ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Reno 6 Pro: ಹಬ್ಬದ ಸೀಸನ್‌ಗೆ ವಿಶೇಷ ಆವೃತ್ತಿ ಸ್ಮಾರ್ಟ್‌ಫೋನ್ ಪರಿಚಯಿಸಿದ ಒಪ್ಪೊ

Last Updated 28 ಸೆಪ್ಟೆಂಬರ್ 2021, 12:24 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಒಪ್ಪೊ ಸಂಸ್ಥೆ ಹಬ್ಬದ ವಿಶೇಷ ಮಾರಾಟಕ್ಕೆ ಸಜ್ಜಾಗಿದೆ. ಅಲ್ಲದೆ, ಅದಕ್ಕೆ ಪೂರಕವಾಗಿ ದೀಪಾವಳಿ ಆವೃತ್ತಿ ಸ್ಮಾರ್ಟ್‌ಫೋನ್ ಪರಿಚಯಿಸಿದೆ.

ಒಪ್ಪೊ ರೆನೊ ಸರಣಿಯಲ್ಲಿ ನೂತನ ರೆನೊ 6 ಪ್ರೊ 5G ದೀಪಾವಳಿ ಆವೃತ್ತಿಯನ್ನು ಕಂಪನಿ ಪರಿಚಯಿಸಿದೆ.

ಅಲ್ಲದೆ, ಒಪ್ಪೊ ಎಫ್‌19ಎಸ್ ಸ್ಮಾರ್ಟ್‌ಫೋನ್ ಮತ್ತು ಒಪ್ಪೊ ಎಂಕೊ ಬಡ್ಸ್ ಮೇಲೆ ವಿಶೇಷ ದರಕಡಿತವನ್ನು ಕಂಪನಿ ಪ್ರಕಟಿಸಿದೆ.

ದರ ವಿವರ

ಒಪ್ಪೊ ರೆನೊ 6 ಪ್ರೊ 5G ದೀಪಾವಳಿ ಆವೃತ್ತಿ ಸ್ಮಾರ್ಟ್‌ಫೋನ್‌ಗೆ ದೇಶದಲ್ಲಿ ₹41,990 ಮತ್ತು ಒಪ್ಪೊ ಎಫ್‌19ಎಸ್ ಬೆಲೆ ₹19,990 ಇದೆ. ಮತ್ತೊಂದೆಡೆ ಒಪ್ಪೊ ಎಂಕೊ ಬಡ್ಸ್ ನೀಲಿ ಬಣ್ಣದ ಹೊಸ ಆವೃತ್ತಿ ₹1,999 ದರಕ್ಕೆ ದೊರೆಯಲಿದೆ.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ವಿಶೇಷ ಆಫರ್ ಸೇಲ್‌ ಮೂಲಕ ಹೊಸ ಒಪ್ಪೊ ರೆನೊ 6 ಪ್ರೊ 5G ದೀಪಾವಳಿ ಆವೃತ್ತಿ ಮತ್ತು ಒಪ್ಪೊ ಎಂಕೊ ಬಡ್ಸ್ ನೀಲಿ ಆವೃತ್ತಿ ಖರೀದಿಗೆ ಲಭ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT