ಮಂಗಳವಾರ, ಮೇ 18, 2021
30 °C

Poco C3: 10 ಲಕ್ಷ ಯೂನಿಟ್‍ ಮಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪೊಕೊ ಸಿ3 ಹ್ಯಾಂಡ್‌ಸೆಟ್‌ 10 ಲಕ್ಷಕ್ಕೂ ಅಧಿಕ ಮಾರಾಟ ಕಂಡಿದೆ ಎಂದು ಭಾರತದ 3ನೇ ಅತ್ಯಂತ ದೊಡ್ಡ ಆನ್‍ಲೈನ್ ಸ್ಮಾರ್ಟ್‍ಫೋನ್ ಬ್ರ್ಯಾಂಡ್‌ ಆಗಿರುವ ಪೊಕೊ ಗುರುವಾರ ತಿಳಿಸಿದೆ.

ಇತ್ತೀಚೆಗೆ ಬಿಡುಗಡೆಯಾದ ಪೊಕೊ ಸಿ3 ₹10000ಕ್ಕಿಂತ ಕಡಿಮೆ ಬೆಲೆಯ ವರ್ಗವನ್ನು ತನ್ನ ಸ್ವಚ್ಛ ಯುಐ ಮೂಲಕ ಮರು ವ್ಯಾಖ್ಯಾನಿಸಿದೆ. 6.53 ಇಂಚು ಎಚ್‌ಡಿ+ಎಲ್‍ಸಿಡಿಯಿಂದ ಹೀಲಿಯೊ ಜಿ35 ಚಿಪ್‍ಸೆಟ್‍, 5,000 ಎಂಎಎಚ್ ಬ್ಯಾಟರಿ, 13ಎಂಪಿ ಟ್ರಿಪಲ್ ಕ್ಯಾಮರಾ ಸೆಟಪ್ ಮತ್ತು 5ಎಂಪಿ ಫ್ರಂಟ್ ಕ್ಯಾಮರಾ ಹೊಂದಿದೆ.

ಕೈಗೆಟಕುವ ಬೆಲೆಗಳಲ್ಲಿ ಈ ವರ್ಗದ ಅತ್ಯುತ್ತಮ ಉತ್ಪನ್ನವನ್ನು ತರುವ ಮೂಲಕ ಗ್ರಾಹಕರನ್ನು ಸಂತೃಪ್ತಗೊಳಿಸುವುದನ್ನು ಮುಂದುವರಿಸುತ್ತಿರುವ ಪೊಕೊ ಸಿ3 ದೇಶದಲ್ಲಿ ಆನ್‍ಲೈನ್‍ನಲ್ಲಿ ಅತ್ಯಂತ ಹೆಚ್ಚು ಮಾರಾಟವಾಗುವ ಟಾಪ್ 3 ಫೋನ್‍ಗಳ ಪಟ್ಟಿಯಲ್ಲಿ ಸೇರಿದೆ.

ನಿಯಮಿತ ಮಾರಾಟ ಬೆಲೆ ₹ 8,499(4/64ಜಿಬಿ) ಮತ್ತು ₹ 7,499(3/32ಜಿಬಿ) ಹೊಂದಿರುವ ಪೊಕೊ ಸಿ3 ಕ್ರಮವಾಗಿ ವಿಶೇಷ ರಿಯಾಯಿತಿ ಬೆಲೆ ₹ 7,999 ಮತ್ತು ₹ 6,999ಗಳಿಗೆ ದೊರೆಯುತ್ತದೆ.

ಜನವರಿ 24ರವರೆಗೆ ಪೊಕೊ ಸಿ3ಯ 3ಜಿಬಿ/32ಜಿ ವೇರಿಯೆಂಟ್ ಅನ್ನು ₹ 6,299 ಮತ್ತು 4ಜಿಬಿ/64ಜಿಬಿ ವೇರಿಯೆಂಟ್ ಅನ್ನು ₹ 7,199ಕ್ಕೆ(ಬ್ಯಾಂಕ್ ಕೊಡುಗೆಗಳನ್ನು ಒಳಗೊಂಡು) ಫ್ಲಿಪ್‍ಕಾರ್ಟ್‌ನಲ್ಲಿ ಪಡೆಯಬಹುದು ಎಂದು ತಿಳಿಸಿದೆ.

ಇದನ್ನೂ ಓದಿ: 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು