ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Realme 10 | ಭಾರತದಲ್ಲಿ ಬಿಡುಗಡೆಯಾಯ್ತು ರಿಯಲ್‌ಮಿ ಹೊಸ ಸ್ಮಾರ್ಟ್‌ಫೋನ್

ರಿಯಲ್‌ಮಿ ನೂತನ ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಲಗ್ಗೆ
Last Updated 12 ಜನವರಿ 2023, 14:45 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ರಿಯಲ್‌ಮಿ, ನೂತನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.

ರಿಯಲ್‌ಮಿ 10 ದೇಶದಲ್ಲಿ ಬಿಡುಗಡೆಯಾಗಿದ್ದು, ಮಧ್ಯಮ ಬಜೆಟ್‌ನ ಫೋನ್ ಖರೀದಿಸುವವರಿಗೆ ಉತ್ತಮ ಆಯ್ಕೆ ಎಂದು ಕಂಪನಿ ಹೇಳಿದೆ.

ರಿಯಲ್‌ಮಿ 10
6.4 ಇಂಚಿನ ಡಿಸ್‌ಪ್ಲೇ, ಮೀಡಿಯಾಟೆಕ್ ಹೀಲಿಯೊ G99 ಪ್ರೊಸೆಸರ್, Arm Mali-G57 MC2 ಗ್ರಾಫಿಕ್ಸ್ ಬೆಂಬಲ ಹೊಂದಿದೆ. ಆ್ಯಂಡ್ರಾಯ್ಡ್ 12 ಆಧಾರಿತ ರಿಯಲ್‌ಮಿ ಯುಐ 3.0 ಓಎಸ್, 4 GB ಮತ್ತು 8 GB LPDDR4X RAM ಆಯ್ಕೆ, 64 GB ಮತ್ತು 128 GB UFS 2.2 ಸ್ಟೋರೇಜ್, 5,000mAh ಬ್ಯಾಟರಿ ಮತ್ತು 33W ಫಾಸ್ಟ್ ಚಾರ್ಜಿಂಗ್ ಸಹಿತ ಲಭ್ಯವಿದೆ ಎಂದು ರಿಯಲ್‌ಮಿ ತಿಳಿಸಿದೆ.

ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ, 2 ಮೆಗಾಪಿಕ್ಸೆಲ್ ಕ್ಯಾಮೆರಾ, 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಸ ರಿಯಲ್‌ಮಿ 10 ವಿಶೇಷತೆಯಾಗಿದೆ.

ಬೆಲೆ ಮತ್ತು ಲಭ್ಯತೆ
ಹೊಸ ರಿಯಲ್‌ಮಿ 10 ಸ್ಮಾರ್ಟ್‌ಫೋನ್, 4 GB RAM + 64 GB ಮಾದರಿಗೆ ₹13,999 ಮತ್ತು 8 GB RAM + 128 GB ಆವೃತ್ತಿಗೆ ₹16,999 ದರ ಹೊಂದಿದೆ. ಜನವರಿ 15ರಿಂದ, ಫ್ಲಿಪ್‌ಕಾರ್ಟ್ ಹಾಗೂ ರಿಯಲ್‌ಮಿ ಆನ್‌ಲೈನ್ ಸ್ಟೋರ್‌ ಮೂಲಕ ಖರೀದಿಸಬಹುದು ಎಂದು ಕಂಪನಿ ತಿಳಿಸಿದೆ. ಜತೆಗೆ ಸೀಮಿತ ಅವಧಿಗೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಆರಂಭಿಕ ಆವೃತ್ತಿಯ ಸ್ಮಾರ್ಟ್‌ಫೋನ್ ಅನ್ನು ₹13,999 ಬದಲಾಗಿ ₹12,999ಕ್ಕೆ ಖರೀದಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT