ಭಾನುವಾರ, ಜನವರಿ 23, 2022
26 °C

ದೇಶದ ಮಾರುಕಟ್ಟೆಗೆ ಹೊಸ ನೋಕಿಯಾ ಲೈಟ್ ಇಯರ್‌ಬಡ್ಸ್ ಬಿಡುಗಡೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಎಚ್‌ಎಂಡಿ ಗ್ಲೋಬಲ್ ಒಡೆತನದ ನೋಕಿಯಾ ಬ್ರ್ಯಾಂಡ್, ದೇಶದಲ್ಲಿ ಎರಡು ನೂತನ ಮಾದರಿಯ ಇಯರ್‌ಫೋನ್ ಪರಿಚಯಿಸಿದೆ.

ನೋಕಿಯಾ ಲೈಟ್ ಇಯರ್‌ಬಡ್ಸ್ ಬಿಎಚ್‌ 205 ಮತ್ತು ನೋಕಿಯಾ ವೈರ್ಡ್ ಬಡ್ಸ್ ಡಬ್ಲ್ಯುಬಿ–101 ಬಿಡುಗಡೆಯಾಗಿದ್ದು, ಆಕರ್ಷಕ ವಿನ್ಯಾಸ ಮತ್ತು ಉತ್ತಮ ಧ್ವನಿ ಹೊಂದಿದೆ ಎಂದು ಕಂಪನಿ ಹೇಳಿದೆ.

ಹೊಸ ನೋಕಿಯಾ ಬಡ್ಸ್, ನೋಕಿಯಾ ಡಾಟ್‌ಕಾಂ, ಪ್ರಮುಖ ರಿಟೇಲ್ ಮಳಿಗೆಗಳು ಮತ್ತು ಇ–ಕಾಮರ್ಸ್ ತಾಣಗಳಲ್ಲಿ ದೊರೆಯಲಿದೆ.

ಮನರಂಜನೆ, ಕಚೇರಿ ಕೆಲಸ, ಆಟ ಹಾಗೂ ವಿವಿಧ ಸಂದರ್ಭದಲ್ಲಿ ನೋಕಿಯಾ ಬಡ್ಸ್ ಬಳಸಬಹುದು ಎಂದು ಸಂಸ್ಥೆ ತಿಳಿಸಿದೆ.

ಬೆಲೆ ಮತ್ತು ವಿವರ
ನೋಕಿಯಾ ಲೈಟ್ ಇಯರ್‌ಬಡ್ಸ್ ಬಿಎಚ್‌ 205, 36 ಗಂಟೆಗಳ ಪ್ಲೇಟೈಮ್ ಒದಗಿಸಲಿದೆ. ದೇಶದಲ್ಲಿ ₹2,799 ದರವಿದೆ.

ನೋಕಿಯಾ ವೈರ್ಡ್ ಬಡ್ಸ್ ಡಬ್ಲ್ಯುಬಿ–101 ಸ್ಪಷ್ಟ ಧ್ವನಿ, ಕರೆ ನಿರ್ವಹಣೆ ಹೊಂದಿದ್ದು, ₹ 299ನಿಂದ ಆರಂಭ ಎಂದು ಕಂಪನಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು