ಮಂಗಳವಾರ, ಸೆಪ್ಟೆಂಬರ್ 28, 2021
24 °C

ಭಾರತೀಯ ಮಾರುಕಟ್ಟೆಗೆ ಬರಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌22 ಸ್ಮಾರ್ಟ್‌ಫೋನ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

DH File Image

ಬೆಂಗಳೂರು: ದೇಶದ ಮಾರುಕಟ್ಟೆಗೆ ಹೊಸದಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಝೀ ಫೋಲ್ಡ್ 3 5G ಮತ್ತು ಗ್ಯಾಲಕ್ಸಿ ಝೀ ಫ್ಲಿಪ್ 3 5G ಸ್ಮಾರ್ಟ್‌ಫೋನ್ ಪರಿಚಯಿಸಿತ್ತು. ಅದರ ಬೆನ್ನಲ್ಲೇ ಹೊಸ ಸರಣಿಯ ಎಸ್22 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.

ಎಸ್‌22 ನೂತನ ಫ್ಲ್ಯಾಗ್‌ಶಿಪ್ ಮಾದರಿಗಳಾಗಿದ್ದು, ಜನವರಿ 2022ರಲ್ಲಿ ದೇಶದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಹೊಸ ಎಸ್‌22 ಸ್ಮಾರ್ಟ್‌ಫೋನ್ ಸರಣಿಯಲ್ಲಿ ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 898 ಪ್ರೊಸೆಸರ್ ಅಳವಡಿಸಲು ಸ್ಯಾಮ್‌ಸಂಗ್ ಮುಂದಾಗಿದೆ. ಫ್ಲ್ಯಾಗ್‌ಶಿಪ್ ಫೋನ್‌ಗಳಲ್ಲಿ ಹೊಸ ಸರಣಿಯ ಪ್ರೊಸೆಸರ್‌ಗಳನ್ನು ಸ್ಯಾಮ್‌ಸಂಗ್ ಬಳಕೆ ಮಾಡುತ್ತದೆ.

ಈ ಮೊದಲು ಸ್ಯಾಮ್‌ಸಂಗ್, ಫ್ಲ್ಯಾಗ್‌ಶಿಪ್ ಫೋನ್‌ಗಳಲ್ಲಿ ಎಕ್ಸಿನೋಸ್ ಪ್ರೊಸೆಸರ್ ಬಳಕೆ ಮಾಡುತ್ತಿತ್ತು.

ಹೊಸ ಸರಣಿಯಲ್ಲಿ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌22, ಎಸ್22 ಪ್ಲಸ್ ಮತ್ತು ಎಸ್22 ಅಲ್ಟ್ರಾ ಮಾದರಿಗಳು ಮಾರುಕಟ್ಟೆಗೆ ಬಿಡುಗಡೆಯಾಗಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು