ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲಿಕ್ಸ್ ಸ್ಮಾರ್ಟ್‌ವಾಚ್ 2.0 ಬಿಡುಗಡೆ ಮಾಡಿದ ಟೈಮೆಕ್ಸ್: ಬೆಲೆ ವಿವರ ಇಲ್ಲಿದೆ..

ಅಕ್ಷರ ಗಾತ್ರ

ಬೆಂಗಳೂರು: ದೇಶದ ಸ್ಮಾರ್ಟ್‌ವಾಚ್ ಮಾರುಕಟ್ಟೆಗೆ ಹೊಸತೊಂದು ಮಾದರಿ ಪರಿಚಯಿಸಲ್ಪಟ್ಟಿದೆ. ಟೈಮೆಕ್ಸ್, ಹೆಲಿಕ್ಸ್ ಸ್ಮಾರ್ಟ್‌ವಾಚ್ 2.0 ಬಿಡುಗಡೆಯಾಗಿದ್ದು, ಅಮೆಜಾನ್ ಇಂಡಿಯಾ ಮೂಲಕ ಲಭ್ಯವಾಗಲಿದೆ.

ತಾಪಮಾನ ಸೆನ್ಸಾರ್, ಹೃದಯ ಬಡಿತ ಮಾಪನ ಮತ್ತು ಆಕ್ಟಿವಿಟಿ ಟ್ರ್ಯಾಕರ್ ಜತೆಗೆ ಟೆಲಿಮೆಡಿಸಿನ್ ಮತ್ತು ಇತರ ಹಲವು ಆಕರ್ಷಕ ಫೀಚರ್‌ಗಳನ್ನು ಟೈಮೆಕ್ಸ್ ಸ್ಮಾರ್ಟ್‌ವಾಚ್ ಒಳಗೊಂಡಿದೆ.

ಹಸಿರು, ಬಿಳಿ, ಕಪ್ಪು ಮತ್ತು ಗುಲಾಬಿ ಬಣ್ಣಗಳಲ್ಲಿ ನೂತನ ಟೈಮೆಕ್ಸ್ ಹೆಲಿಕ್ಸ್ ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ದೊರೆಯಲಿದ್ದು, ₹3,999 ದರ ಹೊಂದಿದೆ.

24 ವಿವಿಧ ವಾಚ್ ಫೇಸ್, IP68 ರೇಟಿಂಗ್ ವಾಟರ್ ರೆಸಿಸ್ಟ್, ಯೋಗ ಸಹಿತ 10 ವಿವಿಧ ಕ್ರೀಡೆಗಳ ಟ್ರ್ಯಾಕಿಂಗ್ ಇದರ ವಿಶೇಷತೆಯಾಗಿದೆ.

ಹೊಸ ಟೈಮೆಕ್ಸ್ ಹೆಲಿಕ್ಸ್ ಸ್ಮಾರ್ಟ್‌ವಾಚ್ 2.0, ಮೂರು ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಆಗಲಿದ್ದು, 15 ದಿನಗಳವರೆಗಿನ ಬ್ಯಾಟರಿ ಬಾಳಿಕೆ ಹೊಂದಿದೆ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT