ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾಜೆಟ್ ಮಾರುಕಟ್ಟೆಗೆ ಪ್ಯಾನಸೋನಿಕ್ ಟಫ್‌ಬುಕ್ ಟ್ಯಾಬ್ಲೆಟ್: ಬೆಲೆ ವಿವರ

Last Updated 21 ಡಿಸೆಂಬರ್ 2021, 6:16 IST
ಅಕ್ಷರ ಗಾತ್ರ

ಬೆಂಗಳೂರು: ಲಾಜಿಸ್ಟಿಕ್ಸ್, ಸಾರಿಗೆ, ನಿರ್ಮಾಣ ಪ್ರದೇಶ ಮತ್ತು ಉದ್ಯಮದಲ್ಲಿ ಬಳಕೆ ಮಾಡಲು ಅನುಕೂಲವಾಗುವಂತಹ ಟ್ಯಾಬ್ಲೆಟ್ ಅನ್ನು ಪ್ಯಾನಸೋನಿಕ್ ದೇಶದಲ್ಲಿ ಬಿಡುಗಡೆ ಮಾಡಿದೆ.

ಹೆಚ್ಚಿನ ತಾಪಮಾನ ಮತ್ತು ಚಳಿ ಇರುವಲ್ಲಿಯೂ ಸರಾಗವಾಗಿ ಕಾರ್ಯನಿವರ್ಹಿಸಬಲ್ಲ ಮತ್ತು ಅಧಿಕ ಬ್ಯಾಟರಿ ಸಾಮರ್ಥ್ಯದ ಪ್ಯಾನಸೋನಿಕ್ ಟಫ್‌ಬುಕ್ ಎಸ್‌1 ಬೆಲೆ ದೇಶದಲ್ಲಿ ₹98,000 ದಿಂದ ಆರಂಭವಾಗುತ್ತದೆ.

ಟಫ್‌ಬುಕ್ ಎಸ್‌1
7 ಇಂಚಿನ ಡಿಸ್‌ಪ್ಲೇ ಹೊಂದಿರುವ ಪ್ಯಾನಸೋನಿಕ್ ಟ್ಯಾಬ್ಲೆಟ್, ಹೆಚ್ಚು ಪ್ರಖರ ಬೆಳಕು ಇರುವಾಗಲೂ ಸಲೀಸಾಗಿ ಕಾರ್ಯನಿರ್ವಹಿಸುತ್ತದೆ. ಜತೆಗೆ ಗಟ್ಟಿಯಾದ ಹೊರಮೈ ಹೊಂದಿರುವುದರಿಂದ ಸಾಮಾನ್ಯವಾಗಿ ಕೆಳಗಡೆ ಬಿದ್ದರೂ ಏನೂ ಆಗುವುದಿಲ್ಲ.

ಒಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 660 ಪ್ರೊಸೆಸರ್ ಮತ್ತು ಅಡ್ರೆನೊ 512 ಗ್ರಾಫಿಕ್ಸ್, 4 GB RAM ಹಾಗೂ 64 GB ಮೆಮೊರಿ ಸ್ಟೋರೇಜ್ ಹೊಂದಿದೆ. ಹಾಗೂ 3,200mAh ಹಾಗೂ 5,580mAh ಎಂಬ ಎರಡು ಬ್ಯಾಟರಿ ಆಯ್ಕೆಗಳಲ್ಲಿ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT