ನೋಕಿಯಾ ಕಂಪನಿಯ 'ಪ್ಯೂರ್ಬುಕ್ ಎಕ್ಸ್14 ಲ್ಯಾಪ್ಟಾಪ್' (PureBook X14) ಭಾರತದಲ್ಲಿ ಬಿಡುಗಡೆಯಾಗಿದೆ. ಕೆಲವು ತಿಂಗಳ ಹಿಂದೆ ನೋಕಿಯಾದ ಆ್ಯಂಡ್ರಾಯ್ಡ್ ಸ್ಮಾರ್ಟ್ ಟಿವಿಗಳನ್ನು ಅನಾವರಣಗೊಳಿಸಿದ್ದ ವಾಲ್ಮಾರ್ಟ್ ಒಡೆತನದ ಫ್ಲಿಪ್ಕಾರ್ಟ್, ಈಗ ಭಾರತದ ಗ್ರಾಹಕರಿಗೆ ಸಮರ್ಥ ಲ್ಯಾಪ್ಟಾಪ್ ಆಯ್ಕೆಯನ್ನು ಮುಂದಿಟ್ಟಿದೆ.

ಈ ಲ್ಯಾಪ್ಟಾಪ್ ಇಂಟೆಲ್ ಕೋರ್ ಐ5 (10th gen) ಪ್ರೊಸೆಸರ್ನೊಂದಿಗೆ 4.2 ಜಿಗಾಹರ್ಟ್ಸ್ ಸಿಪಿಯು ಸ್ಪೀಡ್, 8ಜಿಬಿ ಡಿಡಿಆರ್4 ರ್ಯಾಮ್ ಹಾಗೂ 512ಜಿಬಿ ಸಂಗ್ರಹ ಸಾಮರ್ಥ್ಯ (ಎಸ್ಎಸ್ಡಿ) ನೀಡಲಾಗಿದೆ. ಇದರೊಂದಿಗೆ 65 ವ್ಯಾಟ್ ಚಾರ್ಜರ್ ನೀಡಲಾಗಿದ್ದು, ಬ್ಯಾಟರಿ ಒಮ್ಮೆ ಪೂರ್ಣ ಚಾರ್ಜ್ ಮಾಡಿ 8 ಗಂಟೆಗಳವರೆಗೂ ಕಾರ್ಯಾಚರಿಸಬಹುದು ಎಂದು ಕಂಪನಿ ಭರವಸೆ ನೀಡಿದೆ.

ಈ ಲ್ಯಾಪ್ಟಾಪ್ಗೆ ₹59,990 ಬೆಲೆ ನಿಗದಿ ಪಡಿಸಲಾಗಿದೆ. ಡಿಸೆಂಬರ್ 18ರಿಂದ ಫ್ಲಿಪ್ಕಾರ್ಟ್ನಲ್ಲಿ ಮುಂಚಿತವಾಗಿ ಬುಕ್ ಮಾಡಲು ಅವಕಾಶವಿದೆ.

ಬಳಕೆಗೆ ಹಗುರವಾದ (1.1 ಕೆ.ಜಿ ತೂಕ) ಮತ್ತು ತೆಳುವಾದ (16.8 ಮಿ.ಮೀ) ವಿನ್ಯಾಸದಿಂದ ನೋಕಿಯಾ ಪ್ಯೂರ್ಬುಕ್ ಎಕ್ಸ್14 ಲ್ಯಾಪ್ಟಾಪ್ ಗಮನ ಸೆಳೆದಿದೆ. 14 ಇಂಚು ಫುಲ್ ಎಚ್ಡಿ ಎಲ್ಇಡಿ–ಬ್ಯಾಕ್ಲೈಟ್ ಸ್ಕ್ರೀನ್, 250 ನಿಟ್ಸ್ ಬ್ರೈಟ್ನೆಸ್, 178 ಡಿಗ್ರಿ ವೀಕ್ಷಣೆ ಕೋನ, ಶೇ 86ರಷ್ಟು ಸ್ಕ್ರೀನ್ ಟು ಬಾಡಿ ರೇಷಿಯೊ ಒಳಗೊಂಡಿದೆ. ಡಾಲ್ಬಿ ಆಟಮ್ಸ್ ಮತ್ತು ವಿಷನ್ ಆಡಿಯೊ–ವಿಶ್ಯುವಲ್ ಅನುಭವ ಇಮ್ಮಡಿಗೊಳಿಸು ವ್ಯವಸ್ಥೆ ಇದೆ.

ಇಂಟೆಲ್ನ ಅಲ್ಟ್ರಾ ಎಚ್ಡಿ 620 ಗ್ರಾಫಿಕ್ಸ್ (1.1 ಗಿಗಾಹರ್ಟ್ಸ್ ಟರ್ಬೊ ಜಿಪಿಯು) ಅಳವಡಿಸಲಾಗಿದ್ದು, 4ಕೆ ಗುಣಮುಟ್ಟದ ವಿಡಿಯೊಗಳಿಗೆ ಪೂರಕವಾಗಿದೆ. ಇಂಟೆಲ್ ಕ್ವಿಕ್ ಸಿಂಕ್ ವಿಡಿಯೊ, ಇಂಟೆಲ್ ಇಂಟ್ಟ್ರು 3ಡಿ ತಂತ್ರಜ್ಞಾನ, ಇಂಟೆಲ್ ಕ್ಲಿಯರ್ ವಿಡಿಯೊ ಎಚ್ಡಿ ಟೆಕ್ನಾಲಜಿಗಳ ಮೂಲಕ ವಿಡಿಯೊ ಸ್ಪಷ್ಟತೆ ಹಾಗೂ ಗುಣಮಟ್ಟದ ಡಿಸ್ಪ್ಲೇಗೆ ಒತ್ತು ನೀಡಲಾಗಿದೆ.

ಇದರಲ್ಲಿರುವ ಎಚ್ಡಿ ಐಆರ್ ವೆಬ್ಕ್ಯಾಮ್ ಮೂಲಕ ಮುಖದ ಗುರುತು ಗಮನಿಸಿ ಲ್ಯಾಪ್ಟಾಪ್ ತೆರೆಯಲು (ಫೇಸ್ ಅನ್ಲಾಕ್) ಅವಕಾಶವಿದೆ. ಇನ್ನೂ ಸಂಪರ್ಕಕ್ಕಾಗಿ ಡ್ಯೂಯಲ್ ಬ್ಯಾಂಡ್ ವೈ–ಫೈ, ಬ್ಲೂಟೂಥ್ 5.1 ವ್ಯವಸ್ಥೆ ಇದೆ. ಯುಎಸ್ಬಿ 3.1, ಯುಎಸ್ಬಿ 2.0, ಯುಎಸ್ಬಿ ಟೈಪ್ ಸಿ, ಎಚ್ಡಿಎಂಐ, ಆರ್ಜೆ45, ಆಡಿಯೊ ಜ್ಯಾಕ್ ಔಟ್, ಮೈಕ್ ಇನ್ ಪೋರ್ಟ್ಗಳನ್ನು ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.