ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Samsung Galaxy M04: ಸ್ಯಾಮ್‌ಸಂಗ್ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ– ಬೆಲೆ ವಿವರ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ ಸರಣಿಯಲ್ಲಿ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ
Published : 18 ಡಿಸೆಂಬರ್ 2022, 10:38 IST
ಫಾಲೋ ಮಾಡಿ
Comments

ಬೆಂಗಳೂರು: ದೇಶದ ಗ್ಯಾಜೆಟ್‌ ಮಾರುಕಟ್ಟೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಸರಣಿಯಲ್ಲಿ ಹೊಸ ಮಾದರಿ ಪರಿಚಯಿಸಿದೆ.

ಗ್ಯಾಲಕ್ಸಿ M04 ಸ್ಮಾರ್ಟ್‌ಫೋನ್, ಸ್ಯಾಮ್‌ಸಂಗ್ ಇಂಡಿಯಾ ಮತ್ತು ಅಮೆಜಾನ್ ಆನ್‌ಲೈನ್ ಮೂಲಕ ದೊರೆಯುತ್ತದೆ.

ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ M04 ಸ್ಮಾರ್ಟ್‌ಫೋನ್‌ನಲ್ಲಿ 6.5 ಇಂಚಿನ ಎಚ್‌ಡಿ+ ಡಿಸ್‌ಪ್ಲೇ, ಮೀಡಿಯಾಟೆಕ್ ಹಿಲಿಯೊ ಪಿ35 ಪ್ರೊಸೆಸರ್ ಇದೆ ಎಂದು ಕಂಪನಿ ಹೇಳಿದೆ.

4GB RAM + 64GB ಹಾಗೂ 4GB RAM + 128GB ಎಂಬ ಎರಡು ಆವೃತ್ತಿಗಳಲ್ಲಿ ನೂತನ ಗ್ಯಾಲಕ್ಸಿ M04 ಸ್ಮಾರ್ಟ್‌ಫೋನ್ ಲಭ್ಯವಾಗಲಿದೆ. ಸೀ ಗ್ಲಾಸ್ ಗ್ರೀನ್ ಮತ್ತು ಶ್ಯಾಡೊ ಬ್ಲೂ ಬಣ್ಣದಲ್ಲಿ ಹೊಸ ಮಾದರಿ ದೊರೆಯುತ್ತಿದೆ.

ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಹಾಗೂ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.

ಬೆಲೆ ವಿವರ
4GB RAM + 64GB ಮಾದರಿಗೆ ₹9,499 ದರ ಮತ್ತು 4GB RAM + 128GB ಆವೃತ್ತಿಗೆ ₹10,499 ಬೆಲೆ ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT