ಮಂಗಳವಾರ, ಜುಲೈ 5, 2022
26 °C

'ಗ್ಯಾಲಕ್ಸಿ ನೋಟ್' ಬ್ರ್ಯಾಂಡ್‌ ಕೈಬಿಟ್ಟ ಸ್ಯಾಮ್‌ಸಂಗ್‌

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

Prajavani

ಬಾರ್ಸಿಲೋನಾ: ದಕ್ಷಿಣ ಕೊರಿಯಾದ ಪ್ರಮುಖ ತಂತ್ರಜ್ಞಾನ ಕಂಪನಿ ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ನೋಟ್‌' ಹೆಸರಿನ ಬಳಕೆಯನ್ನು ಅಧಿಕೃತವಾಗಿ ನಿಲ್ಲಿಸಿದೆ. ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಮುಖ್ಯಸ್ಥ ರೋಹ್‌ ಟೇ ಮೂನ್‌ ಅವರು ಈ ಕುರಿತು ಸ್ಪಷ್ಟಪಡಿಸಿದ್ದಾರೆ.

ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆಯುತ್ತಿರುವ 'ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ 2022' ಪ್ರದರ್ಶನ ಮೇಳದಲ್ಲಿ ಮಾತನಾಡಿರುವ ಅವರು, 'ಗ್ಯಾಲಕ್ಸಿ ನೋಟ್‌ ಇನ್ನು ಮುಂದೆ ಅಲ್ಟ್ರಾ ಆಗಿ ಹೊರಬರಲಿದೆ' ಎಂದು ತಿಳಿಸಿರುವುದಾಗಿ ವರದಿಯಾಗಿದೆ.

ಸ್ಯಾಮ್‌ಸಂಗ್‌ ಫೆಬ್ರುವರಿ 17ರಂದು ಭಾರತದಲ್ಲಿ 'ಗ್ಯಾಲಕ್ಸಿ ಎಸ್‌22 ಅಲ್ಟ್ರಾ' ಬಿಡುಗಡೆ ಮಾಡಿದೆ.

2020ರಲ್ಲಿ ಗ್ಯಾಲಕ್ಸಿ ನೋಟ್‌ ಸರಣಿಯ 'ನೋಟ್‌ 20' ಮತ್ತು 'ನೋಟ್‌ 20 ಅಲ್ಟ್ರಾ' ಬಿಡುಗಡೆಯಾಗಿತ್ತು. ಅನಂತರದಲ್ಲಿ ಕಂಪನಿಯು ಹೊಸ ಮಾದರಿಯ ನೋಟ್‌ ಬಿಡುಗಡೆ ಮಾಡಿಲ್ಲ.

2011ರ ಅಕ್ಟೋಬರ್‌ನಲ್ಲಿ ಸ್ಯಾಮ್‌ಸಂಗ್‌ ಮೊದಲ 'ಗ್ಯಾಲಕ್ಸಿ ನೋಟ್‌' ಅನಾವರಣ ಮಾಡಿತ್ತು. ಆಗ ಐಫೋನ್‌ 4ಎಸ್‌ ಫೋನ್‌ನ ಸ್ಕ್ರೀನ್‌ 3.5 ಇಂಚು ಹಾಗೂ ಗ್ಯಾಲಕ್ಸಿ ಎಸ್‌2 ಫೋನ್‌ನ ಸ್ಕ್ರೀನ್‌ 4.3 ಇಂಚು ಇತ್ತು. ಆ ಸಮಯದಲ್ಲಿ ಬಿಡುಗಡೆಯಾಗಿದ್ದ ನೋಟ್‌, ಅತಿ ದೊಡ್ಡ ಸ್ಕ್ರೀನ್‌ ( 5.3 ಇಂಚು ಸ್ಕ್ರೀನ್‌) ಒಳಗೊಂಡಿತ್ತು. ದೊಡ್ಡ ಗಾತ್ರದ ಸ್ಮಾರ್ಟ್‌ಫೋನ್‌ಗಳನ್ನು ಪ್ರಚುರ ಪಡಿಸುವಲ್ಲಿ ನೋಟ್‌ ಸರಣಿಯು ಪ್ರಮುಖ ಪಾತ್ರವಹಿಸಿದೆ.

ಪ್ರಸ್ತುತ ಭಾರತದಲ್ಲಿ ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ಎಸ್‌22', 8ಜಿಬಿ ರ್‍ಯಾಮ್‌ ಮತ್ತು 128ಜಿಬಿ ಸಂಗ್ರಹ ಸಾಮರ್ಥ್ಯದ ಫೋನ್‌ ಬೆಲೆ ₹72,999 ನಿಗದಿಯಾಗಿದೆ. 8ಜಿಬಿ ರ್‍ಯಾಮ್‌ ಮತ್ತು 256ಜಿಬಿ ಸಂಗ್ರಹ ಸಾಮರ್ಥ್ಯದ ಫೋನ್‌ ಬೆಲೆ ₹76,999 ಇದೆ.

8ಜಿಬಿ ರ್‍ಯಾಮ್‌ ಮತ್ತು 128ಜಿಬಿ ಸಂಗ್ರಹ ಸಾಮರ್ಥ್ಯದ 'ಗ್ಯಾಲಕ್ಸಿ ಎಸ್‌22+' ಫೋನ್ ಬೆಲೆ ₹84,999 ಹಾಗೂ 8ಜಿಬಿ ರ್‍ಯಾಮ್‌ ಮತ್ತು 256ಜಿಬಿ ಸಂಗ್ರಹ ಸಾಮರ್ಥ್ಯದ ಫೋನ್‌ಗೆ ₹88,999 ಬೆಲೆ ನಿಗದಿಯಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌22 ಅಲ್ಟ್ರಾ, 12ಜಿಬಿ ರ್‍ಯಾಮ್‌ ಮತ್ತು 256ಜಿಬಿ ಸಂಗ್ರಹ ಸಾಮರ್ಥ್ಯದ ಫೋನ್‌ಗೆ ₹1,09,999 ಹಾಗೂ 12ಜಿಬಿ ರ್‍ಯಾಮ್‌ ಮತ್ತು 512ಜಿಬಿ ಸಂಗ್ರಹ ಸಾಮರ್ಥ್ಯದ ಫೋನ್‌ಗೆ ₹1,18,999 ಬೆಲೆ ನಿಗದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು