ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

JioPhone 5G | ಬರಲಿದೆ ರಿಲಯನ್ಸ್ ಜಿಯೊ ಫೋನ್ 5G

ರಿಲಯನ್ಸ್ ಹೊಸ ಜಿಯೊ ಫೋನ್ 5G
Last Updated 29 ಸೆಪ್ಟೆಂಬರ್ 2022, 8:27 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಪ್ರಮುಖ ಉದ್ಯಮ ಸಂಸ್ಥೆ ರಿಲಯನ್ಸ್, ಜಿಯೊ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ನೂತನ ರಿಲಯನ್ಸ್ ಜಿಯೊ 5G ಸ್ಮಾರ್ಟ್‌ಫೋನ್‌ನಲ್ಲಿ ಸ್ನ್ಯಾಪ್‌ಡ್ರ್ಯಾಗನ್ 480 ಪ್ರೊಸೆಸರ್ ಮತ್ತು 4 GB RAM ಹಾಗೂ 32 GB ಸ್ಟೋರೇಜ್ ಇರಲಿದೆ ಎನ್ನಲಾಗಿದೆ.

ಜನಸಾಮಾನ್ಯರಿಗೆ ಕೂಡ ಕಡಿಮೆ ದರಕ್ಕೆ 5G ಸ್ಮಾರ್ಟ್‌ಫೋನ್ ಒದಗಿಸಬೇಕು ಎನ್ನುವುದು ರಿಲಯನ್ಸ್ ಉದ್ದೇಶವಾಗಿದೆ.

ನೂತನ ಜಿಯೊ 5G ಸ್ಮಾರ್ಟ್‌ಫೋನ್, ಆ್ಯಂಡ್ರಾಯ್ಡ್ 12 ಓಎಸ್ ಹಾಗೂ 5,000mAh ಬ್ಯಾಟರಿ ಸಾಮರ್ಥ್ಯ ಹೊಂದಿರುತ್ತದೆ ಎಂದು 91 ಮೊಬೈಲ್ಸ್ ವರದಿ ಮಾಡಿದೆ.

ಗೂಗಲ್ ಸಹಯೋಗದಲ್ಲಿ ಹೊಸ 5G ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪ್ರವೇಶಿಸಲಿದೆ. ದೇಶದಲ್ಲಿ 5G ತಂತ್ರಜ್ಞಾನ ಅಭಿವೃದ್ಧಿಪಡಿಸಲು ರಿಲಯನ್ಸ್ ₹2 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT