ಬೆಂಗಳೂರು: ರಿಯಲ್‌ಮಿ ಕಂಪನಿಯು ನಾರ್ಜೊ 60 ಸರಣಿಯ 5ಜಿ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನಾರ್ಜೊ 60 5ಜಿ ಸ್ಮಾರ್ಟ್‌ಫೋನ್ ಬೆಲೆ ₹17,999 ರಿಂದ ಮತ್ತು ನಾರ್ಜೊ 60 ಪ್ರೊ 5ಜಿ ಬೆಲೆ ₹23,999ರಿಂದ ಆರಂಭ ಆಗುತ್ತದೆ. ಅಮೆಜಾನ್ ಮತ್ತು ರಿಯಲ್‌ಮಿ ಜಾಲತಾಣದಲ್ಲಿ ಇದೇ 15ರಂದು ಮಾರಾಟ ಆಗಲಿದೆ.
ರಿಯಲ್‌ಮಿ ನಾರ್ಜೊ 60 ಪ್ರೊ 5ಜಿ, 1ಟಿಬಿ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಈ ಮೂಲಕ ಮಿಡ್–ಪ್ರೀಮಿಯಂ ವಿಭಾಗದಲ್ಲಿ ಭಾರತದ ಗ್ರಾಹಕರ ನಿರೀಕ್ಷೆಗಳನ್ನೂ ಮೀರಲಾಗಿದೆ ಎಂದು ಕಂಪನಿಯ ಮಾರುಕಟ್ಟೆ ಯೋಜನೆಗಳ ಮುಖ್ಯಸ್ಥ ಮನಿಷ್ ರಾಣಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾರ್ಜೊ 60 5ಜಿಯ ಪ್ರಮುಖ ವೈಶಿಷ್ಟ್ಯ: 90ಹರ್ಟ್ಸ್ ಸೂಪರ್ ಅಮೊಎಲ್‌ಇಡಿ ಡಿಸ್‌ಪ್ಲೇ, 64ಎಂಪಿ ಸ್ಟ್ರೀಟ್ ಫೋಟೊಗ್ರಫಿ ಕ್ಯಾಮೆರಾ, ಮೀಡಿಯಾಟೆಕ್ ಡೈಮೆನ್ಸಿಟಿ ಡಿ6020 5ಜಿ ಚಿಪ್‌ಸೆಟ್, 5 ಸಾವಿರ ಎಂಎಎಚ್ ಬ್ಯಾಟರಿ.
ನಾರ್ಜೊ 60 ಪ್ರೊ 5ಜಿಯ ಪ್ರಮುಖ ವೈಶಿಷ್ಟ್ಯ: 120 ಹರ್ಟ್ಸ್ ಕಾರ್ವ್ಡ್ ವಿಷನ್ 6.7 ಇಂಚ್ಎಂ ಡಿಸ್‌ಪ್ಲೇ, ಮೀಡಿಯಾಟೆಕ್ ಡೈಮೆನ್ಸಿಟಿ 7050 5ಜಿ ಚಿಪ್‌ಸೆಟ್, 100ಎಂಪಿ ಒಐಎಸ್ ಪ್ರೊ ಲೈಟ್ ಕ್ಯಾಮೆರಾ, 5 ಸಾವಿರ ಎಂಎಎಚ್ ಬ್ಯಾಟರಿ. 12ಜಿಬಿ+1ಟಿಬಿ ಸಾಮರ್ಥ್ಯದ ಫೋನ್ ಬೆಲೆ ₹29,999.
ರಿಯಲ್‌ಮಿ ಬಡ್ಸ್ ವೈಯರ್‌ಲೆಸ್ 3: ಇದರ ಬೆಲೆ ₹1,799 ಇದೆ. 12 ರಂದು ಮಾರಾಟ ಆರಂಭ ಆಗಲಿದ್ದು, ಮೊದಲ ಮಾರಾಟ ದರ ₹1,699 ಇರಲಿದೆ ಎಂದು ಕಂಪನಿಯು ತಿಳಿಸಿದೆ.