ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್ಸಂಗ್‌ ನೋಟ್ 20 ಶೀಘ್ರವೇ ಲಭ್ಯ

ಟಿಕ್ ಟಾಕ್
Last Updated 9 ಆಗಸ್ಟ್ 2020, 19:45 IST
ಅಕ್ಷರ ಗಾತ್ರ

ದೇಶದ ಮೊಬೈಲ್‌ ಫೋನ್‌ ಮಾರುಕಟ್ಟೆಯಲ್ಲಿ ಸದ್ಯ ಮುಂಚೂಣಿಯಲ್ಲಿ ಇರುವ ಸ್ಯಾಮ್ಸಂಗ್‌ ಕಂಪನಿ, ಗ್ರಾಹಕರನ್ನು ಸೆಳೆಯಲು ಸದಾ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ.

ಈಚೆಗಷ್ಟೇ ಬಿಡುಗಡೆ ಮಾಡಿರುವ ಗೆಲಾಕ್ಸಿ ನೋಟ್‌ 20 ಸರಣಿಯ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್‌ ಎಸ್‌7 ಸರಣಿಗಳು, ಗೆಲಾಕ್ಸಿ ವಾಚ್‌3 ಮತ್ತು ಗೆಲಾಕ್ಸಿ ಬಡ್ಸ್‌ ಲೈವ್‌ ಶೀಘ್ರವೇ ದೇಶದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗಲಿವೆ ಎಂದು ಮೂಲಗಳು ತಿಳಿಸಿವೆ.

ಕಂಪನಿಯ ಫ್ಲ್ಯಾಗ್‌ಶಿಪ್‌ ಫೋನ್‌ ಆಗಿರುವ ಫೋಲ್ಡ್‌ 2 ಸದ್ಯಕ್ಕಂತೂ ಸಿಗುವ ಸೂಚನೆ ಇಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಭಾರತದಾಚೆಗೆ ಆಯ್ದ ಮಾರುಕಟ್ಟೆಗಳಲ್ಲಿ ಸೆಪ್ಟೆಂಬರ್‌ನಿಂದ ಸಿಗುವ ನಿರೀಕ್ಷೆ ಮಾಡಲಾಗಿದೆ.

ನೋಟ್‌ 20 6.7 ಮತ್ತು ನೋಟ್‌ 20 ಅಲ್ಟ್ರಾ 6.9 ಇಂಚಿನ ಡಿಸ್‌ಪ್ಲೇ ಹೊಂದಿದೆ. ಎಸ್‌–ಪೆನ್‌ ಮತ್ತು ಕ್ಯಾಮೆರಾ ವೈಶಿಷ್ಟ್ಯಗಳು ಬಳಕೆದಾರರ ಅನುಭವವನ್ನು ಹೆಚ್ಚಿಸಲಿವೆ ಎಂದು ಕಂಪನಿ ಹೇಳಿಕೊಂಡಿದೆ.

ಗೆಲಾಕ್ಸಿ ನೋಟ್‌ 64 ಎಂಪಿ ಕ್ಯಾಮೆರಾ ಹೊಂದಿದ್ದು 4ಜಿಗೆ ಬೆಂಬಲಿಸುತ್ತದೆ. ನೋಟ್‌ 20 ಅಲ್ಟ್ರಾ 108 ಎಂಪಿ ಕ್ಯಾಮೆರಾದ್ದಾಗಿದ್ದು 5ಜಿ ಬೆಂಬಲಿಸುತ್ತದೆ. ಬ್ಯಾಟರಿ ವಿಷಯದಲ್ಲಿ ಕ್ರಮವಾಗಿ 4,300 ಎಂಎಎಚ್‌ ಮತ್ತು 4,500 ಎಂಎಎಚ್‌ ಸಾಮರ್ಥ್ಯ ಹೊಂದಿವೆ. ಬೆಲೆ ₹ 77,999 ಮತ್ತು ₹ 1,04,999 ಇದೆ (256 ಜಿಬಿ ಮೆಮೊರಿ).

ಮುಂಚೂಣಿಯಲ್ಲಿ ಸ್ಯಾಮ್ಸಂಗ್‌: ಇಂಟರ್‌ನ್ಯಾಷನಲ್‌ ಡೇಟಾ ಕಾರ್ಪೊರೇಷನ್‌ (ಐಡಿಸಿ) ವರದಿಯ ಪ್ರಕಾರ, ಏಪ್ರಿಲ್‌–ಜೂನ್‌ ಅವಧಿಯಲ್ಲಿ ಒಟ್ಟಾರೆ ಮೊಬೈಲ್‌ ಫೋನ್‌ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್‌ ಮುಂಚೂಣಿಯಲ್ಲಿದೆ. ಇದರ ಮಾರುಕಟ್ಟೆ ಪಾಲು ಶೇ 24ರಷ್ಟಿದೆ. ಆದರೆ, ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಶಿಯೋಮಿ ಮೊದಲ ಸ್ಥಾನದಲ್ಲಿದ್ದು (ಶೇ 29.4). ಸ್ಯಾಮ್ಸಂಗ್ (ಶೇ 26.3) ಎರಡನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT