ಗುರುವಾರ , ಜುಲೈ 7, 2022
20 °C

ಸೋನಿ ಸ್ಮಾರ್ಟ್ ಟಿವಿ ಮತ್ತು ಗ್ಯಾಜೆಟ್‌ ಮೇಲೆ ವಿಶೇಷ ಡಿಸ್ಕೌಂಟ್ ಕೊಡುಗೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

SONY DH FILE Image

ಬೆಂಗಳೂರು: ಸೋನಿ ಎಲೆಕ್ಟ್ರಾನಿಕ್ಸ್ ದೇಶದಲ್ಲಿ ವರ್ಷಾಂತ್ಯದ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ.

ಸ್ಮಾರ್ಟ್ ಟಿವಿ ಮತ್ತು ಆಡಿಯೋ ಉತ್ಪನ್ನಗಳ ಮೇಲೆ ಹೆಚ್ಚುವರಿ ಡಿಸ್ಕೌಂಟ್ ಇದ್ದು, ಕ್ಯಾಶ್‌ಬ್ಯಾಕ್ ಕೊಡುಗೆ ಕೂಡ ಇರಲಿದೆ.

ಸೋನಿ ಎಲೆಕ್ಟ್ರಾನಿಕ್ಸ್ ಸ್ಟೋರ್ ಮತ್ತು ಕಂಪನಿಯ ಆನ್‌ಲೈನ್ ಸ್ಟೋರ್, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಜನವರಿ 3ರವರೆಗೆ ಗ್ರಾಹಕರಿಗೆ ಕೊಡುಗೆಯ ಪ್ರಯೋಜನ ದೊರೆಯಲಿದೆ.

ಸೋನಿ ಬ್ರಾವಿಯಾ ಸ್ಮಾರ್ಟ್ ಟಿವಿ ಖರೀದಿಗೆ ಶೇ 30ರವರೆಗೆ ಡಿಸ್ಕೌಂಟ್, ಸೋನಿ ಹೆಡ್‌ಫೋನ್, ಸ್ಪೀಕರ್ ಮತ್ತು ಹೋಮ್ ಥಿಯೇಟರ್ ಖರೀದಿಗೂ ಡಿಸ್ಕೌಂಟ್ ಲಭ್ಯವಾಗಲಿದೆ.

ಬ್ಲೂಟೂತ್ ವೈರ್‌ಲೆಸ್ ಸ್ಪೀಕರ್, ನಾಯ್ಸ್ ಕ್ಯಾನ್ಸಲೇಶನ್ ಹೆಡ್‌ಫೋನ್ ಮೇಲೆ ವರ್ಷಾಂತ್ಯದ ಡಿಸ್ಕೌಂಟ್ ಸೇಲ್ ಕೊಡುಗೆಗಳಿದ್ದು, ಇಎಂಐ, ಕ್ಯಾಶ್‌ಬ್ಯಾಕ್ ಮತ್ತು ವಿಸ್ತರಿತ ವಾರಂಟಿ ಆಫರ್ ಕೂಡ ದೊರೆಯಲಿದೆ ಎಂದು ಕಂಪನಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು