ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಶೇ 12ರಷ್ಟು ಏರಿಕೆ: ವರದಿ

ಫಾಲೋ ಮಾಡಿ
Comments

ನವದೆಹಲಿ: ಕಳೆದ ವರ್ಷ ದೇಶದಲ್ಲಿ ಒಟ್ಟಾರೆ 16.2 ಕೋಟಿ ಸ್ಮಾರ್ಟ್‌ಫೋನ್ ಮಾರಾಟವಾಗುವ ಮೂಲಕ ಮಾರುಕಟ್ಟೆಯಲ್ಲಿ ಶೇ 12ರಷ್ಟು ಪ್ರಗತಿ ದಾಖಲಾಗಿದೆ.

ಕೋವಿಡ್–19 ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ಹೊರತಾಗಿಯೂ ಮಾರುಕಟ್ಟೆಯಲ್ಲಿ ಏರಿಕೆ ದಾಖಲಾಗಿದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕ್ಯಾನಲಿಸ್ ಹೇಳಿದೆ.

ಲಸಿಕೆ ಯೋಜನೆ, ಮಾರುಕಟ್ಟೆ ಮತ್ತೆ ತೆರೆದುಕೊಂಡಿರುವುದು ಹಾಗೂ ಬೇಡಿಕೆ ಹೆಚ್ಚಳದಿಂದಾಗಿ, ದೇಶದ ಸ್ಮಾರ್ಟ್‌ಫೋನ್ ಮಾರಾಟ ಗರಿಷ್ಠ ಹೆಚ್ಚಳ ಕಂಡುಬಂದಿದೆ. 2022ರಲ್ಲಿಯೂ ಇದು ಮುಂದುವರಿಯುವ ನಿರೀಕ್ಷೆಯಿದೆ ಎಂದು ಕ್ಯಾನಲಿಸ್‌ನ ವಿಶ್ಲೇಷಕ ಸನ್ಯಮ್ ಚೌರಾಸಿಯ ಹೇಳಿದ್ದಾರೆ.

ಮೂರನೇ ತ್ರೈಮಾಸಿಕದಲ್ಲಿ ಹೆಚ್ಚಿನ ಮಾರಾಟ ದಾಖಲಾಗಿದೆ. ಶೇ 21ರಷ್ಟು ಮಾರುಕಟ್ಟೆ ಪಾಲು ಹೊಂದುವ ಮೂಲಕ ಶಓಮಿ ಸ್ಮಾರ್ಟ್‌ಫೋನ್ ಗರಿಷ್ಠ ಸಂಖ್ಯೆಯಲ್ಲಿ ಮಾರಾಟವಾಗಿದ್ದರೆ, ಸ್ಯಾಮ್‌ಸಂಗ್ ಶೇ 19ರಷ್ಟು ಪಾಲು ಪಡೆದು ಎರಡನೇ ಸ್ಥಾನದಲ್ಲಿದೆ.

ಮೂರನೇ ಸ್ಥಾನಕ್ಕೆ ಜಿಗಿದಿರುವ ರಿಯಲ್‌ಮಿ, ದೇಶದಲ್ಲಿ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಶೇ 49ರ ಪ್ರಗತಿ ದಾಖಲಿಸಿದೆ.

ಡಿಜಿಟಲ್ ವಹಿವಾಟು, ವರ್ಕ್‌ ಫ್ರಮ್ ಹೋಮ್ ಮತ್ತು ಆನ್‌ಲೈನ್ ತರಗತಿ ಹೆಚ್ಚಳದಂತಹ ಸಂಗತಿಗಳು ಮಾರುಕಟ್ಟೆಯಲ್ಲಿ ಬೇಡಿಕೆ ಏರಿಕೆಗೆ ಕಾರಣ ಎಂದು ಸಂಸ್ಥೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT