ಭಾನುವಾರ, ನವೆಂಬರ್ 28, 2021
20 °C

ದೇಶದ ಮಾರುಕಟ್ಟೆಗೆ ಬಿಡುಗಡೆಯಾಯ್ತು ಹೊಸ ಪೋಕೊ ಸ್ಮಾರ್ಟ್‌ಫೋನ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Poco India

ಬೆಂಗಳೂರು: ಗ್ಯಾಜೆಟ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಪೋಕೊ, ದೇಶದಲ್ಲಿ ಹೊಸ ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.

ಪೋಕೊ ಸಿ ಸರಣಿಯಲ್ಲಿ ಹೊಸ C31 ಪರಿಚಯಿಸಲ್ಪಟ್ಟಿದ್ದು, ಬಜೆಟ್ ದರ ಹೊಂದಿದೆ. ಮೀಡಿಯಾಟೆಕ್ ಹೆಲಿಯೊ G35 ಪ್ರೊಸೆಸರ್ ಇದರಲ್ಲಿದೆ.

ಬೆಲೆ ಮತ್ತು ಲಭ್ಯತೆ

ಪೋಕೊ C31 ಸ್ಮಾರ್ಟ್‌ಫೋನ್ 3 GB + 32 GB ಮಾದರಿಗೆ ದೇಶದಲ್ಲಿ ₹8,499 ಮತ್ತು 4 GB + 64 GB ಆವೃತ್ತಿಗೆ ₹9,499 ದರ ನಿಗದಿಪಡಿಸಲಾಗಿದೆ.

ಅಕ್ಟೋಬರ್ 3ರಿಂದ ಆರಂಭವಾಗುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ಮೂಲಕ ನೂತನ ಪೋಕೊ C31 ದೊರೆಯಲಿದ್ದು, ಶಾಡೋ ಗ್ರೇ ಮತ್ತು ರಾಯಲ್ ಬ್ಲೂ ಎಂಬ ಮೂರು ಬಣ್ಣಗಳ ಆಯ್ಕೆಯಿದೆ. ಜತೆಗೆ ಆರಂಭಿಕ ಕೊಡುಗೆಯಾಗಿ ₹500 ರಿಯಾಯಿತಿಯೂ ಇರಲಿದೆ ಎಂದು ಕಂಪನಿ ಹೇಳಿದೆ.

ಪೋಕೊ C31

6.53 ಇಂಚಿನ ಡಿಸ್‌ಪ್ಲೇ, ಹಿಂಭಾಗದಲ್ಲಿ 13 + 2 + 2 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಸೆಲ್ಫಿ ಇದರಲ್ಲಿದೆ. ಜತೆಗೆ 5000mAh ಬ್ಯಾಟರಿ ಬೆಂಬಲವೂ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು