ಶನಿವಾರ, ಏಪ್ರಿಲ್ 1, 2023
29 °C

ಸ್ಯಾಮ್‌ಸಂಗ್ ಹೊಸ ಎ ಸೀರೀಸ್ ಬಿಡುಗಡೆ, 5ಜಿ ಫೋನ್‌ನಿಂದ ಶೇ.75 ವಹಿವಾಟು ನಿರೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ಮುಂಚೂಣಿಯ ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ ಸಿರೀಸ್‌ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಗೊಳಿಸಿದ್ದು, ಈ ವರ್ಷ 5ಜಿ ಸ್ಮಾರ್ಟ್‌ಫೋನ್ ಮಾರಾಟದಿಂದ ಶೇ 75ರಷ್ಟು ವಹಿವಾಟು ನಿರೀಕ್ಷೆಯಲ್ಲಿದೆ.

2022ರ ಜನವರಿ-ನವೆಂಬರ್ ನಡುವೆ ಸಂಸ್ಥೆಯ ಮೊಬೈಲ್ ವಹಿವಾಟು ಶೇ. 22ರಷ್ಟು ಹೆಚ್ಚಾಗಿದೆ. ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವಹಿವಾಟು ಕುದುರಿಸಿಕೊಳ್ಳುವ ಗುರಿ ಹೊಂದಲಾಗಿದೆ ಎಂದು ಸ್ಯಾಮ್‌ಸಂಗ್ ಇಂಡಿಯಾದ ಮೊಬೈಲ್ ವ್ಯವಹಾರದ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲನ್ ತಿಳಿಸಿದ್ದಾರೆ.

2023ರಲ್ಲಿ 5ಜಿಗೆ ಆದ್ಯತೆ ನೀಡುವುದಾಗಿ ಅವರು ತಿಳಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ 5ಜಿ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಮುಂಚೂಣಿಯಲ್ಲಿದೆ. ಈ ವರ್ಷ 1.6 ಪಟ್ಟು ವಿಸ್ತರಿಸಲಿದ್ದೇವೆ. ಜನವರಿ ಆರಂಭದಲ್ಲೇ ಎ ಸಿರೀಸ್ ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದ್ದೇವೆ. ಈ ಮೂಲಕ ಉತ್ತಮ ಆರಂಭವನ್ನು ಪಡೆದಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: 

ಗ್ಯಾಲಕ್ಸಿ ಎ14 5ಜಿ ಮತ್ತು ಗ್ಯಾಲಕ್ಸಿ ಎ23 5ಜಿ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯೊಂದಿಗೆ ಶೇಕಡಾ 75ರಷ್ಟು ವಹಿವಾಟು ನಿರೀಕ್ಷೆಯಲ್ಲಿರುವುದಾಗಿ ಹೇಳಿದರು. 

ವಿಶ್ಲೇಷಕರ ಪ್ರಕಾರ, ಕಳೆದ ವರ್ಷ 5ಜಿಗಾಗಿ ಉದ್ಯಮದ ಕೊಡುಗೆ ಶೇ. 56ರಷ್ಟಾಗಿತ್ತು. ಮತ್ತೊಂದೆಡೆ 2022ರಲ್ಲಿ ಸ್ಯಾಮ್‌ಸಂಗ್ ಇಂಡಿಯಾದ ಮೊಬೈಲ್ ವಹಿವಾಟಿನಲ್ಲಿ 5ಜಿ ಪಾಲು ಶೇ. 61ರಷ್ಟಾಗಿತ್ತು.

ಬೆಲೆ ಎಷ್ಟು?
ಗ್ಯಾಲಕ್ಸಿ ಎ14 5ಜಿ: ₹14,999
ಗ್ಯಾಲಕ್ಸಿ ಎ23 5ಜಿ: ₹20,990

ವಿಶಿಷ್ಟತೆ:
6.6 ಇಂಚಿನ ಎಚ್‌ಡಿ ಡಿಸ್‌ಪ್ಲೇ,
50 ಮೆಗಾಪಿಕ್ಸೆಲ್ ಕ್ಯಾಮೆರಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು