ಬೆಂಗಳೂರು: ಟೆಕ್ನೊ ಸಂಸ್ಥೆಯು ಭಾರತದಲ್ಲಿ ಹೊಸ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಸಂಸ್ಥೆಯ ಅತ್ಯಂತ ಜನಪ್ರಿಯ ಪೋವಾ ಸರಣಿಯ ಫೋನ್ ಇದಾಗಿದ್ದು, ಅದನ್ನು ‘ಟೆಕ್ನೊ ಪೋವಾ ಕರ್ವ್ 5ಜಿ’ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಹೊಸ ಮಾದರಿಯ ಸ್ಮಾರ್ಟ್ಫೋನ್ನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಅಲ್ಟಿಮೇಟ್ ಚಿಪ್ಸೆಟ್, 64-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಇದೆ. ಐಪಿ64-ರೇಟೆಡ್ ವಿನ್ಯಾಸವನ್ನು ಹೊಂದಿದೆ. ದೃಢವಾದ 5,500 ಎಂಎಎಚ್ ಬ್ಯಾಟರಿಯನ್ನು ಹೊಂದಿರುವ ಇದು 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಬೇಸಿಕ್ ಟೆಕ್ನೊ ಪೋವಾ ಕರ್ವ್ 5ಜಿ ಫೋನ್ ₹15,999 ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಇದನ್ನು ಫ್ಲಿಪ್ಕಾರ್ಟ್ನಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಫೋನ್ ₹16,999ಗಳಿಗೆ ಆಫ್ಲೈನ್ ಚಿಲ್ಲರೆ ವ್ಯಾಪಾರಿಗಳ ಮೂಲಕವೂ ಲಭ್ಯವಿರುತ್ತದೆ. ಈ ಸ್ಮಾರ್ಟ್ಫೋನ್ ಮೂರು ಬಣ್ಣಗಳಲ್ಲಿ(ಗೀಕ್ ಬ್ಲಾಕ್, ಮ್ಯಾಜಿಕ್ ಸಿಲ್ವರ್ ಮತ್ತು ನಿಯಾನ್ ಸಯಾನ್) ಲಭ್ಯವಿದೆ. ಜೂನ್ 5ರಿಂದ ಮಾರಾಟ ಪ್ರಾರಂಭವಾಗಲಿದೆ.

ಟೆಕ್ನೊ ಪೋವಾ ಕರ್ವ್ 5G ವೈಶಿಷ್ಟ್ಯಗಳು

* ಗಮನಾರ್ಹವಾದ 6.78 ಇಂಚಿನ ಪೂರ್ಣ-ಎಚ್ಡಿ+ (1,080x2,436 ಪಿಕ್ಸೆಲ್) ಕರ್ವ್ಡ್ ಅಮೊಲ್ಡ್ ಡಿಸ್ಪ್ಲೇ

* 144Hz ರಿಫ್ರೆಶ್ ರೇಟ್

* ಶೇ 93.8ರಷ್ಟು ಸ್ಕ್ರೀನ್ ಟು ಬಾಡಿ ಅನುಪಾತ

* 1,300 ನಿಟ್ಸ್ ಗರಿಷ್ಠ ಹೊಳಪು, ಗೊರಿಲ್ಲಾ ಗ್ಲಾಸ್–5 ಪರದೆ

* 8GB RAM, 128GBರವರೆಗೆ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.