ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್‌ಸಂಗ್ ಗ್ಯಾಲಕ್ಸಿ A22 ಬಿಡುಗಡೆ: ಬೆಲೆ ಮತ್ತು ಲಭ್ಯತೆ ವಿವರ

ಅಕ್ಷರ ಗಾತ್ರ

ಬೆಂಗಳೂರು: ದೇಶದ ಮಾರುಕಟ್ಟೆಗೆ ಮತ್ತೊಂದು ಸ್ಮಾರ್ಟ್‌ಫೋನ್ ಪರಿಚಯಿಸಿದೆ ಸ್ಯಾಮ್‌ಸಂಗ್. ಗ್ಯಾಲಕ್ಸಿ ಎ ಸರಣಿಯಲ್ಲಿ ಹೊಸದಾಗಿ A22 ಬಿಡುಗಡೆಯಾಗಿದೆ.

ಹೊಸ ಗ್ಯಾಲಕ್ಸಿ ಎ ಸರಣಿ ಸ್ಮಾರ್ಟ್‌ಫೋನ್‌ನಲ್ಲಿ 5000mAh ಬ್ಯಾಟರಿ, ಹಿಂಬದಿಯಲ್ಲಿ ನಾಲ್ಕು ಕ್ಯಾಮರಾ ವಿಶೇಷತೆಯಾಗಿದೆ.

ಗ್ಯಾಲಕ್ಸಿ A22

ಸ್ಯಾಮ್‌ಸಂಗ್ ನೂತನ ಗ್ಯಾಲಕ್ಸಿ A22 ಸ್ಮಾರ್ಟ್‌ಫೋನ್, 6 GB RAM ಮತ್ತು 128 GB ಸ್ಟೋರೇಜ್ ಆವೃತ್ತಿಯಲ್ಲಿ ದೊರೆಯಲಿದ್ದು, ₹18,499 ದರ ಹೊಂದಿದೆ. ಆರಂಭಿಕ ಕೊಡುಗೆಯಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರಿಗೆ ₹1,500 ಡಿಸ್ಕೌಂಟ್ ಕೂಡ ದೊರೆಯಲಿದೆ.

6.4 ಇಂಚಿನ ಎಚ್‌ಡಿ+ ಡಿಸ್‌ಪ್ಲೇ, ಹಿಂಭಾಗದಲ್ಲಿ 48 ಮೆಗಾಪಿಕ್ಸೆಲ್ ಜತೆಗೆ 8+2+2 ಮೆಗಾಪಿಕ್ಸೆಲ್ ಕ್ಯಾಮರಾ ಹಾಗೂ13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT