಾರ್ಟ್‌ಫೋನ್‌ ಇದಾಗಿದೆ. 

ನೋಕಿಯಾ.ಕಾಮ್‌, ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಹಾಗೂ ಮೊಬೈಲ್‌ ಅಂಗಡಿಗಳಲ್ಲಿ ಜಿಯೋ ಎಕ್ಸ್‌ಕ್ಲೂಸಿವ್‌ ಆಫರ್‌ನೊಂದಿಗೆ ಲಭ್ಯವಿದೆ.

ಕೈಗೆಟಕುವ ಬೆಲೆಯಲ್ಲಿ ಲಭ್ಯವಿರುವ ನೋಕಿಯಾ ಸಿ30 ಸುದೀರ್ಘ ಬಾಳಿಕೆ ಬರುವ ಫೋನ್‌ ಆಗಿದೆ. ಇದು ಜನರ ಅಪೇಕ್ಷೆಗೆ ತಕ್ಕ ಫೋನ್‌ ಆಗಿದೆ ಎಂದು ಎಚ್‌ಎಂಡಿ ಗ್ಲೋಬಲ್‌ನ ಉಪಾಧ್ಯಕ್ಷ ಸನ್ಮೀತ್‌ ಸಿಂಗ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು