ಬುಧವಾರ, ಸೆಪ್ಟೆಂಬರ್ 29, 2021
19 °C

Samsung: ನೂತನ 5G ಗ್ಯಾಲಕ್ಸಿ ಸ್ಮಾರ್ಟ್‌ಫೋನ್ ಬಿಡುಗಡೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Samsung India

ಬೆಂಗಳೂರು: ಸ್ಯಾಮ್‌ಸಂಗ್ ದೇಶದ ಗ್ಯಾಜೆಟ್ ಮಾರುಕಟ್ಟೆಗೆ ನೂತನ ಗ್ಯಾಲಕ್ಸಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.

ಗ್ಯಾಲಕ್ಸಿ ಎ ಸರಣಿಯಲ್ಲಿ ಹೊಸದಾಗಿ A52s 5G ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಹಿಂಬದಿಯಲ್ಲಿ ನಾಲ್ಕು ಕ್ಯಾಮರಾ, ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್ ಹೊಂದಿದೆ.

ಪಂಚ್ ಹೋಲ್ ಸೆಲ್ಫಿ ಕ್ಯಾಮರಾ ಇದ್ದು, 120Hz ಅಮೊಲಿಡ್ ಡಿಸ್‌ಪ್ಲೇ, ಡಾಲ್ಬಿ ಅಟ್ಮೋಸ್ ಬೆಂಬಲ ಹೊಸ ಸ್ಯಾಮ್‌ಸಂಗ್ ಫೋನ್‌ನಲ್ಲಿದೆ.

ಬೆಲೆ ಮತ್ತು ಲಭ್ಯತೆ

ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ A52s 5G, 6GB+ 128 GB ಮಾದರಿಗೆ ದೇಶದಲ್ಲಿ ₹35,999 ಹಾಗೂ 8 GB + 128 GB ಆವೃತ್ತಿಗೆ ₹37,499 ದರವಿದೆ. ಓಸಮ್ ಬ್ಲ್ಯಾಕ್, ಓಸಮ್ ವೈಲೆಟ್ ಮತ್ತು ಓಸಮ್ ವೈಟ್ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ನೂತನ ಗ್ಯಾಲಕ್ಸಿ ಫೋನ್ ದೊರೆಯಲಿದೆ.

ಎಚ್‌ಡಿಎಫ್‌ಸಿ ಕಾರ್ಡ್ ಬಳಕೆದಾರರಿಗೆ ₹3000 ವಿಶೇಷ ಕ್ಯಾಶ್‌ಬ್ಯಾಕ್ ಕೊಡುಗೆ ಕೂಡ ಲಭ್ಯವಾಗಲಿದೆ.

64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮರಾ ಜತೆಗೆ, 12+5+5 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ, 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಕೂಡ ನೂತನ ಫೋನ್‌ನಲ್ಲಿದ್ದು, 4500mAh ಬ್ಯಾಟರಿ ಬೆಂಬಲ ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು