ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಮ್ಸನ್‌ ಟಿವಿ: ಭಾರತದಲ್ಲಿ ತಯಾರಿಕೆ ಆರಂಭ

ಅಕ್ಷರ ಗಾತ್ರ

ನವದೆಹಲಿ: ದೇಶಾದ್ಯಂತ ಮೂರನೇ ಹಂತದ ಲಾಕ್‌ಡೌನ್‌ ಜಾರಿಯಲ್ಲಿದ್ದು, ಈ ನಡುವೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೆಲವು ಆರ್ಥಿಕ ಚಟುವಟಿಕೆಗಳ ಪುನರಾರಂಭಕ್ಕೆ ಅವಕಾಶ ಮಾಡಿಕೊಟ್ಟಿವೆ. ಕೊರೊನಾ ವೈರಸ್‌ ಸೋಂಕು ಪ್ರಕರಣಗಳನ್ನು ಆಧರಿಸಿ ವಲಯವಾರು ತಯಾರಿಕಾ ಘಟಕಗಳ ಕಾರ್ಯಾಚರಣೆ ಹಾಗೂ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಫ್ರೆಂಚ್‌ ಎಲೆಕ್ಟ್ರಾನಿಕ್ಸ್‌ ಬ್ರ್ಯಾಂಡ್‌ ಥಾಮ್ಸನ್‌ ಟಿವಿ ಭಾರತದಲ್ಲಿ ಈ ವಾರದಿಂದ ಕಾರ್ಯಾಚರಣೆ ಪುನರಾರಂಭಿಸಲಿದೆ.

ಕೋವಿಡ್–19 ನಿಯಂತ್ರಣಕ್ಕಾಗಿ ವಿಧಿಸಲಾಗಿರುವ ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ಟಿವಿ ಮಾರಾಟ ಪ್ರಕ್ರಿಯೆಯನ್ನು ಥಾಮ್ಸನ್‌ ಫ್ಲಿಪ್‌ಕಾರ್ಟ್‌ ಮೂಲಕ ಕಳೆದ ವಾರದಿಂದ ಆರಂಭಿಸಿದೆ. ಭಾರತದಾದ್ಯಂತ 8,000 ಪಿನ್‌–ಕೋಡ್‌ಗಳ ವ್ಯಾಪ್ತಿಯಲ್ಲಿ ಕಂಪನಿಯ ಗ್ರಾಹಕ ಸೇವೆಗಳು, ಮಾರಾಟ, ಸರಕು ಸಂಗ್ರಹ ಹಾಗೂ ಇನ್‌ಸ್ಟಲೇಷನ್‌ ಕಾರ್ಯಾಚರಣೆಗಳನ್ನು ಸಿಬ್ಬಂದಿ ನಡೆಸುತ್ತಿದ್ದಾರೆ.

ಥಾಮ್ಸನ್‌ ಟಿವಿ ತಯಾರಿಕಾ ಕಾರ್ಯಾಖಾನೆಗಳಲ್ಲಿ ತಯಾರಿಕಾ ಪ್ರಕ್ರಿಯೆಗಳಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದ್ದು, ಸಿಬ್ಬಂದಿಯ ಆರೋಗ್ಯ ಹಾಗೂ ಹೆಚ್ಚಿನ ಸುರಕ್ಷತೆಯ ಕಡೆಗೆ ಗಮನ ಹರಿಸಲಾಗಿದೆ. ಅಂತರ ಕಾಯ್ದುಕೊಳ್ಳುವುದು ಹಾಗೂ ಸೋಂಕು ನಿವಾರಣೆ ಸಲಹೆಗಳನ್ನು ಅನುಸರಿಸುವ ಜೊತೆಗೆ ಕನಿಷ್ಠ ಸಂಖ್ಯೆಯ ಸಿಬ್ಬಂದಿಯೊಂದಿಗೆ ಹಂತ ಹಂತವಾಗಿ ಕಾರ್ಯಾಚರಣೆ ನಡೆಯಲಿದೆ ಎಂದು ಕಂಪನಿ ತಿಳಿಸಿದೆ.

ಭಾರತದ 14 ಲಕ್ಷ ಕುಟುಂಬಗಳು ಇನ್ನೂ ಟಿವಿ ಹೊಂದಿಲ್ಲ. ಕೈಗೆಟುಕುವ ದರದ ಟಿವಿಗಳಿಗೆ ದೇಶದಲ್ಲಿ ಉತ್ತಮಮಾರುಕಟ್ಟೆ ಹೊಂದಿದೆ. ಆರ್ಥಿಕತೆ ಚೇತರಿಕೆಯಲ್ಲಿ ತಯಾರಿಕಾ ಹಂತ ಉತ್ತೇಜನ ನೀಡಲಿದೆ. 'ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಆನ್‌ಲೈನ್‌ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ' ಎಂದು ಸೂಪರ್‌ ಪ್ಲಾಸ್ಟ್ರೋನಿಕ್ಸ್‌ ಪ್ರೈವೇಟ್‌ ಲಿಮಿಟೆಡ್‌ (ಎಸ್‌ಪಿಪಿಎಲ್‌) ಸಿಇಒ ಅವನೀತ್‌ ಸಿಂಗ್‌ ಮಾರ್ವಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT