ಭಾನುವಾರ, ಅಕ್ಟೋಬರ್ 2, 2022
20 °C
ದೇಶದಲ್ಲಿ ಸ್ಯಾಮ್‌ಸಂಗ್ ನೂತನ ಸ್ಮಾರ್ಟ್‌ಫೋನ್‌ ಕಳೆದ ವಾರ ಬಿಡುಗಡೆಯಾಗಿತ್ತು.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಝೆಡ್ ಫೋಲ್ಡ್ 4, ಫ್ಲಿಪ್‌ 4 ಬೆಲೆ ವಿವರ ಬಹಿರಂಗ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

DH PHOTO

ಬೆಂಗಳೂರು: ನೂತನ ವೈಶಿಷ್ಟ್ಯಗಳೊಂದಿಗೆ ಕಳೆದ ವಾರ ದೇಶದ ಗ್ಯಾಜೆಟ್ ಮಾರುಕಟ್ಟೆ ಪ್ರವೇಶಿಸಿದ್ದ ಸ್ಯಾಮ್‌ಸಂಗ್ ಮಡಚಬಲ್ಲ ಸ್ಮಾರ್ಟ್‌ಫೋನ್‌ಗಳ ಬೆಲೆ ಬಹಿರಂಗವಾಗಿದೆ.

ಕಂಪನಿ ಹೊಸ ಗ್ಯಾಲಕ್ಸಿ ಝೆಡ್ ಫೋಲ್ಡ್4, ಫ್ಲಿಪ್‌4 ಬೆಲೆ ವಿವರವನ್ನು ಬಿಡುಗಡೆ ಮಾಡಿದೆ.

ಹೊಸ ಝೆಡ್ ಸರಣಿ ಸ್ಮಾರ್ಟ್‌ಫೋನ್ ಜತೆಗೆ ಗ್ಯಾಲಕ್ಸಿ ವಾಚ್ ಸಿರೀಸ್ 5 ಮತ್ತು ಗ್ಯಾಲಕ್ಸಿ ಬಡ್ಸ್ ಪ್ರೊ ದೇಶದಲ್ಲಿ ಬಿಡುಗಡೆಯಾಗಿತ್ತು.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಝೆಡ್ ಫ್ಲಿಪ್‌ 4
ನೂತನ ಗ್ಯಾಲಕ್ಸಿ ಝೆಡ್ ಫ್ಲಿಪ್‌ 4  ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ಮಾದರಿಗಳಲ್ಲಿ ಲಭ್ಯವಿದೆ.
8 GB RAM + 128 GB ಆವೃತ್ತಿಗೆ ₹89,999 ಮತ್ತು 8 GB RAM + 256 GB ಮಾದರಿಗೆ ₹94,999 ದರವಿದೆ.
ಬೋರಾ ಪರ್ಪಲ್, ಗ್ರಾಫೈಟ್ ಹಾಗೂ ಪಿಂಕ್ ಗೋಲ್ಡ್ ಬಣ್ಣದಲ್ಲಿ ನೂತನ ಗ್ಯಾಲಕ್ಸಿ ಝೆಡ್ ಫ್ಲಿಪ್‌ 4 ದೊರೆಯಲಿದ್ದು, ಸ್ಯಾಮ್‌ಸಂಗ್ ಸ್ಟೋರ್‌ನಲ್ಲಿ ‘ಬಿಸ್ಪೋಕ್ ಎಡಿಶನ್‘ ಲಭ್ಯವಿದ್ದು, ₹97,999 ಕ್ಕೆ ದೊರೆಯಲಿದೆ.

ಗ್ಯಾಲಕ್ಸಿ ಝೆಡ್ ಫೋಲ್ಡ್4
ನೂತನ ಸ್ಮಾರ್ಟ್‌ಫೋನ್ 12 GB RAM + 256 GB ಮಾದರಿಗೆ ₹1,54,999 ದರ ಹಾಗೂ 12 GB RAM + 512 GB ಆವೃತ್ತಿಗೆ ₹1,64,999 ದರವಿದೆ. ಸ್ಯಾಮ್‌ಸಂಗ್ ಸ್ಟೋರ್ ಎಕ್ಸ್‌ಕ್ಲೂಸಿವ್ ಆಗಿ 12 GB+1 TB ಮಾದರಿ ಲಭ್ಯವಿದ್ದು, ₹1,84,999 ದರ ಇರಲಿದೆ.

ಬೀಜ್, ಗ್ರೇ ಗ್ರೀನ್ ಮತ್ತು ಫ್ಯಾಂಟಮ್ ಬ್ಲ್ಯಾಕ್ ಎಂಬ ಮೂರು ಬಣ್ಣಗಳಲ್ಲಿ ಹೊಸ ಸ್ಮಾರ್ಟ್‌ಫೋನ್ ದೊರೆಯಲಿದೆ ಎಂದು ಕಂಪನಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು