ಶನಿವಾರ, ಫೆಬ್ರವರಿ 22, 2020
19 °C
33 ನಿಮಿಷಗಳಲ್ಲಿ 100 ಶೇ. ಚಾರ್ಜ್

Realme X2Pro, Realme 5s ಭಾರತೀಯ ಮಾರುಕಟ್ಟೆಗೆ ಬಿಡುಗಡೆ

ಅವಿನಾಶ್ ಬಿ. Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ಸ್ಮಾರ್ಟ್ ಫೋನ್ ಅಲೆಗಳಲ್ಲಿ ಈಗ ಸದ್ದು ಮಾಡತೊಡಗಿರುವ ರಿಯಲ್‌ಮಿ, ರಿಯಲ್‌ಮಿ X2 Pro ಹಾಗೂ ರಿಯಲ್‌ಮಿ 5ಎಸ್ ಎಂಬ ಎರಡು ವಿನೂತನ ಸ್ಮಾರ್ಟ್ ಫೋನ್‌ಗಳನ್ನು ಬುಧವಾರ ರಾಜಧಾನಿಯಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿತು. X2Pro ರಿಯಲ್‌ಮಿಯ ಮೊದಲ ಫ್ಲ್ಯಾಗ್‌ಶಿಪ್ ಫೋನ್ ಆಗಿದೆ ಮತ್ತು 50W VOOC ವೇಗದ ಚಾರ್ಜಿಂಗ್ ವ್ಯವಸ್ಥೆಯಿರುವ ಮೊದಲ ಫೋನ್ ಕೂಡ ಆಗಿದೆ. 33 ನಿಮಿಷಗಳಲ್ಲಿ ಶೇ.100 ಚಾರ್ಜಿಂಗ್ ಆಗುತ್ತದೆ ಎಂದು ರಿಯಲ್‌ಮಿ ಇಂಡಿಯಾ ಸಿಇಒ ಮಾಧವ ಸೇಠ್ ಹೇಳಿದರು.

64 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸರ್ ಇರುವ ರಿಯಲ್‌ಮಿ ಎಕ್ಸ್‌ಟಿ ಮಾಡೆಲ್ ಅನ್ನು ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಕಂಪನಿಯು ಈಗ ಎಕ್ಸ್ ಸರಣಿಯ ವಿನೂತನ ಫೋನ್ ಬಿಡುಗಡೆಗೊಳಿಸಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿದೆ ಎಂದು ಮಾಧವ್ ಸೇಠ್ ವಿವರಿಸಿದರು.

ರಿಯಲ್‌ಮಿ ಎಕ್ಸ್‌2 ಪ್ರೋದಲ್ಲಿ ಏನಿದೆ?
ರಿಯಲ್‌ಮಿ X2 Pro ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿದೆ. 6.5 ಇಂಚು ಫುಲ್ ಹೆಚ್‌ಡಿ+ ಸೂಪರ್ AMOLED ಫ್ಲೂಯಿಡ್ ಡಿಸ್‌ಪ್ಲೇ, 90Hz ರೀಫ್ರೆಶ್ ರೇಟ್ ಜತೆಗೆ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಇದೆ. ಆಂಡ್ರಾಯ್ಡ್ 9 (ಪೈ) ಕಾರ್ಯಾಚರಣಾ ವ್ಯವಸ್ಥೆ ಆಧಾರಿತ ಕಲರ್‌ಒಎಸ್ 6.1, ಒಕ್ಟಾ ಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರ್ಯಾಗನ್ 855+ ಚಿಪ್‌ಸೆಟ್ ಹೊಂದಿರುವ ರಿಯಲ್‌ಮಿ X2 Pro, 8GB/128GB ಹಾಗೂ 12GB/256GB ಸ್ಟೋರೇಜ್ ಹೊಂದಿರುವ 2 ಆವೃತ್ತಿಗಳಲ್ಲಿ ಲಭ್ಯವಿದೆ.

64 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ GW1 ISOCELL ಪ್ರೈಮರಿ ಕ್ಯಾಮೆರಾ ಸೆನ್ಸರ್ ಇದ್ದು, ಜತೆಗೆ 13 ಮೆಗಾಪಿಕ್ಸೆಲ್ ಸಾಮರ್ಥ್ಯದ ಟೆಲಿಫೋಟೋ ಸೆನ್ಸರ್, 8 ಮೆಗಾಪಿಕ್ಸೆಲ್‌ನ 115 ಡಿಗ್ರಿ ವೈಡ್ ಆ್ಯಂಗಲ್ ಲೆನ್ಸ್ ಹಾಗೂ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ - ಹೀಗೆ ನಾಲ್ಕು ಕ್ಯಾಮೆರಾಗಳು ಇದರಲ್ಲಿವೆ. ಸೆಲ್ಫೀ ಕ್ಯಾಮೆರಾ 16 ಮೆಗಾಪಿಕ್ಸೆಲ್ ಸಾಮರ್ಥ್ಯದ್ದಾಗಿದ್ದು, ಸೋನಿ ಐಎಂಎಕ್ಸ್471 ಮಾದರಿಯದ್ದು.

ಯುಎಸ್‌ಬಿ ಟೈಪ್ ಸಿ ಪೋರ್ಟ್ ಜತೆಗೆ 3.5 ಮಿಮೀ ಹೆಡ್‌ಫೋನ್ ಜಾಕ್ ಕೂಡ ಇದ್ದು, ನಿಯರ್ ಫೀಲ್ಡ್ ಕಮ್ಯುನಿಕೇಶನ್ (ಎನ್‌ಎಫ್‌ಸಿ) ವೈಶಿಷ್ಟ್ಯವು ಅಳವಡಿಕೆಯಾಗಿ ಬಂದಿದೆ. 4000 mAh ಬ್ಯಾಟರಿ ಸಾಮರ್ಥ್ಯ, 50W ಸೂಪರ್ VOOC ವೇಗದ ಚಾರ್ಜಿಂಗ್ ವ್ಯವಸ್ಥೆ, ಡಾಲ್ಬಿ ಅಟ್ಮಾಸ್ ಡ್ಯುಯಲ್ ಸ್ಪೀಕರ್ಸ್ ಹಾಗೂ ಹೈ ರೆಸೊಲ್ಯುಶನ್ ಆಡಿಯೋ ತಂತ್ರಜ್ಞಾನ, ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಅನ್‌ಲಾಕಿಂಗ್ ವ್ಯವಸ್ಥೆ ಇದೆ.

8ಜಿಬಿ+128ಜಿಬಿ ಮಾದರಿ Realme X2Pro ಬೆಲೆ 29,999 ರೂ.
12ಜಿಬಿ+256ಜಿಬಿ ಮಾದರಿ Realme X2Pro ಬೆಲೆ 33,999 ರೂ.

ಈ ಎರಡೂ ಮಾಡೆಲ್‌ಗಳು ಸದ್ಯಕ್ಕೆ ಆಹ್ವಾನದ ಮೂಲಕ ಮಾತ್ರ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದ್ದು, ಮೊದಲ ಮಾರಾಟ ನವೆಂಬರ್ 26ರಂದು (ಆಹ್ವಾನ ಉಳ್ಳವರಿಗೆ ಮಾತ್ರ) ನಡೆಯಲಿದೆ.

ಇದರೊಂದಿಗೆ, 12ಜಿಬಿ+256ಜಿಬಿ ಸಾಮರ್ಥ್ಯದ, ವಿಶೇಷ ವಿನ್ಯಾಸದ ಮಾಸ್ಟರ್ ಎಡಿಶನ್ Realme X2Pro ಬೆಲೆ 34,999 ರೂ. ಇದು ಕ್ರಿಸ್‌ಮಸ್ ಸಂದರ್ಭದಲ್ಲಿ ಮಾರುಕಟ್ಟೆಗೆ ಆಗಮಿಸಲಿದೆ.

ಇದೇ ರೀತಿ, ರಿಯಲ್‌ಮಿ 5ಎಸ್ ಕೂಡ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಡೈಮಂಡ್ ಕಟ್ ವಿನ್ಯಾಸ ಹಾಗೂ 48 ಮೆಗಾಪಿಕ್ಸೆಲ್ ಪ್ರಧಾನ ಕ್ಯಾಮೆರಾ ಸಹಿತ ನಾಲ್ಕು ಕ್ಯಾಮೆರಾಗಳ ಮೂಲಕ ಗಮನ ಸೆಳೆಯುತ್ತದೆ. ಇದು ಫ್ಲಿಪ್‌ಕಾರ್ಟ್ ಜಾಲ ತಾಣದಲ್ಲಿ ಮಾತ್ರವೇ ಲಭ್ಯವಿದ್ದು, ಮೊದಲ ಮಾರಾಟವು ನವೆಂಬರ್ 29ರಂದು ಫ್ಲಿಪ್‌ಕಾರ್ಟ್ ಮೂಲಕ ನಡೆಯಲಿದೆ. ಇದರ ಬೆಲೆ 4GB/64GB ಆವೃತ್ತಿಗೆ 9999 ಹಾಗೂ 4GB/128GB ಆವೃತ್ತಿಗೆ 10999 ರೂ.ಗಳು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು