ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒನ್‌ಪ್ಲಸ್ ಹೊಸ ನಾರ್ಡ್ ಸ್ಮಾರ್ಟ್‌ವಾಚ್: ಬಿಡುಗಡೆಗೂ ಮೊದಲೇ ವಿವರ ಸೋರಿಕೆ

ಒನ್‌ಪ್ಲಸ್ ನೂತನ ಸ್ಮಾರ್ಟ್‌ವಾಚ್
Last Updated 26 ಸೆಪ್ಟೆಂಬರ್ 2022, 5:31 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಒನ್‌ಪ್ಲಸ್ ನೂತನ ನಾರ್ಡ್ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಲು ಮುಂದಾಗಿದೆ. ಹೊಸ ನಾರ್ಡ್ ಸ್ಮಾರ್ಟ್‌ವಾಚ್ ಪರಿಚಯಿಸುವ ಮುನ್ನವೇ ಅದರ ವಿವರಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ.

ನೀಲಿ ಮತ್ತು ಕಪ್ಪು ಬಣ್ಣದಲ್ಲಿ ಹೊಸ ಒನ್‌ಪ್ಲಸ್ ನಾರ್ಡ್ ಸ್ಮಾರ್ಟ್‌ವಾಚ್ ದೊರೆಯಲಿದೆ. ಆಯತಾಕಾರದ 1.78 ಇಂಚಿನ ಅಮೊಲೆಡ್ ಡಿಸ್‌ಪ್ಲೇ ಇದರಲ್ಲಿರುತ್ತದೆ.

91 ಮೊಬೈಲ್ಸ್, ನಾರ್ಡ್ ಸ್ಮಾರ್ಟ್‌ವಾಚ್ ವಿವರಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಿದೆ. ಹೃದಯ ಬಡಿತ ಮಾಪನ ಮತ್ತು ವಿವಿಧ ಫಿಟ್ನೆಸ್ ಮೋಡ್‌ಗೆ ಬೆಂಬಲ ಹೊಸ ಸ್ಮಾರ್ಟ್‌ವಾಚ್‌ನ ವಿಶೇಷತೆಯಾಗಿದೆ.

IP68 ರೇಟಿಂಗ್ ಜತೆಗೆ ಆ್ಯಂಡ್ರಾಯ್ಡ್ ಮತ್ತು ಐಫೋನ್ ಜತೆಗೂ ಬಳಸಲು ಅನುಕೂಲವಾಗುವಂತೆ ಹೊಸ ಒನ್‌ಪ್ಲಸ್ ನಾರ್ಡ್ ವಾಚ್ ತಯಾರಿಸಲಾಗಿದೆ ಎಂದು ಸೋರಿಕೆಯಾಗಿರುವ ವಿವರಗಳಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ 10 ದಿನದ ಬ್ಯಾಟರಿ ಬಾಳಿಕೆ ಕೂಡ ಇರಲಿದೆ ಎನ್ನಲಾಗಿದೆ.

ಹೊಸ ವಾಚ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ಒನ್‌ಪ್ಲಸ್ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT