ಭಾನುವಾರ, ಜುಲೈ 3, 2022
24 °C

Realme: ರಿಯಲ್‌ಮಿ ಎಕ್ಸ್‌7 ಮ್ಯಾಕ್ಸ್‌ 5ಜಿ ಸ್ಮಾರ್ಟ್‌ಫೋನ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸ್ಮಾರ್ಟ್‌ಫೋನ್‌ ತಯಾರಿಸುವ ಪ್ರಮುಖ ಕಂಪನಿ ರಿಯಲ್‌ಮಿ ದೇಶದ ಮಾರುಕಟ್ಟೆಗೆ ಹೊಸ ರಿಯಲ್‌ಮಿ ಎಕ್ಸ್‌7 ಮ್ಯಾಕ್ಸ್‌ 5ಜಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಜೂನ್‌ 4ರಿಂದ ಇದರ ಮಾರಾಟ ಆರಂಭವಾಗಲಿದೆ.

8GB+128GB ಸಾಮರ್ಥ್ಯದ ಹ್ಯಾಂಡ್‌ಸೆಟ್‌ ಬೆಲೆ ₹ 26,999 ಹಾಗೂ 12GB+256GB ಸಾಮರ್ಥ್ಯದ ಹ್ಯಾಂಡ್‌ಸೆಟ್‌ ಬೆಲೆ ₹ 29,999.

5ಜಿ ಬೆಂಬಲಿಸುವ ಮೀಡಿಯಾಟೆಕ್‌ ಡೈಮೆನ್ಸಿಟಿ 12.00 ಚಿಪ್‌ಸೆಟ್‌ ಹೊಂದಿರುವ ಭಾರತದ ಮೊದಲ ಸ್ಮಾರ್ಟ್‌ಫೋನ್‌ ಇದು ಎಂದು ಕಂಪನಿ ಹೇಳಿಕೊಂಡಿದೆ. 6.43 ಇಂಚಿನ 120ಹರ್ಟ್ಸ್‌ ಸೂಪರ್ ಅಮೊಎಲ್‌ಇಡಿ ಫುಲ್‌ ಸ್ಕ್ರೀನ್‌, 4,500 ಎಂಎಎಚ್‌ ಬ್ಯಾಟರಿ, 50ಡಬ್ಲ್ಯು ಸೂಪರ್‌ ಡಾರ್ಟ್‌ ಚಾರ್ಜರ್‌, ಸೋನಿ 64 ಎಂಪಿ ಟ್ರಿಪಲ್‌ ಕ್ಯಾಮೆರಾ, 16ಎಂಪಿ ಇನ್‌ಡಿಸ್‌ಪ್ಲೇ ಸೆಲ್ಫಿ ಕ್ಯಾಮೆರಾ ಇದರ ಪ್ರಮುಖ ಆಕರ್ಷಣೆ ಆಗಿದೆ.

ಈ ಸ್ಮಾರ್ಟ್‌ಫೋನ್‌ ಸೂಪರ್‌ಡಾರ್ಟ್‌ ಚಾರ್ಜ್‌ ಸೌಲಭ್ಯ ಹೊಂದಿದ್ದು, ಬ್ಯಾಟರಿಯು ಶೇಕಡ 50ರಷ್ಟು ಚಾರ್ಜ್‌ ಆಗಲು ಕೇವಲ 16 ನಿಮಿಷ ಸಾಕು ಎಂದು ಕಂಪನಿ ತಿಳಿಸಿದೆ.

ಎಕ್ಸ್‌ ಸರಣಿಯ ಮೂಲಕ ಹಲವು ಹೊಸ ತಂತ್ರಜ್ಞಾನಗಳನ್ನು ಮತ್ತು ಆಕರ್ಷಕ ವಿನ್ಯಾಸದ ಸ್ಮಾರ್ಟ್‌ಪೋನ್‌ಗಳನ್ನು ಕಂಪನಿಯು ಪರಿಚಯಿಸಿದೆ. 5ಜಿ ಕ್ಷೇತ್ರದಲ್ಲಿ ಮುಂಚೂಣಿಗೆ ಬರುವ ಗುರಿಯೊಂದಿಗೆ ರಿಯಲ್‌ಮಿ ಎಕ್ಸ್‌7 ಮ್ಯಾಕ್ಸ್‌ 5ಜಿ ಬಿಡುಗಡೆ ಮಾಡಲಾಗಿದೆ ಎಂದು ರಿಯಲ್‌ಮಿ ಇಂಡಿಯಾದ ಸಿಇಒ ಮಾಧವ್‌ ಸೇಠ್‌ ತಿಳಿಸಿದರು.

ಸ್ಮಾರ್ಟ್‌ ಟಿವಿ: ಕಂಪನಿಯು ‘ರಿಯಲ್‌ಮಿ ಸ್ಮಾರ್ಟ್‌ ಟಿವಿ 4ಕೆ’ ಸಹ ಬಿಡುಗಡೆ ಮಾಡಿದೆ. 43 ಇಂಚು ಮತ್ತು 50 ಇಂಚುಗಳ ಆಯ್ಕೆಗಳಲ್ಲಿ ಲಭ್ಯವಿದ್ದು, ಬೆಲೆ ₹ 27,999ರಿಂದ ಆರಂಭವಾಗುತ್ತದೆ. ಇದು ಸಹ ಜೂನ್‌ 4ರಿಂದ ಖರೀದಿಗೆ ಲಭ್ಯವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು