ಗುರುವಾರ , ಮೇ 26, 2022
23 °C

Nokia XR20: ಬಲಿಷ್ಠ ವಿನ್ಯಾಸ ಮತ್ತು ಮಿಲಿಟರಿ ದರ್ಜೆಯ ಸ್ಮಾರ್ಟ್‌ಫೋನ್ ಬಿಡುಗಡೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Nokia XR20

ಬೆಂಗಳೂರು: ನೋಕಿಯಾ ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಆಕರ್ಷಕ ಮಾದರಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.

ಮಿಲಿಟರಿ ದರ್ಜೆಯ ವಿನ್ಯಾಸ ಮತ್ತು ಬಲಿಷ್ಠ ನಿರ್ಮಾಣದ ಗುಣಮಟ್ಟ ಹೊಂದಿರುವ ಭರವಸೆಯೊಂದಿಗೆ ನೂತನ ನೋಕಿಯಾ XR20 ಸ್ಮಾರ್ಟ್‌ಫೋನ್ ಪರಿಚಯಿಸಿದೆ.

ನೋಕಿಯಾ XR20

ನೋಕಿಯಾ ನೂತನ XR20 ಸ್ಮಾರ್ಟ್‌ಫೋನ್, ಮುಂದಿನ ನಾಲ್ಕು ವರ್ಷಗಳ ಅವಧಿಗೆ ಮಾಸಿಕ ಭದ್ರತಾ ಅಪ್‌ಡೇಟ್ ಮತ್ತು ಮೂರು ವರ್ಷ ಸಾಫ್ಟ್‌ವೇರ್ ಅಪ್‌ಗ್ರೇಡ್ ಹೊಂದಿದೆ.

48 ಮೆಗಾಪಿಕ್ಸೆಲ್ ಝೆಸ್ ಅಪ್ಟಿಕ್ಸ್ ಡ್ಯುಯಲ್ ಲೆನ್ಸ್, 18W ಫಾಸ್ಟ್ ಚಾರ್ಜಿಂಗ್ ಜತೆಗೆ ಎರಡು ದಿನಗಳವರೆಗೆ ಬಾಳಿಕೆ ಬರುವ ಬ್ಯಾಟರಿ ಇದರಲ್ಲಿದೆ ಎಂದು ನೋಕಿಯಾ ಹೇಳಿದೆ.

ಬೆಲೆ ಮತ್ತು ಲಭ್ಯತೆ

ಹೊಸ ನೋಕಿಯಾ XR20, ಅಲ್ಟ್ರಾ ಬ್ಲೂ ಮತ್ತು ಗ್ರಾನೈಟ್ ಎಂಬ ಎರಡು ಬಣ್ಣಗಳಲ್ಲಿ ದೊರೆಯಲಿದೆ. ಅಲ್ಲದೆ, 6 GB ಮತ್ತು 128 GB ಆರಂಭಿಕ ಮಾದರಿ ಇದ್ದು, ₹46,999 ದರ ಹೊಂದಿದೆ. ಅಕ್ಟೋಬರ್‌ 20ರಿಂದ ಪ್ರಿ ಬುಕಿಂಗ್ ಆರಂಭವಾಗಲಿದ್ದು, 30 ಅಕ್ಟೋಬರ್‌ಗೆ ಮಾರುಕಟ್ಟೆಯಲ್ಲಿ ದೊರೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು