ಗುರುವಾರ , ಜನವರಿ 27, 2022
21 °C

ಗ್ಯಾಜೆಟ್‌ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದ ಟೆಕ್ನೋ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಕಡಿಮೆ ಬೆಲೆಗೆ ಉತ್ತಮ ಫೀಚರ್‌ಗಳಿರುವ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಹೆಸರು ಗಳಿಸಿರುವ ಟೆಕ್ನೋ, ಹೊಸ ಮಾದರಿಯನ್ನು ದೇಶದಲ್ಲಿ ಪರಿಚಯಿಸಿದೆ.

ಟೆಕ್ನೋ ಪಾಪ್ 5 ಸರಣಿಯಲ್ಲಿ ಹೊಸ ಪಾಪ್ 5 ಎಲ್‌ಟಿಇ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ.

5000ಎಂಎಎಚ್ ಬ್ಯಾಟರಿ, 6.52 ಇಂಚಿನ ಎಚ್‌ಡಿ+ ಡಿಸ್‌ಪ್ಲೇ ಈ ಸ್ಮಾರ್ಟ್‌ಫೋನ್ ವಿಶೇಷತೆಯಾಗಿದೆ.

ತಾಂತ್ರಿಕ ವೈಶಿಷ್ಟ್ಯ
ಟೆಕ್ನೋ ಪಾಪ್ 5 ಎಲ್‌ಟಿಇ ಮಾದರಿಯಲ್ಲಿ 6.52 ಇಂಚಿನ ಎಚ್‌ಡಿ+ ಡಾಟ್ ನಾಚ್ ಸಹಿತ ಡಿಸ್‌ಪ್ಲೇ, 5000mAh ಬ್ಯಾಟರಿ ಮತ್ತು 8 ಮೆಗಾಪಿಕ್ಸೆಲ್ ಡ್ಯುಯಲ್ ಹಿಂಬದಿ ಕ್ಯಾಮೆರಾ ಇದೆ. ಹಾಗೂ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ ಎಂದು ಕಂಪನಿ ತಿಳಿಸಿದೆ.

ಆಂಡ್ರಾಯ್ಡ್ 11 ಗೊ ಆಧಾರಿತ HiOS 7.6 ಕಾರ್ಯಚರಣೆ ವ್ಯವಸ್ಥೆ ಇದರಲ್ಲಿದ್ದು, 2 GB RAM ಮತ್ತು 32 GB ಸ್ಟೋರೇಜ್ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ಅಮೆಜಾನ್ ಮೂಲಕ ಜನವರಿ 16ರಿಂದ ಹೊಸ ಟೆಕ್ನೋ ಪಾಪ್ 5 ಎಲ್‌ಟಿಇ ಸ್ಮಾರ್ಟ್‌ಫೋನ್ ದೊರೆಯಲಿದ್ದು, ₹6,299 ಆರಂಭಿಕ ವಿಶೇಷ ದರ ಹೊಂದಿದೆ ಎಂದು ಕಂಪನಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು