ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ ಎಸ್‌6 ಲೈಟ್‌ ಬಿಡುಗಡೆ:10.4 ಇಂಚು ಡಿಸ್‌ಪ್ಲೇ

ಅಕ್ಷರ ಗಾತ್ರ
ADVERTISEMENT
""

ಗುರುಗ್ರಾಮ: ಸ್ಯಾಮ್‌ಸಂಗ್‌ ಭಾರತದಲ್ಲಿ ತನ್ನ ಹೊಸ ಟ್ಯಾಬ್‌ ಗ್ಯಾಲಕ್ಸಿ ಎಸ್‌6 ಲೈಟ್‌ ಬಿಡುಗಡೆ ಮಾಡಿದೆ. ಆಟ ಮತ್ತು ಪಾಠ, ಕಾರ್ಯಚಟುವಟಿಕೆ ಎಲ್ಲ ರೀತಿಯ ಬಳಕೆಗೂ ಸಹಕಾರಿಯಾಗಿರುವುದಾಗಿ ಕಂಪನಿ ಹೇಳಿಕೊಂಡಿದೆ. ಹೊರ ಕವಚದಲ್ಲಿ ಮೆಟಲ್‌ ವಿನ್ಯಾಸವಿದ್ದು, ಎಸ್‌–ಪೆನ್‌ ನೀಡಲಾಗಿದೆ.

ಕೋವಿಡ್‌–19ನಿಂದಾಗಿ ಮನೆಯಿಂದಲೇ ಕೆಲಸ (ವರ್ಕ್‌ ಫ್ರಮ್‌ ಹೋಂ) ಮತ್ತು ಆನ್‌ಲೈನ್‌ ತರಗತಿಗಳು (ಇ–ಲರ್ನಿಂಗ್‌) ನಡೆಸುವುದು ಹೆಚ್ಚಿದೆ. ವಿದ್ಯಾರ್ಥಿಗಳು ಹಾಗೂ ವೃತ್ತಿ ನಿರತರಿಗೆ ಅನುಕೂಲವಾಗುವ ಅಂಶಗಳನ್ನು ಗ್ಯಾಲಕ್ಸಿ ಟ್ಯಾಬ್‌ ಎಸ್‌6 ಲೈಟ್‌ ಒಳಗೊಂಡಿದೆ. ಎಸ್‌ ಪೆನ್‌ನ ಸಹಾಯದಿಂದ ಒಂದಕ್ಕಿಂತ ಹೆಚ್ಚು ಕಾರ್ಯಗಳನ್ನು ಮಾಡುವುದು, ಅಗತ್ಯ ಮಾಹಿತಿ ಸೃಷ್ಟಿಸುವುದು, ಚಿತ್ರ ಬರೆಯುವುದು ಸುಲಭವಾಗಲಿದೆ. ಎಸ್‌ ಪೆನ್‌ಗೆ ಚಾರ್ಜ್‌ ಮಾಡುವ ಅಗತ್ಯವಿಲ್ಲ.

10.4 ಇಂಚು ಸ್ಕ್ರೀನ್‌, 467 ಗ್ರಾಂ ತೂಕವಿರುವ ಟ್ಯಾಬ್‌ನ ವಿನ್ಯಾಸ ಗಮನ ಸೆಳೆಯುತ್ತಿದೆ. ದೊಡ್ಡ ಸ್ಕೀನ್‌ನಿಂದಾಗಿ ವಿಡಿಯೊ ವೀಕ್ಷಣೆಗೂ ಅನುಕೂಲಕರವಾಗಿದೆ. ಎರಡು ಸ್ಪೀಕರ್‌ಗಳನ್ನು ಹೊಂದಿದ್ದು, ಡಾಲ್ಬಿ ಆಟಮ್ಸ್‌ 3ಡಿ ಸರೌಂಡ್‌ ಸೌಂಡ್‌ ಅನುಭವ ಸಿಗುತ್ತದೆ.

4ಜಿಬಿ ರ‍್ಯಾಮ್‌ ಮತ್ತು 64ಜಿಬಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಹೊಸ ಟ್ಯಾಬ್‌ನ ಸಿಮ್‌ ಡೇಟಾ ಬಳಸಬಹುದಾದ ಎಲ್‌ಟಿಇ ಮಾದರಿಗೆ ₹31,999 ಮತ್ತು ವೈ–ಫೈ ಮಾದರಿಗೆ ₹27,999 ನಿಗದಿಯಾಗಿದೆ. ಜೂನ್‌ 17ರಿಂದ ಮಾರಾಟ ಆರಂಭವಾಗಲಿದೆ.

ಕರೆ ಸ್ವೀಕರಿಸುವುದು, ಸಂದೇಶ ರವಾನೆ ಸೇರಿದಂತೆ ಸ್ಮಾರ್ಟ್‌ಫೋನ್‌ನ ಎಲ್ಲ ಬಳಕೆಗಳನ್ನೂ ಟ್ಯಾಬ್‌ ಮೂಲಕವೇ ನಿರ್ವಹಿಸಬಹುದು. ಆಕ್ಸ್‌ಫರ್ಡ್‌ ಗ್ರೇ, ಆ್ಯಂಗೊರಾ ಬ್ಲೂ ಹಾಗೂ ಶಿಫಾನ್‌ ಪಿಂಕ್‌ ಬಣ್ಣಗಳಲ್ಲಿ ಎಸ್‌6 ಲೈಟ್‌ ಟ್ಯಾಬ್‌ ಲಭ್ಯವಿದೆ. ಜೂನ್‌ 16ರ ವರೆಗೂ ಮುಂಚಿತವಾಗಿಯೇ ಬುಕ್‌ ಮಾಡಬಹುದಾಗಿದೆ. ಸ್ಯಾಮ್‌ಸಂಗ್‌ ಹಾಗೂ ಅಮೆಜಾನ್‌ ವೆಬ್‌ಸೈಟ್‌ಗಳಿಂದ ಬುಕ್‌ ಮಾಡುವ ಮೂಲಕ ಕೊಡುಗೆಗಳನ್ನು ಪಡೆಯಬಹುದಾಗಿದೆ. ₹2,999 ನೀಡಿದರೆ ಗ್ಯಾಲಕ್ಸಿ ಬಡ್ಸ್‌+ (₹11,900) ಅಥವಾ ₹2,500 ನೀಡಿ ಟ್ಯಾಬ್‌ನ ಬುಕ್ ಕವರ್‌ (₹4,999) ಪಡೆಯಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ ಎಸ್‌6 ಲೈಟ್‌ ಗುಣಲಕ್ಷಣಗಳು:

* ಡಿಸ್‌ಪ್ಲೇ:10.4 ಇಂಚು (2000x1200)
* ಕ್ಯಾಮೆರಾ: ಹಿಂಬದಿಯಲ್ಲಿ 8ಎಂಪಿ + ಮುಂದೆ 5ಎಂಪಿ
* ಸಾಮರ್ಥ್ಯ: 4ಜಿಬಿ ರ‍್ಯಾಮ್ + 64ಜಿಬಿ ಸಂಗ್ರಹ (1ಟಿಬಿ ವರೆಗೂ ವಿಸ್ತರಣೆ ಅವಕಾಶ)
* ಬ್ಯಾಟರಿ: 7,040 ಎಂಎಎಚ್‌
* ಪೆನ್‌: ಎಸ್‌–ಪೆನ್‌ (ಚಾರ್ಜಿಂಗ್‌ ಅಗತ್ಯವಿಲ್ಲ)
* ತೂಕ: 467 ಗ್ರಾಂ
* ಬೆಲೆ: ₹27,999ದಿಂದ ₹31,999

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT