ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Realme GT Neo 3T: ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದ ರಿಯಲ್‌ಮಿ

ರಿಯಲ್‌ಮಿ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ
Last Updated 16 ಸೆಪ್ಟೆಂಬರ್ 2022, 15:46 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಮುಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ರಿಯಲ್‌ಮಿ, ಜಿಟಿ ಸರಣಿಯಲ್ಲಿ ಆಕರ್ಷಕ ಮಾದರಿಯನ್ನು ದೇಶದಲ್ಲಿ ಬಿಡುಗಡೆ ಮಾಡಿದೆ.

ರಿಯಲ್‌ಮಿ ಜಿಟಿ Neo 3T ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, 6.62 ಇಂಚಿನ ಫುಲ್‌ ಎಚ್‌ಡಿ+ ಅಮೊಲೆಡ್ ಡಿಸ್‌ಪ್ಲೇ, ಇನ್–ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸರ್ ಇದರ ವಿಶೇಷತೆಯಾಗಿದೆ.

ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 870 ಪ್ರೊಸೆಸರ್ ಜತೆಗೆ ಹೊಸ ರಿಯಲ್‌ಮಿ ಸ್ಮಾರ್ಟ್‌ಪೋನ್‌ನಲ್ಲಿ Adreno 650 GPU ಗ್ರಾಫಿಕ್ಸ್, 6 GB/8 GB LPDDR4x RAM ಮತ್ತು 128 GB/ 256 GB ಎಂಬ ಎರಡು ಸ್ಟೋರೇಜ್ ಆಯ್ಕೆ ಇದರಲ್ಲಿ ದೊರೆಯಲಿದೆ.

ಜತೆಗೆ, 5,000mAh ಬ್ಯಾಟರಿ ಮತ್ತು 80W ಚಾರ್ಜರ್ ಇದರಲ್ಲಿದೆ ಎಂದು ರಿಯಲ್‌ಮಿ ಹೇಳಿದೆ.

ಹಿಂಭಾಗದಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 8 ಮೆಗಾಪಿಕ್ಸೆಲ್ ಮತ್ತು 2 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಇದರಲ್ಲಿದೆ.

ಬೆಲೆ ಮತ್ತು ಲಭ್ಯತೆ
ರಿಯಲ್‌ಮಿ ಜಿಟಿ Neo 3T ಸ್ಮಾರ್ಟ್‌ಫೋನ್ ಹಳದಿ, ಬಿಳಿ ಮತ್ತು ಕಪ್ಪು ಬಣ್ಣದಲ್ಲಿ ದೊರೆಯಲಿದೆ.

6 GB RAM + 128 GB ಮಾದರಿಗೆ ₹29,999 ಹಾಗೂ 8 GB RAM + 128 GB ಆವೃತ್ತಿಗೆ ₹31,999 ಹಾಗೂ 8 GB RAM + 256 GB ಮಾದರಿ ₹33,999 ದರಕ್ಕೆ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT